ನಾವು ಸರ್ವಜ್ಞರಲ್ಲ, ಭಟ್ಟಂಗಿತನ ಗೊತ್ತಿಲ್ಲ : ರವಿ

ಕಾಂಗ್ರೆಸ್ ನವರಿಗೆ ಸೋನಿಯಾ ಭಜನೆ, ಜೆಡಿಎಸ್ ನಾಯಕರಿಗೆ ದೇವೇಗೌಡ ಮತ್ತು ಕುಟುಂಬದ ಭಟ್ಟಂಗಿತನ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ನಾವು ಅಭಿವೃದ್ದಿಯ ಭಜನೆ ಮಾಡುತ್ತಿದ್ದೇವೆ. ಆರ್ ಎಸ್ ಎಸ್ ನಮ್ಮ ಮಾತೃ ಸಂಸ್ಥೆ. ಮಾರ್ಗದರ್ಶನದ ಅಗತ್ಯವಿದ್ದಾಗ ತಾಯಿ ಬಳಿಹೋಗುತ್ತೇವೆ. ಮಲತಾಯಿ ಮಕ್ಕಳು ಇದಕ್ಕೆ ಯಾಕೆ ಸಂಕಟ ಪಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪರಿಣಾಮಕಾರಿ ಕಾರ್ಯನಿರ್ವಹಣೆ ಮತ್ತು ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನದಿಂದ ರಾಜ್ಯವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಸುತ್ತೂರು ಮಠದಲ್ಲಿ ಸಚಿವ ಸಂಪುಟ ಸದಸ್ಯರಿಗೆ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅದನ್ನು ಟೀಕಿಸುವ ಮೂಲಕ ಪ್ರತಿಪಕ್ಷ ನಾಯಕರು ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ ಎಂದು ರವಿ ತರಾಟೆಗೆ ತೆಗೆದುಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications