ಗುಲ್ಬರ್ಗಾದಲ್ಲಿ ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ
ಗುಲ್ಬರ್ಗಾ, ನ. 10 : ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ ಒಂದು ವಿನೂತನ ಯೋಜನೆಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ ಹಾಗೂ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಗುಲ್ಬರ್ಗಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಿಸಲಾಗಿದೆ.
ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ ನಿರ್ಮಾಣ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾದ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ಉದ್ಯಾನವನವನ್ನು 8 ನೇ, ಜುಲೈ 2009 ರಂದು ಉದ್ಘಾಟಿಸಲಾಯಿತು, ಈಗ ಅಲ್ಲಿ ಅನೇಕ ಚಟುವಟಿಕೆಗಳು ಕೈಗೊಳ್ಳಲಾಗಿದೆ. ಐದು ವಿವಿಧ ರೀತಿಯ ಜೈವಿಕ ಇಂಧನ ಸಸ್ಯಗಳಾದ ಜತ್ರೋಪ್, ಹಿಪ್ಪೆ, ಹೋಂಗೆ, ಸಿಮಾರೂಬ್, ಔಡಲ, ಸಸ್ಯಗಳನ್ನು ಸುಮಾರು 30 ಎಕರೆ ಭೂಮಿಯಲ್ಲಿ ಮಾದರಿ ಪ್ರಯೋಗಿಕ ಉದ್ಯಾನವನವಾಗಿ ನಿರ್ಮಿಸಲಾಗಿದೆ.
ವಿಶ್ವವಿದ್ಯಾಲಯು ಜೈವಿಕ ಇಂಧನ ಸಸ್ಯಗಳ ಬೆಳವಣಿಗೆ, ಉತ್ಪಾದನೆ, ರೋಗ ನಿರೋಧಕ ಶಕ್ತಿ, ಬೃಹತ ಪ್ರಮಾಣದಲ್ಲಿ ಬೆಳೆಯುವಿಕೆ ಮತ್ತು ಮಾರುಕಟ್ಟೆ ಅಭಿವೃದ್ಧಿ ಪಡೆಸುವ ಪ್ರಯೋಗಗಳಲ್ಲಿ ತೊಡಗಿದೆ. ರಾಷ್ಟ್ರಿಯ ಪ್ರಯೋಗಾಲಯಗಳು ಮತ್ತು ಖಾಸಗಿ ಉದ್ಯಮಿಗಳ ಜೋತೆ ಸಂಪರ್ಕ ಬೆಳೆಸಲಾಗುತ್ತಿದೆ. ರಾಷ್ಟ್ರಿಯ ಮತ್ತು ರಾಜ್ಯ ಸರಕಾರಿ ಸಂಸ್ಥೆಗಳಿಂದ ಧಾನ ಸಹಾಯಕಾಗಿ ಕೋರಲಾಗಿದೆ.
ಡಾ. ಆರವಿಂದ ದುಗ್ಗಾಲ, ಸಲಹೆಗಾರರು, ಜೈವಿಕ ತಂತ್ರಜ್ಞಾನ ವಿಭಾಗ ಭಾರತ ಸರಕಾರ ಅವರು ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನನ್ನು ಈ ಮೊದಲು ಭೇಟಿ ನಿಡಿದ್ದಾರೆ. ಜೈವಿಕ ತಂತ್ರಜ್ಞಾನ ವಿಭಾಗ ಭಾರತ ಸರಕಾರ ಅವರಿಂದ ಧಾನ ಸಹಾಯ ಪಡೆಯುವ ನಿರಿಕ್ಷೆಯಲ್ಲಿದೆ. ಅದೆ ರೀತಿ ಜೈವಿಕ ಇಂಧನ ಉತ್ಪಾದನೆ ಮಾಡುವ ಉದ್ಯಮಗಳ (ಉದಾ: ಪ್ರಾಜ ಉದ್ಯಮ ಪೂಣೆ, ನಂದನ್ ಬೈಯೋಮ್ಯಾಟ್ರಕ್ಸ್, ಹೈದ್ರಾಬಾದ್ ಮತ್ತು ಲ್ಯಾಬಲ್ಯಾಂಡ್ ಬೈಯೋಟೆಕ್, ಮೈಸೂರು) ಜೊತೆ ಸಂಪರ್ಕ ಹೊಂದಿ ಜೈವಿಕ ಇಂಧನ ತಯಾರಿಕೆ ಘಟಕ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಲು ತಿರ್ಮಾನಿಸಲಾಗಿದೆ.
ಇನ್ನು ಮುಂದೆ ಅಸಕ್ತಿಯಿರುವ ರೈತರು, ಸಂಸ್ಥೆಗಳು ತಮಲ್ಲಿರುವ ಒಣ ಜತ್ರೋಪ್ ಬಿಜಗಳನ್ನು ಮಾರಲು ಹೆಚ್ಚಿನ ಮಾಹಿತಿಗಾಗಿ ಪ್ರೋ. ಜಿ. ಆರ್. ನಾಯಕ, ಸಂಯೋಜಕರು, ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ ಅವರಿಗೆ ಸಂಪರ್ಕಿಸಬಹುದು. ಜೈವಿಕ ಇಂಧನ ಸಸ್ಯಗಳ ಪ್ರಸಿದ್ಧಿ ಪಡೆಸಿ ಅದರಿಂದ ಅದಾಯ ಸೃಷ್ಟಿಸಿ ಗ್ರಾಮಿಣ ಪ್ರದೇಶದಲ್ಲಿ ಹೊಸ ಉದ್ಯೋಗ ಇದೊಂದು ಸುವರ್ಣ ಅವಕಾಶ ಮತ್ತು ಮಹತ್ವದ ಮೈಲುಗಲ್ಲಾಗಿದೆ. ಈ ಕಾರ್ಯಕ್ರಮವು ದಿನಾಂಕ 10 ರಂದು ಬೆಳಿಗ್ಗೆ 10 ಗಂಟೆಗೆ ಹೆದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯಲಯದಲ್ಲಿ ಜರುಗಲಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications