ಐಟಿ ಕಂಪನಿಗಳ ಮೇಲೆ ಉಗ್ರರ ಕಣ್ಣು

Infosys Bangalore
ನವದೆಹಲಿ, ಡಿ. 9 : ದೇಶದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಜಿ ಕೆ ಪಿಳ್ಳೆ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾಫ್ಟ್ ವೇರ್ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಭಾರತದ ಮೇಲೆ ಉಗ್ರರ ಕೆಂಗಣ್ಣಿ ನೆಟ್ಟಿರುವುದು ಗುಪ್ತಚರ ಇಲಾಖೆಯಿಂದ ಬೆಳಕಿಗೆ ಬಂದಿದೆ. ಭಾರತದ ಪ್ರಮುಖ ಕೇಂದ್ರಗಳು ಮತ್ತು ಸಾಫ್ಟ್ ವೇರ್ ರಂಗ ಭಯೋತ್ಪಾದಕರ ಹಿಟ್ ಲಿಸ್ಟ್ ನಲ್ಲಿವೆ. ದೇಶದ ಆರ್ಥಿಕತೆ ಮೇಲೆ ಹದಗೆಡಿಸುವುದು ಉಗ್ರರ ಪ್ರಮುಖ ಅಂಶವಾಗಿದೆ ಎಂದು ಪಿಳ್ಳೆ ವಿವರಿಸಿದರು.

ಭಯೋತ್ಪಾದಕ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಕಂಪನಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ಕಂಪನಿಗೆ ಬಿಗಿಭದ್ರತೆಯನ್ನು ಒದಗಿಸಿಕೊಳ್ಳುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ದೇಶದ ಅಣುಸ್ಥಾವರಗಳು, ಇಂಧನ ಶೇಖರಣಾ ಘಟಕಗಳಿಗೆ ಅಗತ್ಯ ಭದ್ರತೆಯನ್ನು ಕೇಂದ್ರ ಕೈಗೊಳ್ಳಲಿದೆ ಎಂದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+