ಕನ್ನಡ ವಿದ್ಯುನ್ಮಾನ ಜ್ಞಾನಕೋಶ -ಕಣಜ

ರಾಜ್ಯವನ್ನು ಜ್ಞಾನ ಸಮಾಜವಾಗಿ ಪರಿವರ್ತಿಸಲು ಪ್ರಾರಂಭಿಸಿರುವ ಕರ್ನಾಟಕ ಜ್ಞಾನ ಆಯೋಗವು, ಸಾಮಾನ್ಯ ಜನತೆ ತಮಗೆ ಬೇಕಾದ ಮಾಹಿತಿ ತೆಗೆದುಕೊಳ್ಳುವ ಮತ್ತು ಅವರಲ್ಲಿರುವ ಅರಿವಿನ ಕಾಳನ್ನು ನೀಡಲು ಅವಕಾಶ ಒದಗಿಸಿರುವ ಈ ಪೋರ್ಟಲ್ ಎಲ್ಲ ಕನ್ನಡಿಗರನ್ನು ಒಂದುಗೂಡಿಸಲಿದೆ ಎಂದು ಬಣ್ಣಿಸಿದರು.
ಕಳೆದ ಬಜೆಟ್‌ನಲ್ಲಿ ಇಂಥದ್ದೊಂದು ಪೋರ್ಟಲ್ ನಿರ್ಮಿಸುವ ಭರವಸೆ ಕೊಡಲಾಗಿತ್ತು. ಈಗ ಅದು ಸಾಕಾರ ಗೊಂಡಿದೆ. ಮಾತೃ ಭಾಷೆಯಲ್ಲಿ ನಿರ್ಮಾಣಗೊಂಡ ಪ್ರಥಮ ಜ್ಞಾನಕೋಶ ಇದಾಗಿದೆ. 1.3 ಕೋಟಿ ಕನ್ನಡ ಲೇಖನ ಸೇರಿಸಲು ಅವಕಾಶವಿದೆ. ಡಾ.ಕಸ್ತೂರಿ ರಂಗನ್ ಅಧ್ಯಕ್ಷತೆಯ ಆಯೋಗವು ಕಡಿಮೆ ಅವಧಿಯಲ್ಲಿ ಜ್ಞಾನಕೋಶವನ್ನು ರೂಪಿಸಿರುವುದು ಕನ್ನಡಿಗರ ಮೇಧಾವಿತನಕ್ಕೆ ಪ್ರತೀಕವಾಗಿದೆ ಎಂದು ಶ್ಲಾಘಿಸಿದರು.
ಜ್ಞಾನ ಆಯೋಗವು ಸಮುದಾಯ ಮತ್ತು ಕನ್ನಡ ಪೀಡಿಯಾ ನಡುವಣ ಸೇತುವೆ ಮಾತ್ರವಲ್ಲ,ಅದು ವಿದ್ಯುನ್ಮಾನ ಜಾಗತಿಕ ಮುಕ್ತ ಅಥವಾ ಚಲನ ವಿವಿ,ಎಲ್ಲ ವರ್ಗಗಳ, ಎಲ್ಲ ವಯೋಮಾನದವರ ತಿಳಿವಳಿಕೆ ವಿಮರ್ಶನ ಶಕ್ತಿ ಹಾಗೂ ಸೃಜನ ಸಾಮರ್ಥ್ಯ ಬೆಳೆಸಲು ಪೋರ್ಟಲ್ ಸಹಕಾರಿಯಾಗುತ್ತದೆ ಎಂದು ನಾಡೋಜ ದೇ.ಜವರೇಗೌಡ ಅಭಿಪ್ರಾಯಪಟ್ಟರು.
ಡಾ.ಕಸ್ತೂರಿ ರಂಗನ್ ಮಾತನಾಡಿ, 'ಸರಕಾರದ ಒತ್ತಾಸೆ ಮತ್ತು ಸಹಕಾರದಿಂದ ಈ ಯೋಜನೆ ಕಾರ್ಯಸಾಧ್ಯ ವಾಗಿದೆ. ಆಯೋಗದ 26 ಶಿಫಾರಸುಗಳ ಪೈಕಿ 9ಅನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ ' ಎಂದರು. ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಸಂಸದರಾದ ಪಿ.ಸಿ. ಮೋಹನ್, ಡಿ.ಬಿ. ಚಂದ್ರೇಗೌಡ, ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು, ಜ್ಞಾನ ಆಯೋಗದ ಸದಸ್ಯರು ಉಪಸ್ಥಿತರಿದ್ದರು
(ಏಜೆನ್ಸೀಸ್)











Click it and Unblock the Notifications