ಸರಕಾರಕ್ಕೆ ಪರಿಜ್ಞಾನವಿಲ್ಲ, ಕುಮಾರಸ್ವಾಮಿ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನತೆಯ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಲ್ಲಿ ಸರಕಾರ ವಿಫಲವಾಗಿದ್ದು, ಈ ಸರಕಾರಕ್ಕೆ ಮಾನವೀಯತೆಯೇ ಇಲ್ಲ ಎಂದರು. ಮಳೆಯಿಂದಾಗಿ ಸುಮಾರು 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜಾನುವಾರುಗಳು ಕೊಚ್ಚಿ ಹೋಗಿವೆ. ಬೆಳೆಗಳು ಸಂಪೂರ್ಣ ನಾಶವಾಗಿವೆ. ಆ ಜಿಲ್ಲೆಗಳಿಗೆ ಇನ್ನೂ ಯೂವುದೇ ಮಂತ್ರಿಗಳು ಹೋಗಿಲ್ಲ. ಪರಿಹಾರ ಕಾರ್ಯಗಳೇನು ಮಾಡಬೇಕು ಎಂಬ ಕುರಿತು ಅಧಿಕಾರಿಗಳಿಗೆ ನಿರ್ದೇಶನವನ್ನೇ ನೀಡಿಲ್ಲ ಎಂದು ಅವರು ಹರಿಹಾಯ್ದರು.
ಜನರ ಸಂಕಷ್ಟ ಇವರಿಗೆ ಬೇಕಿಲ್ಲ. ಇವರಿಗೆ ಸಹಚಿಂತನೆಯ ಬೈಠಕ್ ಮಾತ್ರ ಬೇಕಾಗಿದೆ. ಪತ್ರಿಕೆಯಲ್ಲಿಯೇ ಬಂದಿರುವಂತೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ರುಚಿಕರ ಬೋಜನ ಮಾಡಿಕೊಂಡು ಜನರನ್ನು ಮರೆತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications