ಐಐಟಿ ಕೌನ್ಸಿಲ್ ಗೆ ಜನಾರ್ದನಸ್ವಾಮಿ ಆಯ್ಕೆ
ನವದೆಹಲಿ,
ಡಿ. 7 : ಐಐಟಿ ಕೌನ್ಸಿಲ್‌ಗೆ ಆಯ್ಕೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಕೌನ್ಸಿಲ್‌ಗೆ ಸಂಸದ ಜನಾರ್ದನಸ್ವಾಮಿ ಆಯ್ಕೆಯಾಗಿದ್ದಾರೆ. ಕೌನ್ಸಿಲ್‌ಗೆ ಇಬ್ಬರು ಲೋಕಸಭೆ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಈ ಬಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ಚುನಾವಣೆ ನಡೆಸಲಾಯಿತು. id="toptextpromo">ಕಾಂಗ್ರೆಸ್‌ನ
ಹರಿಯಾಣದ ಯುವ ಸಂಸದ ಜಿತೇಂದ್ರ ಸಿಂಗ್ ಗೂಡಾ ಆಯ್ಕೆಯಾಗಿದ್ದಾರೆ. ಇದೇ ಸಂಸ್ಥೆಯ ವಿದ್ಯಾರ್ಥಿಯಾದ ತಾವು ಈಗ ಕೌನ್ಸಿಲ್‌ಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಜನಾರ್ದನ ಸ್ವಾಮಿ ತಿಳಿಸಿದರು. ಭಾರತದ ಶ್ರೇಷ್ಠ ವಿಜ್ಞಾನ ಸಂಸ್ಥೆಯಾದ ಐಐಟಿ ಕೌನ್ಸಿಲ್ ರಾಷ್ಟ್ರಪತಿಯವರ ನೇತೃತ್ವದಲ್ಲಿದೆ. ದಿಲ್ಲಿ, ಮುಂಬೈ, ಕಾನ್ಪುರ, ಚೆನ್ನೆ ಸೇರಿದಂತೆ ದೇಶದಲ್ಲಿ ಒಟ್ಟು 15 ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿವೆ. ಪ್ರತಿ ಸಂಸ್ಥೆಗೆ ಒಬ್ಬ ನಿರ್ದೇಶಕರಿರುತ್ತಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications