ಗೋಹತ್ಯೆ ನಿಷೇಧ ಬೇಡ, ದೇವೇಗೌಡ
ಬೆಂಗಳೂರು,
ಫೆ. 11 : ಗೋಮಾಂಸವನ್ನು ಬರೀ ಮುಸಲ್ಮಾನರು ಮಾತ್ರ ತಿನ್ನುತ್ತಿಲ್ಲ. ದಲಿತ, ಹಿಂದುಳಿದ ಮತ್ತು ಕ್ರೈಸ್ತ ಜನಾಂಗದ ಜನರೂ ತಿನ್ನುತ್ತಿದ್ದಾರೆ. ಗೋ ಹತ್ಯೆ ನಿಷೇಧದಿಂದ ದೊಡ್ಡ ಅನಾಹುತ ಸಂಭವಿಸಲಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ. id="toptextpromo">ಪಕ್ಷದ
ಕಚೇರಿಯಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧದಂತ ಕೆಲಸಕ್ಕೆ ಸರಕಾರ ಕೈಹಾಕಬಾರದು. ಇದೊಂದು ಅಪಾಯಕಾರಿ ನಿರ್ಧಾರ. ಸರಕಾರ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಇದರಿಂದ ಚರ್ಮೋಧ್ಯಮಕ್ಕೂ ಹೊಡೆತ ಬೀಳಲಿದೆ ಎಂದು ದೇವೇಗೌಡ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತನ್ನ
ಸಂಖ್ಯಾಬಲದಿಂದ ಬಿಜೆಪಿ ಈ ಕಾಯ್ದೆ ಜಾರಿಗೆ ತಂದರೂ ರಾಜ್ಯಪಾಲ ಭಾರದ್ವಾಜ್ ಅವರು ಈ ವಿವಾದಕಾರಿ ಕಾಯ್ದೆಗೆ ಅಂಕಿತ ಹಾಕಬಾರದೆಂದು ಅವರು ಆಗ್ರಹಿಸಿದ್ದಾರೆ. 'ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ' ಮಸೂದೆ ತಿದ್ದುಪಡಿ ವಿಧೇಯಕ್ಕೆ ರಾಜ್ಯ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿತ್ತು.











Click it and Unblock the Notifications