ತೆಲಂಗಾಣ ಪ್ರತ್ಯೇಕ ರಾಜ್ಯ : ಜ.5 ರಂದು ಸರ್ವಪಕ್ಷಗಳ ಸಭೆ
ಹೈದರಾಬಾದ್,
ಡಿ. 31 : ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಕೇಂದ್ರ ಸರಕಾರ ತೀರ್ಮಾನವನ್ನು ಸ್ವಾಗತಿಸಿರುವ ತೆಲಂಗಾಣ ಪ್ರದೇಶದ 13 ಸಚಿವರು ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ. ಆದರೆ, ರಾಯಲಸೀಮಾ ಮತ್ತು ಕರಾವಳಿ ಆಂಧ್ರದಲ್ಲಿ ಪ್ರತ್ಯೇಕ ರಾಜ್ಯಕ್ಕೆ ವಿರೋಧಿಸಿ ಪ್ರತಿಭಟನೆಗಳು ಮುಂದುವರಿದಿವೆ. id="toptextpromo">ತೆಲಂಗಾಣ
ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸುವ ಬಗ್ಗೆ ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಜೊತೆಗೆ ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಶ್ರೀನಿವಾಸ್ ಅವರ ಮನವಿ ಮೇರೆಗೆ ರಾಜೀರಾಮೆ ಪತ್ರವನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಸಚಿವೆ ಗೀತಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತೆಲಂಗಾಣ
ಪ್ರತ್ಯೇಕ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಅವರು ಆಂಧ್ರಪ್ರದೇಶದ ಎಂಟು ಪಕ್ಷಗಳ ಮುಖ್ಯಸ್ಥರನ್ನು ಜನವರಿ 5 ರಂದು ನವದೆಹಲಿಯಲ್ಲಿ ಚರ್ಚೆಗೆ ಕರೆದಿದ್ದಾರೆ. ನೂತನ ತೆಲಂಗಾಣ ರಾಜ್ಯಕ್ಕಾಗಿ ಕಳೆದ 23 ರಂದು ಈ ಪ್ರದೇಶದ 13 ಸಚಿವರು ರಾಜೀನಾಮೆ ನೀಡಿದ್ದರು. ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ ಸಿ ಚಂದ್ರಶೇಖರ್ ರಾವ್ ಅವರ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹಕ್ಕೆ ಮಣಿದು ಕೇಂದ್ರ ಸರಕಾರ ತೆಲಂಗಾಣ ರಾಜ್ಯ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಕೇಂದ್ರದ ನಿರ್ಧಾರಕ್ಕೆ ರಾಯಲಸೀಮಾ ಮತ್ತು ಕರಾವಳಿ ಆಂಧ್ರದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.











Click it and Unblock the Notifications