ಮಾಧ್ಯಮ ಮುಂದೆ ನಿಲ್ಲುವಾಗ ಸಿದ್ಧತೆ ಇರಲಿ, ಜೈಟ್ಲಿ

Arun jaitley
ಮೈಸೂರು, ಅ. 2 : ಪಕ್ಷ ಮತ್ತು ಮಂತ್ರಿಗಳ ಚಿಂತನೆ ಒಂದೇ ಇರಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸರಕಾರಕ್ಕೆ ಧಕ್ಕೆಯಾಗಲಿದೆ. ಮಾಧ್ಯಮಗಳ ಮುಂದೆ ನಿಲ್ಲುವ ಮುನ್ನ ಪೂರ್ವಸಿದ್ಧತೆ ಮಾಡಿಕೊಳ್ಳಿ ಎಂದು ಬಿಜೆಪಿ ಹಿರಿಯ ನಾಯಕ ಅರುಣ ಜೈಟ್ಲಿ ಸಚಿವರಿಗೆ ಕಿವಿಮಾತು ಹೇಳಿದರು.

ಗುರುವಾರ ಸುತ್ತೂರಿನಲ್ಲಿ ಸಚಿವರ ಸಹಚಿಂತನಾ ಶಿಬಿರದ ಕೊನೆಯ ದಿನ ನಮ್ಮ ಪ್ರತಿಭೆ, ಸಾರ್ವಜನಿಕ ಸಂಬಂಧ ಮತ್ತು ಮಾಧ್ಯಮ ನಿರ್ವಹಣೆ ವಿಷಯದ ಮೇಲೆ ಅರುಣ್ ಜೈಟ್ಲಿ ಸಚಿವರಿಗೆ ನೀತಿ ಪಾಠ ಹೇಳಿದರು. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನೀವೆಲ್ಲರೂವ ಹೋರಾಟ ನಡೆಸಿದ್ದೀರಿ. ಕಷ್ಟಪಟ್ಟು ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಿದ್ದೀರಿ. ಸಚಿವರಾಗಿ ಕೆಲಸ ಮಾಡುವಾಗ ಪಕ್ಷದ ಚಿಂತನೆ ಮತ್ತು ನಿಮ್ಮ ಯೋಜನೆಯಲ್ಲಿ ಸಾಮ್ಯತೆ ಇರಲೇಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸರಕಾರಕ್ಕೆ ಗಂಡಾಂತರ ತಂದಿಡುತ್ತದೆ ಎಂದರು.

ಈಗ ಇಡೀ ದೇಶ ಕರ್ನಾಟಕದತ್ತ ನೋಡುತ್ತಿದೆ. ಇಲ್ಲಿ ಸ್ವಲ್ಪ ವ್ಯತ್ಯಾಸ, ಭಿನ್ನಾಭಿಪ್ರಾಯ ಮೂಡಿದರೂ ನಮ್ಮಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿಯಾಗುತ್ತಿದೆ. ಬಹಳ ಕಷ್ಟಪಟ್ಟು ಅಧಿಕಾರಕ್ಕೆ ತಂದ ಸರಕಾರಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಪಕ್ಷದ ಸಂಘಟನೆ ಮತ್ತು ಉತ್ತಮ ಆಡಳಿತ ನೀಡಲು ಮಾತ್ರ ಸಚಿವರು ಮುಂದಾಗಬೇಕು ಎಂದು ಜೈಟ್ಲಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+