ಉಪಲೋಕಾಯುಕ್ತರಾಗಿ ಬನ್ನೂರಮಠ?

ನ್ಯಾಯಮೂರ್ತಿ ಪತ್ರಿ ಬಸವನಗೌಡ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನ ಭರ್ತಿಗೆ ಅರ್ಹ ನ್ಯಾಯಮೂರ್ತಿಗಳ ಶೋಧ ನಡೆದಿದೆ. ಈ ತಿಂಗಳ 20 ರಂದು ಕೇರಳ ಹೈಕೋರ್ಟ್ ನಿಂದ ನಿವೃತ್ತಿಯಾಗಲಿರುವ ಎಸ್ ಆರ್ ಬನ್ನೂರಮಠ ಅವರ ಹೆಸರು ಮುಂಚೂಣಿಯಲ್ಲಿದೆ. ಲಭ್ಯ ಮಾಹಿತಿಗಳ ಪ್ರಕಾರ ಉಪಲೋಕಾಯುಕ್ತರಾಗಿ ಬನ್ನೂರಮಠ ನೇಮಕವಾಗುವುದು ಬಹುತೇಕ ಖಚಿತ ಎಂದು ಕಾನೂನು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಬನ್ನೂರಮಠ ಅವರ ಕಳೆದ ಏಳು ತಿಂಗಳ ಹಿಂದೆ ಕೇರಳ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.












Click it and Unblock the Notifications