ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆ ಅಂಕಪಟ್ಟಿ ಪ್ರಕಟ

ಸದರಿ ಅಂಕಗಳನ್ನು ಆಯೋಗದ ಕೇಂದ್ರ ಕಚೇರಿ, ಬೆಂಗಳೂರು ಮತ್ತು ಪ್ರಾಂತೀಯ ಕಚೇರಿಗಳಾದ ಮೈಸೂರು, ಬೆಳಗಾವಿ, ಗುಲ್ಬರ್ಗಾ ಮತ್ತು ಶಿವಮೊಗ್ಗ ಹಾಗೂ ಆಯೋಗದ http://kpsc.kar.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಉತ್ತರ ಪತ್ರಿಕೆಗಳ ಅಂಕಗಳ ಮರು ಎಣಿಕೆಗಾಗಿ ಮನವಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಮನವಿಯೊಂದಿಗೆ ನೋಂದಣಿ ಸಂಖ್ಯೆ, ವಿಷಯವನ್ನು ನಮೂದಿಸಿ ಪ್ರತಿ ಪತ್ರಿಕೆಗೆ ರೂ. 100/- ರಂತೆ ನಿಗದಿತ ಶುಲ್ಕದೊಂದಿಗೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು ಇವರಿಗೆ ಸಂದಾಯವಾಗುವಂತೆ ಡಿ.ಡಿ.ಯನ್ನು ಪಡೆದು ನವೆಂಬರ್ 7ರೊಳಗೆ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications