ಪ್ರವಾಹ ಪರಿಹಾರಕ್ಕೆ ಹರಿದು ಬಂದ ನೌಕರರ ಹಣ

ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಇದರಿಂದಾಗಿ 32 ಕೋಟಿ ರು. ಹಣ ಪರಿಹಾರ ನಿಧಿಗೆ ಜಮಾ ಆಗಲಿದೆ. ರಾಜ್ಯದ ಸಂಸದರು ಮತ್ತು ಸಚಿವರು ಕೂಡ ಒಂದು ತಿಂಗಳ ವೇತನವನ್ನು ಪರಿಹಾರ ನಿಧಿಗೆ ನೀಡಲಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ 50 ಲಕ್ಷ ರು. ಪರಿಹಾರ ನಿಧಿಗೆ ಸಂದಾಯವಾಗಲಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಘೋಷಿಸಿದ್ದಾರೆ. ಜನತಾದಳ (ಜಾತ್ಯತೀತ) ನಾಯಕ ಕುಮಾರಸ್ವಾಮಿ ಪಕ್ಷಭೇದ ಮರೆತು ರಾಜ್ಯ ಸರಕಾರ ಕೈಗೊಳ್ಳುವ ಪರಿಹಾರ ಕಾರ್ಯದಲ್ಲಿ ಸಹಕಾರ ನೀಡುವುದಾಗಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications