ಭಾವಿ ಪಿಎಂ ಎಂದು ಕರೆಯಬೇಡಿ: ರಾಹುಲ್

ನಗರದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಭಾರತದ ಭಾವಿ ಪ್ರಧಾನಿ ಎಂದು ಬಿಂಬಿಸಬಾರದು ಎಂದರು. ಭಾರತದ ಪ್ರಧಾನಮಂತ್ರಿ ಸ್ಥಾನ ಅತ್ಯುನ್ನತ ಹುದ್ದೆ. ಈ ಹುದ್ದೆಗೆ ಯಾರಾದರೂ ಬರಬಹುದು. ಆದರೆ, ನನ್ನನ್ನು ಮಾತ್ರ ಭಾವಿ ಪ್ರಧಾನಿ ಎಂದು ಕರೆಯಬಾರದು ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ದೊಡ್ಡತನ ಮೆರೆದರು.
ಪ್ರಸ್ತುತ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ದೇಶದ ಕಂಡ ಅತ್ಯಂತ ಸಮರ್ಥ ಪ್ರಧಾನಮಂತ್ರಿ. ಅವರ ಕೈಯಲ್ಲಿ ಭಾರತ ಸುಭದ್ರವಾಗಿದೆ. ಭಯೋತ್ಪಾದನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿರುವ ಕಾನೂನುಗಳ ಮೂಲಕ ಈ ಪೀಡೆಯನ್ನು ತೊಲಗಿಸಲು ಸಾಧ್ಯ ಎಂದು ಹೇಳಿದರು. ಇದಲ್ಲದೆ, ಗ್ಲೋಬಲ್ ವಾರ್ಮಿಂಗ್, ಪರಿಸರ, ಶಿಕ್ಷಣ, ಆರೋಗ್ಯ ಹೀಗೆ ಅನೇಕ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಆದರೆ, ವಿಪರ್ಯಾಸದ ಸಂಗತಿ ಎಂದರೆ, ಕಳೆದ ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದು, ಪ್ರದಾನಿ ಹುದ್ದೆ ಅಲಂಕರಿಸಬೇಕು ಎಂದು ಕನಸು ಕಂಡಿದ್ದ ಮುತ್ಸದ್ಧಿ ರಾಜಕಾರಣಿ ಲಾಲ್ ಕೃಷ್ಣ ಅಡ್ವಾಣಿಗೆ ಮಾತ್ರ ಪಿಎಂ ಪದವಿ ಕನಸಾಗಿಯೇ ಉಳಿಯಿತು. ಗಾಂಧಿ ಮನೆತನ ಕುಡಿ ರಾಹುಲ್ ಗಾಂಧಿ ಬೇಡ ಬೇಡ ಎಂದರೂ ಪಿಎಂ ಪದವಿ ಕಾಲ ಬುಡದ ಬಳಿ ಬಂದು ಬಿದ್ದಿದೆ !!!
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications