ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ

NT Abru and Others
ಮೈಸೂರು, ಫೆ. 12: ಕರ್ನಾಟಕ ರಾಜ್ಯದಲ್ಲಿ ಯೊಸ ಪಿಂಚಣಿ ಯೋಜನೆಗೊಳಪಡುವ ಸರ್ಕಾರಿ ನೌಕರರ ಸಂಖ್ಯೆ 1.4.2006ರ ದಿನಾಂಕದಲ್ಲಿ 65 ಸಾವಿರ ಇದ್ದಾರೆ ಎಂದು ಕರ್ನಾಟಕ ರಾಜ್ಯ ಖಜಾನೆ ನಿರ್ದೇಶಕಿ ಎನ್.ಟಿ. ಅಬ್ರೂ ಅವರು ತಿಳಿಸಿದ್ದಾರೆ. ನಗರದಲ್ಲಿ ಹೊಸ ಪಿಂಚಣಿ ಯೋಜನೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ರಾಜ್ಯ ಖಜಾನೆ ಇಲಾಖೆ ವತಿಯಿಂದ ಮೈಸೂರು ವಿಭಾಗದ ಎಲ್ಲಾ ಜಿಲ್ಲಾ ಖಜಾನಾಧಿಕಾರಿಗಳು, ಉಪಖಜಾನಾಧಿಕಾರಿಗಳು, ಸಿಬ್ಬಂದಿ ವರ್ಗದವರಿಗಾಗಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ಮೈಸೂರು ವಿಭಾಗದ ಮೈಸೂರು, ಮಂಗಳೂರು, ಉಡುಪಿ, ಮಂಡ್ಯ, ಚಿಕ್ಕಮಗಳೂರು, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಜಿಲ್ಲಾ ಖಜಾನಾಧಿಕಾರಿಗಳು, ಉಪಖಜಾನಾಧಿಕಾರಿಗಳು, ಸಿಬ್ಬಂದಿ ವರ್ಗ ಸೇರಿದಂತೆ ಸುಮಾರು 150೦ಕ್ಕೂ ಹೆಚ್ಚಿನ ಸಿಬ್ಬಂದಿ ಭಾಗವಹಿಸಿದ್ದಾರೆ.

ಈ ಯೋಜನೆಯನ್ವಯ ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ.10ರಷ್ಟನ್ನು ಪ್ರತಿ ತಿಂಗಳ ಸಂಬಳದಿಂದ ಕೊಡಮಾಡಲಿದ್ದು ಅಷ್ಟೆ ಪ್ರಮಾಣದ ಮೊತ್ತವನ್ನು ರಾಜ್ಯ ಸರ್ಕಾರ ಸಹ ನೌಕರರ ಖಾತೆಗೆ ಕೊಡುಗೆ ನೀಡಲಿದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ (ಪಿ ಎಫ್ ಆರ್ ಡಿ ಎ)ದ ನೀತಿ ನಿಯಮಗಳನುಸಾರ ಅನುಷ್ಠಾನಗೊಳಿಸಲಾಗುತ್ತಿದ್ದು ಈ ಸಂಸ್ಥೆಯು ಭಾರತೀಯ ಸ್ಟೇಟ್ ಬ್ಯಾಂಕ್ ಪಿಂಚಣಿ ನಿಧಿ, ಯುಟಿಐ ಪೆನ್‌ಷನ್ ಸೆಲ್ಯೂಷನ್ಸ್ ಮತ್ತು ಭಾರತೀಯ ಜೀವ ವಿಮಾ ನಿಗಮ ಪೆನ್‌ಷನ್ ನಿಧಿಗಳನ್ನು ಪೆನ್‌ಷನ್ ಫಂಡ್ ಮ್ಯಾನೇಜರ್ಸ್ ಎಂದು ಪರಿಗಣಿಸಿದ್ದು, ನೌಕರರು ಮತ್ತು ಸರ್ಕಾರದ ಪಿಂಚಣಿ ಯೋಜನೆ ಹಣವನ್ನು ಇತರೆ ಹೂಡಿಕೆಗಳಲ್ಲಿ ತೊಡಗಿಸುವ ಮೂಲಕ ಪಿಂಚಣಿ ಹಣ ಅಭಿವೃದ್ಧಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುತ್ತಿದೆ ಎಂದರು.

ಈ ಯೋಜನೆಯ ಎಲ್ಲಾ ದಾಖಲಾತಿಗಳನ್ನು ಕಾಲಕಾಲಕ್ಕೆ ಕಾಪಾಡುವ ಕೆಲಸವನ್ನು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ (ಸಿ ಆರ್ ಎ) ಆಗಿ ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್ ಎಸ್ ಡಿ ಎಲ್) ವಹಿಸಿಕೊಂಡಿದ್ದು, ಬ್ಯಾಂಕ್ ಆಫ್ ಇಂಡಿಯಾ ಮೂಲಕ ಹಣದ ವಹಿವಾಟು ನಡೆಯುತ್ತದೆ. ನೂತನ ಪಿಂಚಣಿ ಯೋಜನೆ ಎಲ್ಲಾ ವಹಿವಾಟುಗಳ ಮೇಲುಸ್ತುವಾರಿಯನ್ನು ಹಾಗೂ ನೌಕರರು ಹಾಗೂ ನೂತನ ಪಿಂಚಣಿ ನಿಧಿ ಟ್ರಸ್ಟ್‌ನ ನಡುವೆ ಖಜಾನೆ ಇಲಾಖೆ ನೋಡಲ್ ಅಧಿಕಾರಿಯಂತೆ ಕಾರ್ಯ ನಿರ್ವಹಿಸಲಿದೆ ಎಂದು ನಿರ್ದೇಶಕರು ನೂತನ ಪಿಂಚಣಿ ಯೋಜನೆ ಕುರಿತು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+