ಮುಂದಿನ ವರ್ಷದಿಂದ ಸಾಫ್ಟ್ ವೇರ್ ಬೂಮ್ ?
ನವದೆಹಲಿ,
ನ. 11 : ದೇಶದ ಮಾಹಿತಿ ತಂತ್ರಜ್ಞಾನ ರಂಗವು ಮುಂದಿನ ವರ್ಷ ಮತ್ತೆ ಪ್ರವರ್ಧಮಾನಕ್ಕೆ ಬರಲಿದ್ದು, ಎರಡಂಕಿ ವೃದ್ಧಿ ದಾಖಲಿಸಲಿದೆ ಎಂದು ನಾಸ್ಕಾಂ (ಸಾಫ್ಟ್ ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ) ಅಂದಾಜಿಸಿದೆ. id="toptextpromo">ವರ್ಷದಿಂದ
ವರ್ಷಕ್ಕೆ ಶೇ. 30ರಷ್ಟು ಬೆಳವಣಿಗೆ ಸಾಧಿಸುತ್ತಿರುವ ಐಟಿ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇವಲ ಶೇ. 4 ರಿಂದ 7 ರಷ್ಟು ಮಾತ್ರ ವೃದ್ಧಿ ದಾಖಲಿಸಲಿದೆ. ಕರೆನ್ಸಿ ಏರಿಳಿತ ಮತ್ತು ಜಾಗತಿಕ ಮಟ್ಟದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ಕಾರಣಕ್ಕೆ ತೀವ್ರ ಹಿನ್ನೆಡೆ ಕಂಡಿದ್ದೇ ಇದಕ್ಕೆ ಕಾರಣ. ಈಗ ಆರ್ಥಿಕ ಚಟುವಟಿಕೆ ಮತ್ತೆ ಗರಿಗೆದರುತ್ತಿವೆ. ಹೀಗಾಗಿ ಮುಂದಿವ ವರ್ಷದ ಆರಂಭದಿಂದ ಐಟಿ ರಂಗದಲ್ಲಿ ಮೊದಲಿನ ಉತ್ಸಾಹ ಕಂಡುಬರುವ ಸಾಧ್ಯತೆಗಳಿವೆ ಎಂದು ನಾಸ್ಕಾಂ ಅಧ್ಯಕ್ಷ ಸೋಮ್ ಮಿತ್ತಲ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications