ಹಣಕೋಣದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಲ್ಲ
ಕಾರವಾರ,
ಜ. 3: ಇಲ್ಲಿನ ಹಣಕೋಣದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಉಷ್ಣ ವಿದ್ಯುತ್ ಸ್ಥಾವರ ಯೋಜನೆ ಕೈಬಿಟ್ಟಿರುವ ಇಂಡ್ ಭಾರತ್ ಪವರ್ ಲಿಮಿಟೆಡ್, ತಮಿಳುನಾಡಿನ ತೂತುಕುಡಿಯಲ್ಲಿ ಸ್ಥಾವರ ನಿರ್ಮಿಸಲು ಮುಂದಾಗಿದೆ. ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಸಮಿತಿ ಮತ್ತು ಭಾರತ್ ಪವರ್ ಲಿ. ಕಂಪನಿ ಶನಿವಾರ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ವಾಸುರಾವ್ ಈ ವಿಷಯ ಬಹಿರಂಗಪಡಿಸಿದರು. id="toptextpromo">ಸಾರ್ವಜನಿಕರ
ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ಥಾವರ ನಿರ್ಮಿಸುವ ನಿರ್ಧಾರ ಕೈ ಬಿಡಲಾಗಿದೆ. ಬದಲಾಗಿ ರೆಸಾರ್ಟ್, ಮೆಡಿಕಲ್ ಕಾಲೇಜು ಹಾಗೂ ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಕಂಪನಿ ಆಸಕ್ತಿ ತೋರಿದೆ. ಈ ಸಂಬಂಧ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಾವರ ನಿರ್ಮಾಣ ಹಿನ್ನೆಲೆಯಲ್ಲಿ ದಾಖಲಿಸಿದ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಘೋಷಿಸಿದರು. id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಸ್ಥಾವರ ನಿರ್ಮಾ ಣಕ್ಕೆ ಪರವಾನಗಿ ಪಡೆದಿಲ್ಲ ತಪ್ಪು ಮಾಹಿತಿ ನೀಡಿದವರು ನಾವಲ್ಲ, ಅರಣ್ಯ ಇಲಾಖೆ. ಪರಿಸರ ಸಚಿವಾಲಯ ಪರವಾನಗಿ ನೀಡುವಾಗ ಅರಣ್ಯ ಇಲಾಖೆ ವರದಿ ಯನ್ನು ಪರಿಗಣಿಸುತ್ತದೆಯೇ ವಿನಾ ನಮ್ಮ ವರದಿಯನ್ನಲ್ಲ' ಎಂದರು. ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟಗಾರರ ಮೇಲೆ ಜು. 30 ರಂದು ನಡೆದ ಪೊಲೀಸ್ ದೌರ್ಜನ್ಯಕ್ಕೂ ತಮ್ಮ ಕಂಪನಿಗೂ ಸಂಬಂಧವಿಲ್ಲ. ತಮ್ಮ ಉದ್ದೇಶ ಇಲ್ಲಿ ಉಷ್ಣ ಸ್ಥಾವರ ಸ್ಥಾಪಿಸುವುದಾಗಿತ್ತೇ ಹೊರತು ಯಾರ ಮೇಲೂ ದೌರ್ಜನ್ಯ ಮಾಡುವುದಾಗಿರಲಿಲ್ಲ ಎಂದು ಅವರು ತಿಳಿಸಿದರು.











Click it and Unblock the Notifications