ಸಂಗೀತ ವಿವಿಗೆ ಗಂಗೂಬಾಯಿ ಹೆಸರು ಬೇಡ
ಬೆಂಗಳೂರು,
ಫೆ. 17 : ಮೈಸೂರಿನ ಸಂಗೀತ ವಿಶ್ವವಿದ್ಯಾಲಯಕ್ಕೆ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಎಂದು ಮಾಡಿರುವುದು ಸರಿಯಲ್ಲ ಎಂದು ಸಂಗೀತ ವಿದ್ವಾನ್ ಆರ್ ಕೆ ಶ್ರೀಕಂಠನ್ ಅಭಿಪ್ರಾಯಪಟ್ಟಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಂಗೂಬಾಯಿ ಶ್ರೇಷ್ಠ ಗಾಯಕಿ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಈಗಾಗಲೇ ಅವರ ಹೆಸರಿನ ವಿಶ್ವವಿದ್ಯಾಲಯವಿದೆ ಎಂದರು. ಗಂಗೂಬಾಯಿ ಅದ್ಭುತ ಗಾಯಕಿಯಾಗಿದ್ದರೂ ಅವರು ಶಿಷ್ಯ ಪರಂಪರೆಯನ್ನು ಮುಂದುವರಿಸಿಲ್ಲ. ಅವರ ಮಟ್ಟಕ್ಕೆ ಹಾಡುವ ಒಬ್ಬ ಗಾಯಕರನ್ನೂ ಸೃಷ್ಟಿಸಿಲ್ಲ ಪ್ರಾದೇಶಿಕವಾಗಿ ಮೈಸೂರಿಗೆ ಅವರ ಕೊಡುಗೆ ಶೂನ್ಯ. ಮೈಸೂರಿನಲ್ಲಿ ಹುಟ್ಟಿ ಸಾಧನೆ ಮಾಡಿದ, ಶಿಷ್ಯರನ್ನು ಹೊಂದಿರುವ ಸಂಗೀತಗಾರರಿದ್ದಾರೆ. ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಡಬೇಕು ಎಂದು ಶ್ರೀಕಂಠನ್ ಒತ್ತಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಶ್ವವಿದ್ಯಾಲಯಕ್ಕೆ
ಹೆಸರಿಡುವಾಗ ಸಾಂದರ್ಭಿಕ ಭಾವಾವೇಶಕ್ಕೆ ಒಳಗಾಗಿ ತಜ್ಞರ ಸಮಿತಿಯೊಂದನ್ನು ರಚಿಸಿ ಹೆಸರಿಡಲು ಸಲಹೆ ನೀಡಿದರು. ಗಂಗೂಬಾಯಿ ಬದಲು ವಿದ್ವಾನ್ ಆರ್ ಕೆ ಪದ್ಮನಾಭ್, ಎಂ ಎಸ್ ಶೀಲಾ ಅವರ ಹೆಸರಿಡುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.











Click it and Unblock the Notifications