ಕ್ವಟ್ರೋಚಿ ಆರೋಪ ಮುಕ್ತ: ಯುಪಿಎ ಕೈವಾಡ

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕ್ವಟ್ರೋಚಿಯ ಲಂಡನ್ನಿನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಅದರೆ, ಇಂದು ಯುಪಿಎ ಕ್ರಿಮಿನಲ್ ಗಳಿಗೆ ಬೆಂಬಲವಾಗಿ ನಿಂತಿರುವುದು ದುರದೃಷ್ಟಕರ ಎಂದು ರಾಜ್ ನಾಥ್ ಹೇಳಿದರು. ಮಹಾರಾಷ್ಟ್ರ ವಿಧಾನಸಭೆ ಪ್ರಚಾರದ ನಿರತರಾದ ಸೋನಿಯಾ ಗಾಂಧಿ ಬಾಂದ್ರಾದಲ್ಲಿ ಕ್ವಟ್ರೋಚಿ ಆರೋಪ ಮುಕ್ತವಾದ ಕ್ರಮವನ್ನು ಸಮರ್ಥಿಸಿಕೊಂಡ ಬೆನ್ನಲ್ಲೇ ರಾಜ್ ನಾಥ್ ಈ ರೀತಿ ನುಡಿದಿದ್ದಾರೆ.
ಸಿಬಿಐ ಕ್ರಮವನ್ನು ಎಲ್ ಕೆ ಅಡ್ವಾಣಿ ಸೇರಿದಂತೆ ಹಲವು ಉನ್ನತಮಟ್ಟದ ನಾಯಕರು ಖಂಡಿಸಿದ್ದರು.1980ರ ದಶಕದಲ್ಲಿ ಬೋಫೋರ್ಸ್ ಹಗರಣ ಬೆಳಕಿಗೆ ಬಂದಿತು. 155 ಬಿಲಿಯನ್ ಹಣದ ಹಗರಣವಾಗಿದ್ದು, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ದೇಶದ ಪ್ರಮುಖ ರಾಜಕಾರಣಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ.
(ಏಜೆನ್ಸೀಸ್)












Click it and Unblock the Notifications