ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣದಲ್ಲಿ ಬಿಜೆಪಿ ಗೆಲುವು ಖಚಿತ : ಕಟ್ಟಾ

By Staff
|
Google Oneindia Kannada News

Minister Katta
ಚನ್ನಪಟ್ಟಣ, ಆ. 6 : ಕ್ಷೇತ್ರದ ಮರು ಚುನಾವಣೆಯಲ್ಲಿ ಸಿ.ಪಿ. ಯೋಗೀಶ್ವರ್ ಗೆಲುವು ಕಂಡರೆ ಜಿಲ್ಲಾ ಮಂತ್ರಿಯಾಗುವುದು ನಿಶ್ಚಿತ. ತಾವು ನನ್ನ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಘೋಸಿದರು.

ಪಕ್ಷದ ಕಚೇರಿ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಯೋಗೀಶ್ವರ್ ಅವರನ್ನು ಗೆಲ್ಲಿಸಿ ಕಳುಹಿಸಿ, ನಿಮ್ಮವರನ್ನೇ ಜಿಲ್ಲಾ ಮಂತ್ರಿ ಮಾಡುವ ಜವಾಬ್ದಾರಿ ನಮಗೆ ಬಿಡಿ ಎಂದರು. ಇದಕ್ಕೂ ಮುನ್ನ ಭಾವಾವೇಷದಿಂದ ಮಾತನಾಡುತ್ತಿದ್ದ ಸಚಿವ ರಾಮಚಂದ್ರಗೌಡ, ಯೋಗೀಶ್ವರ್ ಶಾಸಕರಾಗಿ ಆಯ್ಕೆಯಾಗಲಿದ್ದಾರೆ. ಅವರಿಗೆ ಆ ಅರ್ಹತೆ ಇದೆ ಎನ್ನುವ ಬದಲು ಅವರಿಗೆ ಮಂತ್ರಿಯಾಗುವ ಅರ್ಹತೆ ಇದೆ ಎಂದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ರಾಮಚಂದ್ರಗೌಡರ ಮಾತಿಗೆ ದನಿಗೂಡಿಸಿ, ರಾಮನಗರ ಜಿಲ್ಲಾ ಉಸ್ತುವಾರಿ ಹೊಣೆಂದ ತಾವು ವಿರಾಮ ತೆಗೆದುಕೊಳ್ಳಬೇಕೆಂದು ನಮ್ಮ ಜತೆ ಹೇಳಿದ್ದಾರೆ. ಅದ್ದರಿಂದ ಯೋಗೀಶ್ವರ್‌ಗೆ ಆ ಹೊಣೆಯನ್ನು ನೀಡಲಾಗುವುದು. ಆಗ ನಿಮ್ಮವರೆ ಜಿಲ್ಲಾ ಮಂತ್ರಿಯಾಗುತ್ತಾರೆ ಎಂದರು.

ಚನ್ನಪಟ್ಟಣ : ಕಾಂಗ್ರೆಸ್ ಜೆಡಿಎಸ್ ಬೆಂಬಲ

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರ ನೀಡುವರೆ ? ಇಂತಹದೊಂದು ಜಿಜ್ಞಾಸೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮೂಡಿಸಿದ್ದಾರೆ.

ಇಲ್ಲಿನ ವಿಶ್ವಪ್ರೇಮಿ ಸಮಾರಂಭ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಟಿ ಕೆ ಯೋಗೀಶ್‌ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಆಶೀರ್ವಾದ ಸಹಕಾರವಿದೆ. ಅದ್ದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಕೊಳ್ಳಬೇಕಿದೆ ಎಂದರು.

ತಂತ್ರಗಾರಿಕೆ ರಾಜಕಾರಣಕ್ಕೆ ಹೆಸರುವಾಸಿಯಾದ ಡಿ.ಕೆ. ಶಿವಕುಮಾರ್, ಜುಲೈ 29 ರಂದು ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಟಿ.ಕೆ. ಯೋಗೀಶ್ ನಾಮಪತ್ರ ಸಲ್ಲಿಸಿದರು. ಇದೇ ದಿನ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕೆ. ರಾಜು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿಕೆಶಿ ಜತೆಗಿದ್ದ ಕಾಂಗ್ರೆಸ್ ಅಭ್ಯರ್ಥಿ ಟಿ.ಕೆ. ಯೋಗೀಶ್, ಕುಮಾರಸ್ವಾಮಿ ಅವರ ಬಳಿಗೆ ತೆರಳಿ, ಉಭಯಕುಸಲೋಪರಿ ವಿಚಾರಿಸಿ ಅವರ ಕಾಲಿಗೆ ನಮಸ್ಕರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X