ಟಿಆರ್ಎಸ್ ಮುಖ್ಯಸ್ಥ ತೀವ್ರ ಅಸ್ವಸ್ಥ
ಹೈದರಾಬಾದ್,
ಡಿ. 3 : ತೆಲಾಂಗಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಕೆ ಚಂದ್ರಶೇಖರರಾವ್ ತೀವ್ರ ಅಸ್ವಸ್ಥಗೊಂಡಿದ್ದು, ಖಮ್ಮಮ್ ಆಸ್ಪತ್ರೆಯಿಂದ ಹೈದರಾಬಾದ್ ನಲ್ಲಿರುವ ನಿಮ್ಸ್ ಆಸ್ಪತ್ರೆಗೆ ಇಂದು ಬೆಳಿಗ್ಗೆ ದಾಖಲಿಸಲಾಗಿದೆ. ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಗಾಗಿ ರಾವ್ ಖಮ್ಮಮ್ ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹೂಡಿದ್ದರು. id="toptextpromo">ಖಮ್ಮಮ್
ಸರಕಾರೀ ಆಸ್ಪತ್ರೆಯಿಂದ ಇಂದು ಬೆಳಿಗ್ಗೆ ಹೈದರಾಬಾದ್ ನಲ್ಲಿರುವ ನಿಜಾಂ ಇನ್ ಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ರಾವ್ ಅವರನ್ನು ದಾಖಲಿಸಲಾಗಿದೆ. ಈ ಮಧ್ಯೆ ನಿಮ್ಸ್ ಆಸ್ಪತ್ರೆಯಲ್ಲಿ ರಾವ್ ಬೆಂಬಲಿಗರು ಭಾರಿ ಪ್ರಮಾಣದಲ್ಲಿ ಜಮಾಯಸಿದ್ದಾರೆ. ಮೇಡಖ್ ಜಿಲ್ಲೆ ಸಿದ್ದಿಪೇಟೆನಲ್ಲಿ ರಾವ್ ಉಪವಾಸ ಸತ್ಯಾಗ್ರಹ ಹೂಡಿದ್ದಾಗ ಪೊಲೀಸರು ಇವರನ್ನು ಬಂಧಿಸಿ ಖಮ್ಮಮ್ ಜೈಲಿನಲ್ಲಿ ಇಟ್ಟಿದ್ದರು. ಆದಿಲಾಬಾದ್, ಕರೀಂನಗರ, ನಿಜಾಮಾಬಾದ್, ಮೇಡಕ್, ವಾರಂಗಲ್, ಖಮ್ಮಮ್, ಹೈದರಾಬಾದ್, ರಂಗಾರೆಡ್ಡಿ, ನೆಲಗೊಂಡ ಮತ್ತು ಮೆಹಬೂಬ್ ನಗರ ಜಿಲ್ಲೆಗಳನ್ನು ಹೊಂದಿದ ಪ್ರತ್ಯೇಕ ರಾಜ್ಯಕ್ಕಾಗಿ ಚಂದ್ರಶೇಖರ್ ರಾವ್ ನೇತ್ರತ್ವದ ಟಿಆರ್ಎಸ್ ಹೋರಾಟ ನಡೆಸುತ್ತಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications