ಸಂಘದ ಹೆಸರಲ್ಲಿ ನಿಧಿ ಸಂಗ್ರಹ : ಡಿಕೆಶಿ

ಪಕ್ಷದ ಕಚೇರಿಯಲ್ಲಿ ಕರೆದಿದ್ದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಪಾದಯಾತ್ರೆ ಸಂದರ್ಭದಲ್ಲಿ ಸಂಗ್ರಹಿಸಿದ ಹಣವನ್ನು ಸರಕಾರದ ಹೆಸರಿಗೆ ತೆಗೆದುಕೊಳ್ಳಬೇಕು. ಆದರೆ, ಕೆಲ ಸಚಿವರು ಆರ್ಎಸ್ಎಸ್, ಬಿಜೆಪಿ ಹೆಸರಿನಲ್ಲಿ ಚೆಕ್, ಡಿಡಿ ಕೊಡುವಂತೆ ಸೂಚಿಸಿರುವುದು ಗಮನಕ್ಕೆ ಬಂದಿದೆ ಎಂದು ತರಾಟೆಗೆ ತೆಗೆದುಕೊಂಡರು.
ಸರಕಾರ ಈವರೆಗೆ ಸಂಗ್ರಹಿಸಿದ ನೆರವಿನ ಮೊತ್ತ ಎಷ್ಟು ಎಂಬುದನ್ನು ಸಾರ್ವಜನಿಕವಾಗಿ ಘೋಷಿಸಿಬೇಕು. ಒಂದು ಪೈಸೆಯೂ ಪೋಲಾಗದಂತೆ ನೋಡಿಕೊಳ್ಳಬೇಕು. ಏನಾದರೂ ಅವ್ಯವಹಾರ ನಡೆದರೆ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಅವರು ಎಚ್ಚರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications