ಬೈತುಲ್ಲ ಮೆಹಸೂದ್ ಸತ್ತಿಲ್ಲ; ತಾಲಿಬಾನ್ ಸ್ಪಷ್ಟನೆ

Baitullah is not dead, claims Taliban
ಇಸ್ಲಾಮಾಬಾದ್, ಆ.8: ಪಾಕಿಸ್ತಾನದ ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹ್ ಸೂದ್ ಸತ್ತಿಲ್ಲ ಎಂದು ಉಗ್ರವಾದಿ ಸಂಘಟನೆಯೊಂದರ ಮುಖ್ಯಸ್ಥ ಹೇಳಿದ್ದಾನೆ. ಬೈತುಲ್ಲಾ ಮೃತಪಟ್ಟಿದ್ದಾನೆ ಎಂಬ ಸುದ್ದಿ ಶುಕ್ರವಾರವಷ್ಟೇ ದೃಢಪಟ್ಟಿತ್ತು.

''ತೆಹರೀಕ್ ಇ ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಬೈತುಲ್ಲಾ ಹತನಾಗಿದ್ದಾನೆ ಎಂಬ ಸುದ್ದಿ ಹಾಸ್ಯಾಸ್ಪದ. ಪಾಕಿಸ್ತಾನದ ಗುಪ್ತಚರ ಇಲಾಖೆಯ ಕೈವಾಡವಿದ್ದು, ಮಾಧ್ಯಮಗಳನ್ನು ದಾರಿತಪ್ಪಿಸಿದೆ'' ಎಂದು ಹಕೀಮುಲ್ಲಾ ಮೆಸೂದ್ ಹೇಳಿದ್ದಾನೆ. ಓರಕಜಾಯ್, ಕುರ್ರಂ, ಕೈಬರ್ ಬುಟ್ಟಕಟ್ಟು ಪ್ರಾಂತಗಳನ್ನು ಮೆಸೂದ್ ನಿಯಂತ್ರಣದಲ್ಲಿವೆ.

ಎರಡು ದಿನಗಳ ಹಿಂದೆ ಅಮೇರಿಕಾ ನಡೆಸಿದ ಬಾರೀ ಕ್ಷಿಪಣಿ ದಾಳಿಯಲ್ಲಿ ಬೈತುಲ್ಲಾ ಸತ್ತಿರಬಹುದು ಎಂದು ನಾವು ದೃಢವಾಗಿ ನಂಬಿದ್ದೇವೆ. ಈ ಬಗ್ಗೆ ಸ್ವಲ್ಪ ಮಾಹಿತಿ ಲಭ್ಯವಾಗಿದೆ ಎಂದು ಜಿಯೋ ವಾಹಿನಿಯಲ್ಲಿ ತಿಳಿಸಲಾಗಿತ್ತು. ದಕ್ಷಿಣ ವಾಜರಿಸ್ತಾನ್ ಪ್ರದೇಶದಲ್ಲಿ ಬೈತುಲ್ಲಾನ ಪತ್ನಿ ಬುಧವಾರ ಹತರಾಗಿದ್ದಾರೆಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+