ಕನ್ನಡದ ಹಬ್ಬ : ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ
ಶಿವಮೊಗ್ಗ, ಸೆ. 21 : ಜನಹಿತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ (ರಿ), ಪ್ರೆಸ್ ಪಬ್ಲಿಸಿಟಿ ಹಾಗೂ ವಿವಿಧ ಕನ್ನಡ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನವೆಂಬರ್ ತಿಂಗಳಿನಲ್ಲಿ ಕನ್ನಡದ ಹಬ್ಬ ವಿಶೇಷ ಕಾರ್ಯಕ್ರಮಗಳನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಕನ್ನಡದ ಹಬ್ಬದ ವಿಶೇಷ ನೆನಪಿಗಾಗಿ ಸಾಹಿತ್ಯದ ವಿವಿಧ ಪ್ರಾಕಾರಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು.
ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಅತ್ಯುತ್ತಮ ಮಹಿಳಾ ಸಾಹಿತ್ಯ ಕೃತಿ, ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿ, ವಿಮರ್ಶಾ ಸಂಕಲನ, ಪ್ರವಾಸ ಕಥನ ಹಾಗೂ ಅತ್ಯುತ್ತಮ ಸಾಹಿತ್ಯೇತರ ಪುಸ್ತಕ ಪ್ರಶಸ್ತಿ ಸೇರಿದಂತೆ ಒಟ್ಟು 8 ರಾಜ್ಯ ಪ್ರಶಸ್ತಿಗಳನ್ನು ನೀಡಲಾಗುವುದು.
ಪ್ರತಿಯೊಂದು ಪ್ರಶಸ್ತಿಯೂ ರೂ.2000 ನಗದು, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ. ಪುಸ್ತಕಗಳನ್ನು ಕನ್ನಡದ ಖ್ಯಾತ ಲೇಖಕರು ಆಯ್ಕೆ ಮಾಡುವರು. ಪ್ರಶಸ್ತಿ ನೀಡುವ ವಿಚಾರದಲ್ಲಿ ಸಂಬಂಧಿತ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ನೀತಿ ನಿಯಮಾವಳಿಗಳು
* ಓರ್ವ ಲೇಖಕರು ಎಷ್ಟು ಕೃತಿಗಳನ್ನು ಬೇಕಾದರೂ ಪ್ರಶಸ್ತಿಗಾಗಿ ಕಳುಹಿಸಬಹುದು.
* ಪ್ರತಿಯೊಂದು ಪುಸ್ತಕದ ಪ್ರವೇಶ ಶುಲ್ಕ ರೂ.200 ಆಗಿರುತ್ತದೆ.
* ಪ್ರತಿಯೊಂದು ಪುಸ್ತಕದ 3 ಪ್ರತಿಗಳನ್ನು ಕಳುಹಿಸಬೇಕು.
* ಪುಸ್ತಕದ ಮೇಲೆ ಅಥವಾ ಒಳಗೆ ಏನನ್ನೂ ಬರೆದಿರಬಾರದು.* ಪ್ರತ್ಯೇಕವಾದ ಹಾಳೆಯೊಂದರಲ್ಲಿ ತಮ್ಮ ಸ್ವ-ವಿವರ, ವಿಳಾಸ ಇತ್ಯಾದಿ ಬರೆದಿರಬೇಕು.
* ಪ್ರವೇಶ ಶುಲ್ಕವನ್ನು ಎಂ.ಓ. ಅಥವಾ ಪ್ರೆಸ್‌ಪಬ್ಲಿಸಿಟಿ ಹೆಸರಿನಲ್ಲಿ ಡಿ.ಡಿ.ಮೂಲಕ ಪುಸ್ತಕಗಳೊಂದಿಗೆ ರವಾನಿಸಬೇಕು.
* ಕೊನೆ ದಿನಾಂಕ 15 ಅಕ್ಟೋಬರ್, 2009.
ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ : ಪ್ರೆಸ್ ಪಬ್ಲಿಸಿಟಿ, ಕನ್ನಡದ ಹಬ್ಬ-ಪುಸ್ತಕ ಪ್ರಶಸ್ತಿ ವಿಭಾಗ, 3ನೇ ತಿರುವು, ಗಾರ್ಡನ್ ಏರಿಯಾ, ನೆಹರೂ ರಸ್ತೆ, ಶಿವಮೊಗ್ಗ.
ದೂರವಾಣಿ: 97383 72464.












Click it and Unblock the Notifications