ಭಾರತೀಯರ ಅಚ್ಚುಮೆಚ್ಚಿನ ವೆಬ್‌ಸೈಟ್‌ಗಳು

Most popular top 10 news websites in india
ಬೆಂಗಳೂರು, ಡಿ. 15 : ಭಾರತದಲ್ಲಿ ಅಂತರ್ ಜಾಲದ ಬಳಕೆ ಹಾಗೂ ಅದರ ಅಂಕಿಅಂಶಗಳನ್ನು ಕುರಿತ ಅಧ್ಯಯನ ಮತ್ತು ವರದಿ ತಯಾರಿಸುವ ಕಾಂಸ್ಕೋರ್ ಟೆಕ್ ಕ್ರಂನ್ಚೀಸ್ ಬ್ಲಾಗ್, ಭಾರತೀಯರು ಬ್ರೌಸ್ ಮಾಡುವ ಮೊದಲ ಹತ್ತು ಜನಪ್ರಿಯ ಅಂತರ್ಜಾಲ ಸುದ್ದಿತಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 2009ರ ಅಂಕಿಅಂಶಗಳ ಪ್ರಕಾರ ಆ ತಿಂಗಳಲ್ಲಿ ಹದಿನಾರು ದಶಲಕ್ಷ ಭಾರತೀಯರು ವೆಬ್ ತಾಣಗಳಲ್ಲಿ ಸುದ್ದಿಗಳನ್ನು ಹೆಕ್ಕಿದ್ದಾರೆ. ಈ ಅಂಕಿಅಂಶದ ಮುಖ್ಯಾಂಶವೆಂದರೆ ಕಳೆದ ವರ್ಷದ ಇದೇ ಅವಧಿಗೆ (ಅ. 2008 - ಅ.2009) ಹೋಲಿಸಿದರೆ ಇದು ಶೇ 37ರಷ್ಟು ಹೆಚ್ಚಾಗಿದೆ.

ಆಶ್ಚರ್ಯಕರ ಸಂಗತಿಯೆಂದರೆ ಈ ಪಟ್ಟಿಯಲ್ಲಿ ನ್ಯೂಯಾರ್ಕ್ ಟೈಮ್ಸ್ 2ನೇ ಸ್ಥಾನ ಪಡೆದಿದೆ. ಇನ್ನೂ ಆಶ್ಚರ್ಯವೆಂದರೆ ಭಾರತದ ಜನಪ್ರಿಯ ವೆಬ್ ತಾಣ ಟೈಮ್ಸ್ ಆಫ್ ಇಂಡಿಯಾಗಿಂತ NY Times ಒಂದು ಮೆಟ್ಟಿಲು ಮೇಲಿದೆ.

ಬಾರತೀಯರು ಬ್ರೌಸ್ ಮಾಡುವ ಮೊದಲ ಹತ್ತು ಸುದ್ದಿತಾಣಗಳು :

1) ಯಾಹೂ ನ್ಯೂಸ್ 4.1 ದಶಲಕ್ಷ
2) ನ್ಯೂಯಾರ್ಕ್ ಟೈಮ್ಸ್ 3.8 ದಶಲಕ್ಷ
3) ದಿ ಟೈಮ್ಸ್ ಆಫ್ ಇಂಡಿಯ 2.6 ದಶಲಕ್ಷ
4) ಒನ್ಇಂಡಿಯಾ.ಇನ್ 2.3 ದಶಲಕ್ಷ
5) ದಿ ಹಿಂದೂ ಗ್ರೂಪ್ 1.5 ದಶಲಕ್ಷ
6) ದಿ ಇಂಡಿಯನ್ ಎಕ್ಸ್ ಪ್ರೆಸ್ 1.2 ದಶಲಕ್ಷ
7) ಎಚ್ ಟಿ ಮೀಡಿಯಾ 1.1 ದಶಲಕ್ಷ
8) ಎನ್ ಡಿಟಿವಿ 1.1 ದಶಲಕ್ಷ
9) ಬಿಬಿಸಿ 992,000
10) ದಿ ಎಕನಾಮಿಕ್ ಟೈಮ್ಸ್ 820,000

ವೆಬ್ ಪಂಡಿತ ಕಾಂಸ್ಕೋರ್ http://techcrunchies.com/about/

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+