ನೂರ್ ಫಾತೀಮಾಗೆ (ಅಶ್ವಿನಿ) ಜಯ!

 No Jihad only Love - HC
ಬೆಂಗಳೂರು, ಜ. 21 : "ಪ್ರೇಮ ಪ್ರಕರಣಗಳಲ್ಲಿ ಪ್ರೇಮಿಗಳ ಭವಿಷ್ಯವನ್ನು ಕಾಲವೇ ನಿರ್ಧರಿಸುತ್ತದೆ. ಅದಕ್ಕಿಂತ ಬೇರೆ ನ್ಯಾಯಾಧೀಶ ಇನ್ನೊಂದಿಲ್ಲ..." ಲವ್ ಜಿಹಾದ್ ತಿರುವು ಪಡೆದುಕೊಂಡಿದ್ದ ಶಿವಮೊಗ್ಗದ ಮುಸ್ಲಿಂ ಧರ್ಮದ ಯುವಕ ಹಾಗೂ ಹಿಂದೂ ಧರ್ಮದ ಯುವತಿಯೊಬ್ಬಳ ಪ್ರೇಮ ಪ್ರಕರಣ ವಿಚಾರಣೆ ವೇಳೆ ಹೈಕೋರ್ಟ್ ತೆಗೆದುಕೊಂಡ ನಿಲುವಿದು.

ಯುವತಿ ಅಶ್ವಿನಿ ಅಲಿಯಾಸ್ ನೂರ್ ಫಾತೀಮಾ (21) ಹಾಗೂ ಯುವಕ ಇರ್ಫಾನ್ ಪ್ರೇಮ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನವೆಂಬರ್ 4 ರಂದು ನಾಪತ್ತೆಯಾಗಿರುವ ಮಗಳನ್ನು ಹಾಜರುಪಡಿಸುವಂತೆ ಕೋರಿ ಆಕೆಯ ತಂದೆ ವೈ ಎಸ್ ಶ್ರೀನಿವಾಸ ಅವರು ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಶ್ರೀಧರಮೂರ್ತಿ ಹಾಗೂ ಸುಭಾಷ್ ಆದಿ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಯುವತಿ ವಯಸ್ಕಳಾಗಿದ್ದು, ಯುವಕನನ್ನು ಪ್ರೀತಿಸಿ ಸ್ವಇಚ್ಛೆಯಿಂದ ಮದುವೆಯಾಗಿದ್ದಾಳೆ. ಆದ್ದರಿಂದ ಇದು ಅಪ್ಪಟ ಪ್ರೀತಿ. ಲವ್ ಜಿಹಾದ್ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಕೋರ್ಟ್ ಈ ಹಿಂದೆ ನೀಡಿದ್ದ ಆದೇಶದ ಮೇರೆಗೆ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಮುಸ್ಲಿಂ ಧರ್ಮದಂತೆ ಬುರ್ಖಾ ಧರಿಸಿ ಬಂದಿದ್ದ ಯುವತಿ, ನಾನು ಸ್ವಇಚ್ಛೆಯಿಂದ ಇರ್ಫಾನನನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದೇನೆ. ನಮ್ಮಬ್ಬಿರ ಪ್ರೇಮಕ್ಕೆ ನನ್ನ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು ಮನೆ ಬಿಟ್ಟು ಹೋಗಿ ಆತನನ್ನು ವಿವಾಹವಾಗಿದ್ದೇನೆ ಎಂದು ನೂರು ಫಾತೀಮಾ ಸ್ಪಷ್ಟಪಡಿಸಿದರು. ಶಿವಮೊಗ್ಗದ ಈ ಪ್ರೇಮಿಗಳಿಗೆ ಬೆಂಬಲ ನೀಡುತ್ತಾ ಬಂದಿದ್ದ ಪತ್ರಕರ್ತ ರವಿ ಬೆಳಗೆರೆ ಹೈ ಕೋರ್ಟ್ ನಲ್ಲಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಇದ್ದು, ಕೋರ್ಟ್ ತೀರ್ಪು ಆಲಿಸಿ, ಹರ್ಷ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+