36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg38318ಯಡಿಯೂರಪ್ಪಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg38318ಯಡಿಯೂರಪ್ಪಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg38318ಯಡಿಯೂರಪ್ಪಕನ್ನಡ ಅನುಷ್ಠಾನಕ್ಕೆ ಕಟಿ ಬದ್ಧ: ಯಡಿಯೂರಪ್ಪ/news/2009/01/02/kannada-implementation-is-yeddyurappa-resolution.htmlಬೆಂಗಳೂರು, ಜ. 2 : ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆಯು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು. ಗೃಹ ಕಚೇರಿ ಕೃಷ್ಣ ದಲ್ಲಿ ಕನ್ನಡ ಪ್ರಾಧಿಕಾರವು 2009 ರ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವೆಂದು ಘೋಷಿಸಿ ಅನುಷ್ಠಾನಗೊಳಿಸುವ ಬಗ್ಗೆ ಹೊರತಂದಿರುವ 'ದಾರಿ ದೀವಿಗೆ' ಎಂಬ ಕೈಪಿಡಿ, 33824http://kannada.oneindia.com/img/2009/01/02-kannada-anustana-varsha.jpg38318ಯಡಿಯೂರಪ್ಪನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpg38318ಯಡಿಯೂರಪ್ಪಭಯೋತ್ಪಾದನೆ ವಿರುದ್ಧ ಸಮರ : ಯಡಿಯೂರಪ್ಪ/news/2009/01/04/anti-terrorism-campaign-for-youths-yeddyurappa.htmlಮಂಡ್ಯ, ಜ. 14 : ದೇಶದ ಅಭಿವೃದ್ಧಿ ಪಥವನ್ನು ದಾರಿತಪ್ಪಿಸುವ ಯತ್ನವೇ ಭಯೋತ್ಪಾದನೆ. ಭಯೋತ್ಪಾದನೆಯ ಮೂಲೋತ್ಪಾಟನೆ ಹಾಗೂ ದೇಶದ ಅಭಿವೃದ್ಧಿ ಪಥವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹಿರಿಯರು, ಚಿಂತಕರುಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ರಾಷ್ಟ್ರದ ಯುವಶಕ್ತಿಯನ್ನು ನಿರ್ಮಿಸುವ ಕಾರ್ಯ ಮಾಡೋಣ. ಆಗ ಮಾತ್ರ ದೇಶದ ಐಕ್ಯತೆ, ಸುಭದ್ರತೆ ಹಾಗೂ ಅಭಿವೃದ್ಧಿಯ ಕಾರ್ಯ ಯಶ ಸಾಧಿಸಬಲ್ಲದು ಎಂದು ರಾಜ್ಯದ 33864http://kannada.oneindia.com/img/2009/01/04-cm-srirangapatna1.jpgnews"> ನೇತಾಜಿ ಕುಟುಂಬ ಕಥೆ ;ಹೆಗಡೆ ಸುಳ್ಳಿನ ಕಂತೆ | Netaji Subhash Chandra Bose| AnitaBose| MP Ananthkumar Hegade| DB Kalmankar| Rajarajeshwari nagar| Yeddyurappa|ನೇತಾಜಿ ಕುಟುಂಬ ಕಥೆ ;ಹೆಗಡೆ ಸುಳ್ಳಿನ ಕಂತೆ - Kannada Oneindia

ನೇತಾಜಿ ಕುಟುಂಬ ಕಥೆ ;ಹೆಗಡೆ ಸುಳ್ಳಿನ ಕಂತೆ

File foto Netaji s daughter Anita
ಬೆಂಗಳೂರು, ಸೆ. 24: 'ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಪುತ್ರಿ ಆಸ್ಟ್ರಿಯಾದಲ್ಲಿ ಇದ್ದಾರೆ. ಅವರಿಗೆ ಸರಕಾರಿ ಗೌರವ ಸಿಕ್ಕಿಲ್ಲ. ಅವರನ್ನು ಇಲ್ಲಿಗೆ ಆಹ್ವಾನಿಸುವ ಪ್ರಯತ್ನ ನಡೆದಿದೆ' ಎಂಬ ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಶುದ್ಧ ಸುಳ್ಳಿನ ಕಂತೆ. ಸುಭಾಷ್‌ಚಂದ್ರ ಬೋಸ್ ಪುತ್ರಿ ಹಾಗೂ ಕುಟುಂಬದವರನ್ನು ಪತ್ತೆ ಮಾಡಲು ಸತತ3 ವರ್ಷದಿಂದ ಯತ್ನಿಸಿ ಯಶಸ್ಸು ಸಿಕ್ಕಿದೆ. ಅವರು ಆಸ್ಟ್ರಿಯಾದಲ್ಲಿ ನೆಲೆಸಿರುವುದು ಖಚಿತವಾಗಿದೆ. ನಮ್ಮಲ್ಲಿಗೆ ಬರಲು ಒಪ್ಪಿದ್ದಾರೆ' ಎಂದು ಶಿರಸಿಯಲ್ಲಿ ಕುಳಿತುಕೊಂಡು ಸಂಸದರು ರೀಲು ಬಿಟ್ಟಿದ್ದರು.

ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಾಡಬೇಕಾದ ಕೆಲಸ ಬೆಟ್ಟದಷ್ಟು ಇರುವಾಗ, ಪತ್ತೇದಾರಿ ಕೆಲಸಕ್ಕೆ ಅನಂತಕುಮಾರ್ ಹೆಗಡೆ ಯಾಕೆ ಕೈಹಾಕಿದರೋ ಗೊತ್ತಾಗುತ್ತಿಲ್ಲ. ಅದೂ ಇಷ್ಟು ಬಾಲಿಶವಾಗಿ. ಸಂಸದರೊಬ್ಬರು ಇಂಥ ಕಾರ್ಯಕ್ಕೆ ಮುಂದಾ ಗುವುದು ತಪ್ಪಾಗಲಾರದು. ಪೂರ್ವಾಪರ ಯೋಚಿ ಸದೆ ಮುಂದಡಿ ಇಟ್ಟರೆ ನಗುವವರ ಮುಂದೆ ಜಾರಿ ಬಿದ್ದಂತಾಗುತ್ತದೆ. ಹೆಗಡೆ ಕತೆಯೂ ಈಗ ಹೀಗೇ ಆಗಿದೆ. ಹೆಗಡೆ ಈ ಸಾಹಸ'ಕ್ಕೆ ಅಣಿಯಾಗುವ ಮುನ್ನ ಬೆಂಗಳೂರಿನ ರಾಜರಾಜೇಶ್ವರಿನಗರಕ್ಕೆ ಒಮ್ಮೆ ಭೇಟಿ ನೀಡಿದ್ದರೂ ಶ್ರಮ ತಪ್ಪುತ್ತಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದರೂ ಸಾಕಿತ್ತು. ಇದಾವುದನ್ನೂ ಮಾಡದೆ, ತಾವೇ ತೋಡಿಕೊಂಡ ಗುಂಡಿಯೊಳಗೆ ಎಡವಿ ಬಿದ್ದಿದ್ದಾರೆ.

ಅಂದಹಾಗೆ ಬೋಸ್ ಪುತ್ರಿ ಅನಿತಾ ಫಾಫ್ ಕರ್ನಾಟಕಕ್ಕೇ ಬಂದಿದ್ದರು. ಅವರಿಗೆ ಸರಕಾರಿ ಗೌರವವೂ ಸಂದಿದೆ. 2000 ನೇ ಇಸವಿಯಲ್ಲಿ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್‌ನಲ್ಲಿ ಸುಭಾಷ ಭವನ' ನಿರ್ಮಾಣಕ್ಕೆ ಫಾಫ್ ಅಡಿಗಲ್ಲು ಹಾಕಿದ್ದಾರೆ. ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಚಿವರಾದ ಧರ್ಮಸಿಂಗ್, ಡಿ.ಬಿ. ಚಂದ್ರೇಗೌಡ, ರಾಣಿ ಸತೀಶ್ ಭಾಗವಹಿಸಿದ್ದರು. ನೇತಾಜಿ ಸುಭಾಷ್‌ಚಂದ್ರ ಬೋಸ್ ರಿಸರ್ಚ್ ಆಂಡ್ ಮಲ್ಟಿ ಡೆವಲಪ್‌ಮೆಂಟ್ ಟ್ರಸ್ಟ್' ಈ ಕಾರ್ಯಕ್ರಮ ಆಯೋಜಿಸಿತ್ತು. ಅಂದಿನ ಸಭಾಪತಿ ಡಿ.ಬಿ. ಕಲ್ಮಣಕರ್ ಇದರ ಸಂಸ್ಥಾಪಕ ಅಧ್ಯಕ್ಷರು. ಈ ವಿಚಾರ ಬಹಿರಂಗ ಪಡಿಸಿದವರು ಟ್ರಸ್ಟಿನ ಈಗಿನ ಸಂಘಟನಾ ಕಾರ್ಯದರ್ಶಿ ಎಂ. ರಾಜಕುಮಾರ್. ಇದಕ್ಕೆ ಅವರು ದಾಖಲೆಯನ್ನೂ ಒದಗಿಸಿದ್ದಾರೆ.

ಅದರ ಪ್ರಕಾರ, ಅನಿತಾ ಫಾಫ್ ಇರುವಿಕೆಯನ್ನು 1997ರಲ್ಲೇ ಶೋಧಿಸಲಾಗಿತ್ತು. ಅವರು ಜರ್ಮನಿಯಲ್ಲಿ ವಾಸವಾಗಿರುವುದು ಗೊತ್ತಾದ
ಮೇಲೆ ಡಿ.ಬಿ. ಕಲ್ಮಣಕರ್ ನೇತೃತ್ವದ ನಿಯೋಗ ಅಲ್ಲಿಗೆ ತೆರಳಿತ್ತು. ನಿಯೋಗದಲ್ಲಿ ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ
ಇದ್ದರು. ಬೋಸ್ ಪುತ್ರಿ ಹಿಂದೆಯೇ ಇಲ್ಲಿಗೆ ಬಂದಿದ್ದರು ಸಚಿತ್ರ ಸುಭಾಷ' ಬಿಡುಗಡೆ ಮಾಡುತ್ತಿರುವ ಬೋಸ್ ಪುತ್ರಿ ಅನಿತಾ ಫಾಫ್. ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ಎಂ. ರಾಜಕುಮಾರ್ ಜತೆಗಿದ್ದಾರೆ.

ಸುಭಾಷ ಭವನದ ಶಂಕುಸ್ಥಾಪನೆಗೆ ಬರುವಂತೆ ಆಹ್ವಾನ ಕೊಟ್ಟಿದ್ದರಿಂದ ಫಾಫ್, ಅತ್ಯಂತ ಖುಷಿಯಿಂದ ಆಗಮಿಸಿದ್ದರು. 2000 ನೇ ಇಸವಿಯ ಮಾರ್ಚ್ 17 ರಂದು ಈ ಕಾರ್ಯಕ್ರಮ ಜರುಗಿತ್ತು. ಟ್ರಸ್ಟ್ ಹೊರ ತಂದಿದ್ದ ಸಚಿತ್ರ ಸುಭಾಷ' ಕೃತಿಯನ್ನೂ ಅವರು ಬಿಡುಗಡೆ ಮಾಡಿದ್ದರು. ಅನಿತಾ ಫಾಫ್ ಅವರನ್ನು ರಾಜ್ಯದ ಅತಿಥಿ'ಯೆಂದು ಪರಿಗಣಿಸುವಂತೆ ಅಧಿಕಾರಿಗಳಿಗೆ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೂಚಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಉಪ ಕಾರ್ಯದರ್ಶಿ ಆಗಿದ್ದ ಎನ್. ಪ್ರಕಾಶ್ ಬರೆದ ಪತ್ರವೂ ಇದೆ. ಅದನ್ನು ಸಭಾಪತಿ ಕಲ್ಮಣಕರ್ ಅವರ ಮಾಹಿತಿಗಾಗಿ ಕಳುಹಿಸಿ ಕೊಡಲಾಗಿತ್ತು.

ಚಿತ್ರವೂ ನಕಲಿ
ಅನಂತ್‌ಕುಮಾರ್ ಹೆಗಡೆ ಹಳಿಯಿಲ್ಲದೇ ರೈಲು ಓಡಿಸಿದ್ದಾರೆ ಎಂಬುದಕ್ಕೆ ಇನ್ನೊಂದು ಮಹತ್ವದ ಸಾಕ್ಷಿ ಅನಿತಾ ಫಾಫ್ ಭಾವಚಿತ್ರ. ಹೆಗಡೆಯ ಅದ್ಭುತ ಆವಿಷ್ಕಾರ'ದಿಂದ ಸಿಕ್ಕಿರುವ ಚಿತ್ರಕ್ಕೂ ಫಾಫ್ ಅವರ ಅಸಲಿ ಫೋಟೋಕ್ಕೂ ಯಾವ ಕೋನದಿಂದಲೂ ಹೊಂದಾಣಿಕೆ ಆಗುವುದಿಲ್ಲ. ರಾಜ್ಯದ ಹಾಲಿ ಮುಖ್ಯಮಂತ್ರಿ, ನೇತಾಜಿ ಸಂಸ್ಥೆಯ ಟ್ರಸ್ಟಿ ಆಗಿರುತ್ತಾರೆ. ಹೀಗಾಗಿ ಯಡಿಯೂರಪ್ಪ ಇದರ ಟ್ರಸ್ಟಿಯೂ ಹೌದು. ಜತೆಗೆ ಕೇಂದ್ರದ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೆಸರೂ ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ದಾಖಲಾಗಿದೆ.

(ಸ್ನೇಹಸೇತು : ವಿಜಯಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+