ಐಪಿಎಲ್3ಗೆ ಆಸ್ಟ್ರೇಲಿಯನ್ನರ ಹಿಂದೇಟು

ಕಳೆದ ಒಂದು ವರ್ಷದಿಂದ ನಿರಂತರವಾಗಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಕಳೆದ ವಾರವಷ್ಟೇ ನಿತಿನ್ ಗರ್ಗ್ ಎಂಬ ವಿದ್ಯಾರ್ಥಿಯನ್ನು ಕೆಲ ಕಿಡಿಗೇಡಿಗಳು ಹತ್ಯೆ ಮಾಡಿರುವುದು ಖಂಡನಾರ್ಹ ಸಂಗತಿಯಾಗಿದೆ. ಈ ಎಲ್ಲ ಬೆಳವಣಗೆಗಳ ಹಿನ್ನೆಲೆಯಲ್ಲಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಆಸೀಸ್ ಕೃತ್ಯದ ವಿರುದ್ಧ ಗುಡುಗಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೇಲಿನ ದಾಳಿ ನಿಲ್ಲುವವರೆಗೂ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಆಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ಠಾಕ್ರೆ ಅವರ ಹೇಳಿಕೆಯಿಂದ ಆಸ್ಟ್ರೇಲಿಯಾದ ಆಟಗಾರರು ರಕ್ಷಣೆ ಸಂಬಂಧಿಸಿದಂತೆ ಐಪಿಎಲ್ ನ ಮೂರನೇ ಆವೃತ್ತಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಐಪಿಎಲ್ ನಲ್ಲಿ ಆಸ್ಟ್ರೇಲಿಯಾದ ಸುಮಾರು 30 ಆಟಗಾರರು ಆಡುತ್ತಿದ್ದಾರೆ. ಭಾರತದಲ್ಲಿ ನಡೆಯಲಿರುವ ಐಪಿಎಲ್ ನಲ್ಲಿ ಪಾಲ್ಗೊಳ್ಳಲು ತುಂಬಾ ಸಂತಸ ಎನಿಸುತ್ತದೆ. ಆದರೆ, ರಾಜಕೀಯ ಪಕ್ಷವೊಂದು ಎಚ್ಚರಿಕೆ ನೀಡಿರುವುದು, ಐಪಿಎಲ್ ನಲ್ಲಿ ಆಡಬೇಕೇ, ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಗಿಲ್ ಕ್ರಿಸ್ಟ್ ದಿ ಟೆಲಿಗ್ರಾಫ್ ವರದಿ ಮಾಡಿದೆ.
ವಿಡಿಯೋ: ಕಂಕಣ ಗ್ರಹಣ, ಸೌರವ್ಯೂಹದ ಮನಮೋಹಕ ಚಮತ್ಕಾರ












Click it and Unblock the Notifications