39178gulbargaರಾಜ್ಯಕ್ಕೆ ಮತ್ತಷ್ಟು ಪಾಸ್ಪೋರ್ಟ್ ಕಚೇರಿಗಳು/news/2009/10/29/karnataka-gets-more-passport-facilitation-centres.htmlಬೆಂಗಳೂರು,ಅ.29: ನಗರದಲ್ಲಿ ಮತ್ತೊಂದು ಪಾಸ್ ಪೋರ್ಟ್ ವಿತರಣಾ ಕಚೇರಿ ತೆರೆಯಲು ಭಾರತ ವಿದೇಶಾಂಗ ಖಾತೆ ಸಚಿವಾಲಯ ನಿರ್ಧರಿಸಿದೆ. ಈ ಕಚೇರಿ 2009ರ ಡಿಸೆಂಬರ್ 15 ರಿಂದ ಕಾರ್ಯಾರಂಭ ಮಾಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಎಂ ಕೃಷ್ಣ ಬುಧವಾರ ನಗರದಲ್ಲಿ ಪ್ರಕಟಿಸಿದರು.ದೇಶಾದ್ಯಂತ 167 ನಗರಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಸಚಿವಾಲಯ ತೀರ್ಮಾನಿಸಿದ್ದು 39939http://kannada.oneindia.com/img/2009/10/29-sm-krishna1.jpg39178gulbargaಮದ್ವಿ ಯಾಕ್ ಮಾಡ್ಕೊತಾರ? ಅದೂ ಗುಲ್ಬರ್ಗಾದಾಗ!/travel/karnataka/best-of-karnataka/2009/1104-trip-to-pot-boiler-weather-gulbarga.htmlಮದವಿ ಯಾಕ್ ಆಗ್ತಾರ? ಆಗೋದ ಖರೆ ಆದ್ರ ಗುಲ್ಬರ್ಗಾದಾಗ ಯಾಕ್ ಆಗ್ತಾರ? ಮುಂದಿನ ದಪ ಮದ್ವಿಗೆ ಪತ್ರಿಕೆ ಕಳಿಸೋ ಮುಂಚೆ ಎಸಿ ರೂಮ್ ಬುಕ್ ಮಾಡಿ ಕರೀರಲಾ.. ಎಂದು ಬೇಡಿಕೊಳ್ಳುವ ಒಂದು ಬೆವರಿಳಿಸುವ ಪ್ರವಾಸ ಕಥನ.* ಮಹೇಶ್ ದೇಶಪಾಂಡೆ, ಬೆಂಗಳೂರು"ಮಳೆ ಬಂತು ರಪಾ ರಪಾ, ಗಿಡಗಳು ತೊಯ್ದು ತಪಾ ತಪಾ, ಅಂಗಳವೆಲ್ಲಾ ನೀರಾಯ್ತು, ಹೂವಿನ ತೋಟಕ್ಕೆ ಖುಷಿಯಾಯ್ತು" 40039http://kannada.oneindia.com/img/2009/11/04-mahesh-deshpande1.jpg39178gulbargaರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!/literature/my-karnataka/2009/1105-flood-tinthini-village-gulbarga-part4.htmlಮಧ್ಯವರ್ತಿಗಳ ತಡೆ:ಮಧ್ಯವರ್ತಿಗಳನ್ನು ತಡೆಯುವುದರಿಂದ ನಾವು ನಮ್ಮ ಕಾರ್ಯಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸಬಹುದು. ಇದಕ್ಕೆ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು,1. ಸ್ಥಳೀಯವಾಗಿ ಕೆಲಸ ಮಾಡುವ, ಸಂತ್ರಸ್ತರಿಗೆ ನಿಜಾವಾಗಿ ನೆರವಾಗುತ್ತಿರುವ ಸ್ವಯಂ-ಸೇವಕರು/ಸಂಘಗಳನ್ನೂ ಗುರುತಿಸುವುದು.2. ಹಣವನ್ನು ಮೂರನೇ ವ್ಯಕ್ತಿಗಳಿಗೆ ಕೊಡುವುದನ್ನು ನಿಲ್ಲಿಸಿ ನೆರವಾಗಿ ಅವರಿಗೆ ತಲುಪುವಂತೆ ನೋಡಿಕೊಳ್ಳುವುದು.3. ಆ ತಾಲೂಕಿನ ಬ್ಯಾಂಕ್ ನಲ್ಲಿ ಖಾತೆ ತೆರೆದು ಅದರ ಮುಖಾಂತರ ವ್ಯವಹಾರ ನಡೆಸುವುದು.4. ತಾಲೂಕಿಗೆ 40059http://kannada.oneindia.com/img/2009/11/05-tinthini-village4.jpg39178gulbargaರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!/literature/my-karnataka/2009/1105-flood-tinthini-village-gulbarga-part3.htmlಸಂತ್ರಸ್ತರಿಗೆ ಬೇಕಿರುವುದು:ಇವರಿಗೆ ನಮ್ಮ ಹಣದ ಅವಶ್ಯಕತೆಗಿಂತಲೂ, ಬದುಕಲು ಶಾಶ್ವತವಾಗಿ ಆಸರೆ ಬೇಕಾಗಿದೆ. ಈಗಾಗಲೇ ಬಟ್ಟೆ, ಹಾಸು ಹೊದಿಕೆಗಳು, ಪಾತ್ರೆಗಳು ಬಂದಿದ್ದರೂ ಅವರ ಮುಂದಿನ ಜೀವನ ನಡೆಸಲು,1. ಶಾಶ್ವತವಾದ ಮನೆ.2. ಬೇಸಾಯ ಮಾಡಲು ಹಸುಗಳು. ಹಾಗು,3. ತಮ್ಮ ಜಮಿನುಗಳಿಗೆ ಪಂಪ್ ಸೆಟ್ ಸೌಲಭ್ಯ ಬೇಕಾಗಿದೆ.ಅಲ್ಲಿನ ಸ್ವಯಂಸೇವಾ ತಂಡದಿಂದ ದೊರಕಬಹುದಾದ ಸಹಾಯಗಳು:ಕಳೆದ ಬಾರಿಯ ರಾಜ್ಯೋತ್ಸವದ ಪ್ರಯುಕ್ತ ನಾವು ವನವಾಸಿ ಕಲ್ಯಾಣ 40060http://kannada.oneindia.com/img/2009/11/05-tinthini-village3.jpg39178gulbargaರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!/literature/my-karnataka/2009/1105-flood-tinthini-village-gulbarga-part2.htmlಪ್ರವಾಹದ ಪರಿಣಾಮ ಮತ್ತು ಇಲ್ಲಿಯವರೆಗಿನ ಪರಿಹಾರ ಕಾರ್ಯಗಳು :ಉತ್ತರ ಕರ್ನಾಟಕ ಅಷ್ಟೇನೂ ಅಭಿವೃದ್ಧಿ ಕಾಣದ, ವ್ಯವಸಾಯವನ್ನು ಅವಲಂಬಿಸಿ ಬದುಕುವ ಜನರ ಪ್ರದೇಶ. ನಾವು ಭೇಟಿ ಕೊಟ್ಟ ಗ್ರಾಮದಲ್ಲಿನವರು ಮೂಲತಃ ವ್ಯವಸಾಯ ಹಾಗು ದಿನಗೂಲಿಯಿಂದ ತಮ್ಮ ಜೀವನ ಸಾಗಿಸುತ್ತಾರೆ. ಇವರ ಮನೆಗಳು ಸುಮಾರು 1 ಚದರದಷ್ಟಿದ್ದು, ಒಂದು ದಿನಕ್ಕೆ 80 ರೂ. ಆದಾಯ ಉಳ್ಳವರು. ಆ ದಿನದ ದುಡಿಮೆ 40061http://kannada.oneindia.com/img/2009/11/05-tinthini-village2.jpg36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg124417ಗುಲ್ಬರ್ಗಾಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳ : ಬಚ್ಚೇಗೌಡ/news/2009/01/04/ktaka-job-fair-udyog-mela-extended-all-districts.htmlಮೈಸೂರು, ಜ. 4: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದರು. ಮೈಸೂರಿನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ಮತ್ತು ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕೌಶಲ್ಯ ಆಯೋಗ, ಉದ್ಯೋಗ ಮತ್ತು 33861http://kannada.oneindia.com/img/2009/01/04-udyog-mela-mysore.jpg124417ಗುಲ್ಬರ್ಗಾಗುಲ್ಬರ್ಗಾದ ಬುದ್ಧ ವಿಹಾರ ಲೋಕಾರ್ಪಣೆ/news/2009/01/07/president-patil-inaugurates-buddha-vihar-gulbarga.htmlಗುಲ್ಬರ್ಗಾ, ಜ. 7 : ಗುಲ್ಬರ್ಗಾದ ಐತಿಹಾಸಿಕ ಬುದ್ಧ ವಿಹಾರವನ್ನು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಇಂದು ವಿದ್ಯಕ್ತ್ ವಾಗಿ ವಿದ್ಯುನ್ಮಾನ ಗುಂಡಿ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು. ಸರಿ ಸುಮಾರು 75 ಎಕರೆ ಪ್ರದೇಶದಲ್ಲಿ 32,450 ಚದರ ಅಡಿ ವ್ಯಾಪ್ತಿಯಲ್ಲಿ ತೆಲೆ ಎತ್ತಿರುವ ಬುದ್ಧ ವಿಹಾರ ದೇಶ, ವಿದೇಶಿಗರ ಕಣ್ಮನ ಸೆಳೆಯುತ್ತಿದೆ. ಮಂದಿರ ನಿರ್ಮಾಣದಲ್ಲಿ ಅಜಂತಾ, 33935http://kannada.oneindia.com/img/2009/01/07-buddha-vihar-gulbarga.jpg124417ಗುಲ್ಬರ್ಗಾಕರ್ನಾಟಕದ ಹೆಮ್ಮೆಯ ಕಲಾವಿದ ಪಂಡಿತ/literature/people/2009/0107-tribute-to-gulbarga-born-artist-sm-pandit.htmlಬೆಂಗಳೂರು, ಜ 7 : ಗುಲ್ಬರ್ಗ ರಂಗಮಂದಿರಕ್ಕೆ ಸರ್ಕಾರವು ಖ್ಯಾತ ಕಲಾವಿದ ಡಾ. ಎಸ್. ಎಂ. ಪಂಡಿತ್ ಅವರ ಹೆಸರನ್ನಿಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ. ಎಸ್.ಎಂ. ಪಂಡಿತ್ ಗುಲ್ಬರ್ಗದವರಾಗಿದ್ದು, ದೇಶ ವಿದೇಶಗಳಲ್ಲಿ ಮನ್ನಣೆ ಪಡೆದವರು. 1916ರಲ್ಲಿ ಗುಲ್ಬರ್ಗದಲ್ಲಿ ಜನಿಸಿದ ಡಾ. ಎಸ್.ಎಂ. ಪಂಡಿತ್ ತಮ್ಮ ಹತ್ತನೇ ವಯಸ್ಸಿನಲ್ಲೇ ಕುಂಚವನ್ನು ಕೈಲಿ ಹಿಡಿದವರು. ಮದ್ರಾಸ್ ಸ್ಕೂಲ್ 33948http://kannada.oneindia.com/img/2009/01/07-sm-pandit-rangamandir.jpg124417ಗುಲ್ಬರ್ಗಾಗುಲ್ಬರ್ಗಾ ಜನ ನನ್ನ ಕೈಬಿಡುವುದಿಲ್ಲ, ಖರ್ಗೆ/news/2009/04/01/mallikarjun-kharge-confident-of-winning-ls-poll.htmlಗುಲ್ಬರ್ಗಾ, ಏ. 1 : ಸೋಲಿಲ್ಲದ ಸರದಾರ, ಒಂಬತ್ತು ಬಾರಿ ವಿಧಾನಸೌಧಕ್ಕೆ ಪ್ರವೇಶಿಸಿದ ರಾಜ್ಯದ ಏಕೈಕ ಮುಖಂಡ, ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಥಮ ಬಾರಿಗೆ ಗುಲ್ಬರ್ಗಾ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಲ್ಲದ ಮನಸ್ಸಿನಿಂದ ಅಖಾಡಕ್ಕಿಳಿದಿದ್ದಾರೆ. ಹೈಕಮಾಂಡ್ ಆದೇಶದ ಮೇರೆಗೆ ಕಣಕ್ಕಿಳಿದಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಸಾಧಿಸುವ ವಿಶ್ವಾಸವನ್ನು 35637http://kannada.oneindia.com/img/2009/04/01-kharge2.jpg124417ಗುಲ್ಬರ್ಗಾನನಗೂ ಸಿಎಂ ಆಗುವ ಆಸೆಯಿದೆ, ಖರ್ಗೆ/news/2009/04/07/i-am-senior-leader-also-cm-post-aspirant-kharge.htmlಗುಲ್ಬರ್ಗ, ಏ. 7 : ನಿಮಗಿರುವಂತೆ ನನಗೂ ಆಸೆಯಿದೆ, ನಿಮಗಿಂತ 10 ವರ್ಷ ಹಿರಿಯ ನಾನು, ನೀವು ಆರು ಸಲ ಚುನಾವಣೆ ಗೆದ್ದಿದ್ದರೆ ನಾನು 10 ಸಲ ಗೆದ್ದಿದ್ದೇನೆ. ನಾನು ಮುಖ್ಯಮಂತ್ರಿ ಆಗೋಕೆ ಇಷ್ಟ ಪಟ್ರೆ ಏನ್ರೀ ತಪ್ಪು. ಮಾತು ಹಿಡಿತದಲ್ಲಿರಲಿ ಹೀಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದವರು ಪ್ರತಿಪಕ್ಷದ ನಾಯಕ ಹಾಗೂ ಗುಲ್ಬರ್ಗ 35781http://kannada.oneindia.com/img/2009/04/07-kharge2.jpgnews"> ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭಾವಂತರು : ರಾವ್ | UR Rao | Science and Information Academy | Gulbarga | Yeddyurappa| ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭಾವಂತರು : ರಾವ್ - Kannada Oneindia

ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭಾವಂತರು : ರಾವ್

 Science should reach rural students ; UR Rao
ಗುಲಬರ್ಗಾ, ಸೆ. 24 : ಗ್ರಾಮೀಣ ಪ್ರದೇಶದ ಮಕ್ಕಳು ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಸಂಚಾರಿ ವಾಹನಗಳ ವಿಜ್ಞಾನ ಪ್ರಯೋಗಾಲಯಗಳನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಯು.ಆರ್.ರಾವ್ ಅವರು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದ್ವಿತೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಸ್ವಾತಂತ್ರ್ಯ ಬಂದು 63 ವರ್ಷಗಳಲ್ಲಿ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತುಂಬಾ ಮುಂದುವರಿದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 30 ಕೋಟಿ ಇದ್ದ ದೇಶದ ಜನಸಂಖ್ಯೆ ಈಗ 100 ಕೋಟಿ ದಾಟಿದೆ. ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೇಡಿಕೆ ಹೆಚ್ಚಾಗಿದ್ದು, ತಂತ್ರಜ್ಞಾನದ ನೆರವಿನೊಂದಿಗೆ ಹೆಚ್ಚಿನ ಆಹಾರ ಸಾಮಗ್ರಿಗಳನ್ನು ಉತ್ಪಾದಿಸಬಹುದಾಗಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅಂತರ್ಜಾಲದ ಈ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನವು ಸಮಾಜದ ಎಲ್ಲಾ ಆಯಾಮಗಳನ್ನು ನೇರವಾಗಿ ನಿಯಂತ್ರಿಸುತ್ತಿದೆ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ 2 ಎಕರೆ ಭೂಮಿಯನ್ನು ಕೊಡಲಾಗುವುದು. ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಮಂಜೂರು ಮಾಡಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಆರ್ಥಿಕ ನೆರವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಅಮೆರಿಕಾ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಪ್ರಗತಿಯಲ್ಲಿ ಭಾರತೀಯರ ಪಾತ್ರ ಬಹಳ ದೊಡ್ಡದಿದೆ. ಇಂಥ ಪ್ರತಿಭಾವಂತರನ್ನು ಈ ನಾಡಿನ ಅಭಿವೃದ್ಧಿಯಲ್ಲಿ ಉಪಯೋಗಿಸಿಕೊಳ್ಳಲು ಹಿಂದೇಟು ಹಾಕುವುದು ಸರಿಯಲ್ಲ. ಈ ಬಗ್ಗೆ ಚಿಂತನೆಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮೀನುಗಾರಿಕೆ ಸಚಿವ ಆನಂದ ವಸಂತ ಅಸ್ನೋಟಿಕರ್ ಅವರು, ಕಳೆದ ಒಂದು ದಶಕದಲ್ಲಿ ಕರ್ನಾಟಕ ಹಲವಾರು ಸುಧಾರಣೆಗಳನ್ನು ಕಂಡಿದೆ. ವಿಶ್ವವಿದ್ಯಾಲಯಗಳಿಂದ ಬರುತ್ತಿರುವ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಹೆಚ್ಚಿದೆ ಎಂದರು. ನಮ್ಮಲ್ಲಿ ಕೇವಲ ಶೇಕಡ 12.4 ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುದಿದ್ದರೆ ಮುಂದುವರಿದ ದೇಶಗಳಲ್ಲಿ ಈ ಪ್ರಮಾಣ ಶೇ. 25ಕ್ಕೂ ಹೆಚ್ಚಿದೆ. ಉನ್ನತ ಶಿಕ್ಷಣ ಪ್ರವೇಶದ ಪ್ರಮಾಣವನ್ನು ನಾವು ಶೇ.25 ಕ್ಕೆ ಹೆಚ್ಚಿಸಬೇಕಾಗಿದೆ. ಅದೇ ರೀತಿ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಈಗ ಕೇವಲ ಶೇ 5ರಷ್ಟು ಕನಿಷ್ಠ ಶೇ.10ಕ್ಕೆ ಈ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಪ್ರತಾಪ್‌ಸಿಂಗ್ ತಿವಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಾದೇಶಿಕ ಸಂಯೋಜಕ ಹಾಗೂ ಸದಸ್ಯ ಕಾರ್ಯದರ್ಶಿ ಪ್ರೊ.ಪಿ.ಎಸ್.ಶಂಕರ್, ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಎ.ಎಂ.ಪಠಾಣ್, ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ ಪಿ. ಬಲರಾಮ್, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ, ಸಚಿವ ರೇವುನಾಯಕ್ ಬೆಳಮಗಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ್ ಪಾಟೀಲ್, ಎಂ.ಎಸ್.ಐ.ಎಲ್. ಅಧ್ಯಕ್ಷ ಡಾ ವಿಕ್ರಮ ಪಾಟೀಲ್, ಶಾಸಕರಾದ ಸುನೀಲ್ ವಲ್ಲ್ಯಾಪುರೆ, ಚಂದ್ರಶೇಖರ ಪಾಟೀಲ್ ರೇವೂರ, ವಾಲ್ಕೀಕಿ ನಾಯಕ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದ ಅಂಗವಾಗಿ ಪದ್ಮಭೂಷಣ ಪುರಸ್ಕೃತ ಪ್ರೊ ರೊದ್ದಮ್ ನರಸಿಂಹ ಅವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2009ನೇ ಸಾಲಿನ ಪ್ರತಿಷ್ಠಿತ ವೈಜ್ಞಾನಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ ಪಿ. ಬಲರಾಮ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+