ಕೋರ್ ಕಮೀಟಿಯಲ್ಲಿ ಬಲಾಢ್ಯರ ಬಿಕ್ಕಟ್ಟು

ಇನ್ನೊಂದಡೆ ಕೋರ್ ಕಮೀಟಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಅನ್ಯಾಯವಾಗಿದೆ. ಸಮನ್ವಯ ಸಮಿತಿ ಬಲಾಢ್ಯರ ಸಮಿತಿಯಾಗಿ ಹೊರಹೊಮ್ಮಿದೆ. ಹಿಂದುಳಿದ ವರ್ಗಗಳ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಬಿಜೆಪಿಯ ಹಿಂದುಳಿದ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಕೋರ್ ಕಮೀಟಿಯಲ್ಲಿ 14 ಮಂದಿ ಸದಸ್ಯರಿದ್ದು, ಅದರಲ್ಲಿ 6 ಮಂದಿ ಬ್ರಾಹ್ಮಣರು, 3 ಮಂದಿ ಲಿಂಗಾಯಿತರು, 2 ಮಂದಿ ಒಕ್ಕಲಿಗರು, 2 ಹಿಂದುಳಿದ ವರ್ಗಗಳು ಮತ್ತು ಕರಣಾಕರರೆಡ್ಡಿ ಸಮನ್ವಯ ಸಮಿತಿಯಲ್ಲಿದ್ದಾರೆ. ಇದು ಹಿಂದುಳಿದ ವರ್ಗಗಳ ಶಾಸಕರಿಗೆ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಕೋರ್ ಕಮೀಟಿಯಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ತಾವು ಬದ್ಧ. ರಾಜ್ಯದ ಹಿತ ಮತ್ತು ಅಭಿವೃದ್ಧಿಗಾಗಿ ಕೋರ್ ಕಮೀಟಿಯ ನಿರ್ಧಾರವನ್ನು ಸ್ವಾಗತಿಸುವುದಾಗಿ ಸಚಿವ ಜನಾರ್ದನರೆಡ್ಡಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications