ಮಾಧ್ಯಮಗಳ ವಿರುದ್ಧ ಲಿಬರ್ಹಾನ್ ಕಿಡಿಕಿಡಿ

MS Liberhan
ನವದೆಹಲಿ, ನ. 23 : ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಉಂಟು ಮಾಡಿರುವ ಕೇಂದ್ರ ಬಿಂದು ಲಿಬರ್ಹಾನ್ ಆಯೋಗದ ಮುಖ್ಯಸ್ಥ ಹಾಗೂ ಸುಪ್ರಿಂಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರ್ಹಾನ್ ಅವರು ಮಾಧ್ಯಮಗಳ ಮೇಲೆ ತೀವ್ರವಾಗಿ ಹರಿಹಾಯ್ದಿದ್ದಾರೆ. ಗೆಟ್ ಲಾಸ್ಟ್ ಫ್ರಮ್ ದಿ ಪ್ರಿಮೈಸಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಬರ್ಹಾನ್ ಆಯೋಗದ 700 ಪುಟಗಳ ವರದಿಗೆ ಸಂಬಂಧಿಸಿದಂತೆ ಇಂದಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಬ್ರೇಕಿಂಗ್ ನ್ಯೂಸ್ ವರದಿಯಾಗಿದೆ. ಅದರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಮರಳಿ ಮನೋಹರ್ ಜೋಶಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರುಗಳು ಘಟನೆಗೆ ಕಾರಣ ಎಂಬಂತಹ ಅಂಶ ವರದಿಯಲ್ಲಿದೆ. ಪತ್ರಿಕೆಗೆ ಹೇಗೆ ಲೀಕ್ ಆಗಿದೆ ಎಂಬ ಅಂಶ ಕೂಡಾ ಇಂದಿನ ಸಂಸತ್ ಅಧಿವೇಶನದಲ್ಲಿ ತೀವ್ರ ಕೋಲಾಹಲ ಉಂಟು ಮಾಡಿದೆ. ಎಲ್ ಕೆ ಅಡ್ವಾಣಿ ಅವರಂತೂ ಭಾವೋದ್ವೇಗದಿಂದ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯಲ್ಲಿ ವರದಿಯಾಗಿ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ವಾತಾವರಣ ಸೃಷ್ಟಿಸಿದ ಕೇಂದ್ರ ಬಿಂದು ಲಿಬರ್ಹಾನ್ ಆಯೋಗ ಮುಖ್ಯಸ್ಥ ಎಂ ಎಸ್ ಲಿಬರ್ಹಾನ್ ಅವರನ್ನು ಮಾಧ್ಯಮಗಳು ಭೇಟಿ ಸ್ಪಷ್ಟನೆ ಕೇಳಲು ಅವರ ನಿವಾಸಕ್ಕೆ ದಾವಿಸಿವೆ. ಆದರೆ, ಎಂ ಎಸ್ ಲಿಬರ್ಹಾನ್ ಅವರು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಆಯೋಗದ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವಂತ ಕೆಳಮಟ್ಟದ ವ್ಯಕ್ತಿ ನಾನಲ್ಲ. ಗೆಟ್ ಲಾಸ್ಟ್ ಫ್ರಮ್ ದಿ ಪ್ರಿಮೈಸಸ್ ಎಂದು ಹರಿಹಾಯ್ದ ಘಟನೆ ನಡೆಯಿತು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+