ಐಪಿಎಲ್-3 ಹರಾಜು ಬಾಂಡ್ ಮೇಲೆ ಎಲ್ಲರ ಕಣ್ಣು
ಮುಂಬೈ,
ಜ. 18: ಐಪಿಎಲ್-3 ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡುವ ಆಟಗಾರರ ಹರಾಜು ಪ್ರಕ್ರಿಯೆಗೆ ಮಂಗಳವಾರ ಚಾಲನೆ ದೊರೆಯಲಿದೆ. ವಿವಿಧ ದೇಶಗಳ ಸುಮಾರು 60 ಕ್ಕೂ ಹೆಚ್ಚು ಮಂದಿ ಆಟಗಾರರ ಮೇಲೆ ಬಿಡ್ ಮಾಡಲಾಗುತ್ತದೆ. ನ್ಯೂಜಿಲ್ಯಾಂಡ್ ನ ವೇಗಿ ಶೇನ್ ಬಾಂಡ್ ಮೇಲೆ ಎಲ್ಲಾ ಪ್ರಾಂಚೈಸಿಗಳ ಕಣ್ಣಿದ್ದು, ಪ್ರಮುಖವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ ತಂಡ ಉತ್ಸುಕತೆ ತೋರಿದೆ ಎನ್ನಲಾಗಿದೆ. id="toptextpromo">ಪ್ರತಿ
ಐಪಿಎಲ್ ತಂಡಗಳು ಎರಡು ಅಥವಾ ಮೂರು ಆಟಗಾರರನ್ನು ಮಾತ್ರ ತಮ್ಮ ತೆಕ್ಕೆಗೆ ಪಡೆಯುವ ಅವಕಾಶವಿರುತ್ತದೆ.ಈ ಪಟ್ಟಿಯಲ್ಲಿ ನ್ಯೂಜಿಲ್ಯಾಂಡಿನ ಶೇನ್ ಬಾಂಡ್ ,ವೆಸ್ಟ್‌ಇಂಡೀಸ್‌ನ ಟ್ರಿನಿಡಾಡ್ ಹಾಗೂ ಟಾಬ್ಯಾಗೋದ ಕಿರೋನ್ ಪೋಲಾರ್ಡ್ ,ಪಾಕಿಸ್ತಾನದ ಶಾಹಿದ್ ಆಫ್ರಿದಿ, ಉಮರ್ ಗುಲ್, ಮಹಮದ್ ಅಮೀರ್, ಇಂಗ್ಲೆಂಡ್ ನ ಮಾಂಟೆ ಪನೀಸರ್, ಜೇಮ್ಸ್ ಫೋಸ್ಟರ್, ಆಸ್ಟ್ರೇಲಿಯಾದ ಪೀಟರ್ ಸಿಡ್ಲ್, ಗೌಗ್ ಬೊಲಿಂಗರ್ ಮುಂತಾದವರು ಬಿಡ್ ನಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆಟಗಾರರು
ತಲಾ 50 ಸಾವಿರ ಡಾಲರ್‌ನಿಂದ ಒಂದು ಲಕ್ಷ ಡಾಲರ್‌ಗಳವರೆಗೆ ಬಿಕರಿಯಾಗಲಿದ್ದಾರೆಂದು ನಿರೀಕ್ಷಿಸಲಾಗಿದೆ.ಕಳೆದ ವರ್ಷ ಮುಂಬೈ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಆಟಗಾರರನ್ನು ಐಪಿಲ್ -3 ರಿಂದ ಹೊರಗಿಡುವುದಾಗಿ ಐಪಿಎಲ್ ಕಮೀಷನರ್ ಲಲೀತ್ ಮೋದಿ ಹೇಳಿದ್ದರು. ಆದರೆ, ಈಗ ಪಾಕಿಸ್ತಾನಿ ಆಟಗಾರರಿಗೂ ಹರಾಜಿನಲ್ಲಿ ಅವಕಾಶ ಕಲ್ಪಿಸಲಾಗಿದೆ.











Click it and Unblock the Notifications