ವಿದ್ಯುತ್ ದರ ಏರಿಸಲು ಸರಕಾರ ತೀರ್ಮಾನ ?
ಬೆಂಗಳೂರು,
ನ. 25 : ದಿನಬಳಕೆ ವಸ್ತುಗಳ ಬಳಕೆ ಏರಿಕೆಯ ಬೆನ್ನಲ್ಲೇ ಜನಸಾಮಾನ್ಯರಿಗೆ ವಿದ್ಯುತ್ ಶಾಕ್ ಹೊಡೆಯಲು ಸಿದ್ಧವಾಗಿದೆ. ಬುಧವಾರ ಮಧ್ಯರಾತ್ರಿಯಿಂದ ಪ್ರತಿ ಯೂನಿಟ್ ಗೆ 30 ಪೈಸೆಗೂ ಹೆಚ್ಚು ಏರಿಕೆ ಬಹುತೇಕ ಖಚಿತವಾಗಿದೆ. ಪರಿಷ್ಕೃತ ಪಟ್ಟಿಯನ್ನು ಬುಧವಾರ ಮಧ್ಯಾಹ್ನ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಪ್ರಕಟಿಸಲಿದೆ. id="toptextpromo">ಗೃಹ,
ವಾಣಿಜ್ಯ ಹಾಗೂ ಕೈಗಾರಿಕೆಗಳಿಗೆ ಬಳಕೆ ಆಗುತ್ತಿರುವ ಪ್ರತಿ ಯೂನಿಟ್ ವಿದ್ಯುತ್ ಗೆ ಹೆಚ್ಚಳ ಏಕರೂಪ ಇರಲಿದೆ. ವಿದ್ಯುತ್ ವಿತರಣೆ ಕಂಪನಿಗಳು ಪ್ರತಿ ಯೂನಿಟ್ ಗೆ 51 ಪೈಸೆ ಹೆಚ್ಚಳ ಕೋರಿ, ಕೆಇಆರ್ ಸಿ ಕಳೆದ ಜೂನ್ ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು. ರಾಜ್ಯದ ನಾನಾ ಭಾಗಗಳಲ್ಲಿ ಸಾರ್ವಜನಿಕ ವಿಚಾರಣೆ ನಡೆಸಿದ ಕೆಇಆರ್ ಸಿ 30 ಪೈಸೆ ಹೆಚ್ಚಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications