ಕುರ್ಚಿ ಉಳಿಸಿಕೊಳ್ಳಲು ಏನೆಲ್ಲಾ ಮಾಡುತ್ತೇವೆ, ಸಿಎಂ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುರ್ಚಿಗಾಗಿ, ಅಧಿಕಾರಕ್ಕಾಗಿ ರಾಜಕಾರಣಿಗಳು ಮಾಡಬಾರದ ಕೆಲಸವನ್ನು ಮಾಡುವುದು ಸತ್ಯ ಎಂದು ಒಪ್ಪಿಕೊಂಡರು. ರಾಜ್ಯದ ಜನತೆ ನಂಬಿಕೆ ಇರಿಸಿ ಆರಿಸಿ ಕಳಿಸಿದೆ, ಆದರೆ, ರಾಜಕಾರಣಿಗಳಾದ ನಾವುಗಳು ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ. ಅಧಿಕಾರದಲ್ಲಿರುವ ಏಕೈಕ ಉದ್ದೇಶದಿಂದ ನಮ್ಮ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇವೆ, ಹೀಗೆ ಮುಂದುವರೆದರೆ ಜನತೆ ನಮ್ಮನ್ನು ಕ್ಷಮಿಸಲ್ಲ, ಕ್ಷಮಿಸಬಾರದು ಕೂಡಾ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ, ನೂತನ ವಿದ್ಯುತ್ ದರ ಇಂದಿನಿಂದ ಜಾರಿಗೊಳ್ಳಲಿದೆ. ಹಿಂತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications