ರಾಹುಲ್ ಗ್ರಾಮ ವಾಸ್ತವ್ಯ ಆರ್ಎಸ್ಎಸ್ ಶ್ಲಾಘನೆ
ರಾಜಗೀರ್
(ಬಿಹಾರ್), ಅ. 11 : ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಬಿಜೆಪಿ ಟೀಕಿಸುತ್ತಿದ್ದರೆ, ಇನ್ನೊಂದೆಡೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಶಂಸೆ ವ್ಯಕ್ತಪಡಿಸಿದೆ. ಹಳ್ಳಿಗಳ ಬಗ್ಗೆ ಮಾತನಾಡುವುದು. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಸಂಕಷ್ಟಗಳನ್ನು ಅರಿಯುವುದು ಒಳ್ಳೆಯ ಕೆಲಸ ಎಂದು ಆರ್ಎಸ್ಎಸ್ ಹೇಳಿದೆ. id="toptextpromo">ಪ್ರತಿಯೊಬ್ಬ
ಭಾರತೀಯನು ಹಳ್ಳಿಗಳಿಗೆ ಹೋಗಬೇಕು. ಹಳ್ಳಿಗಳ ಬಗ್ಗೆ ಮಾತನಾಡಬೇಕು. ಅದರಲ್ಲಿ ತಪ್ಪೇನೂ ಇಲ್ಲ ಎಂದು ಆರ್ಎಸ್ಎಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಮೋಹನ್ ವೈದ್ಯ ಹೇಳಿದ್ದಾರೆ. ಅಮೇಥಿ ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ, ಇತ್ತೀಚೆಗೆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ದಲಿತರ ಮನೆಗೆ ಭೇಟಿ ನೀಡಿದ್ದ ರಾಹುಲ್ ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿದ್ದರು. ಇದು ಉತ್ತರ ಪ್ರದೇಶದಲ್ಲಿ ಭಾರಿ ಚರ್ಚೆ ಕಾರಣವಾಗಿತ್ತು. ಮುಖ್ಯಮಂತ್ರಿ ಮಾಯಾವತಿ ಹಾಗೂ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೊಂದು ರಾಜಕೀಯ ತಂತ್ರ ಎಂದು ಆರೋಪಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications