442981bypollಉಪ-ಚುನಾವಣೆ ನಿಷೇಧಿಸಬೇಕೆ?/news/2009/03/31/should-by-polls-be-banned-in-india.htmlಇನ್ಮುಂದೆ ಭಾರತದಲ್ಲಿ ಉಪ-ಚುನಾವಣೆಗಳನ್ನು ನಿಷೇಧಿಸಬೇಕೆ? ಈ ಪ್ರಶ್ನೆಗೆ ನಾವು, ನಮ್ಮ ಪ್ರತಿನಿಧಿಗಳು ಮತ್ತು ಚುನಾವಣಾ ಆಯೋಗ ಕೂಡಲೆ ಉತ್ತರ ಕಂಡುಕೊಳ್ಳದಿದ್ದರೆ ಪ್ರಜಾತಂತ್ರಕ್ಕೆ ಅರ್ಥವಿರುವುದಿಲ್ಲ ಮತ್ತು ಮತದಾರನ ಒಂದೊಂದು ಮತಕ್ಕೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ.ಈ ಪ್ರಶ್ನೆ ಖಂಡಿತ ಚರ್ಚೆಯಲ್ಲಿದೆ ಮತ್ತು ಚರ್ಚೆಯಲ್ಲಿಯೇ ಇದೆ. ಭಾರತದ ಅರ್ಥವ್ಯವಸ್ಥೆ, ಸದ್ಯದ ಆರ್ಥಿಕ ಬಿಕ್ಕಟ್ಟು, ಚುನಾವಣೆಯಲ್ಲಿ ನಡೆಯುವ ಹಣ-ಹೆಂಡದ ಹೊಳೆ, ಭ್ರಷ್ಟಾಚಾರವನ್ನು ಗಮನದಲ್ಲಿಸಿರಿಕೊಂಡರೆ ಮೇಲಿನ 35620http://kannada.oneindia.com/img/2009/03/31-election-commission1.jpg442981bypollರಾಮನಗರ : ಜೆಡಿಎಸ್ ನಿಂದ ಕೆ ರಾಜು ಸ್ಪರ್ಧೆ/cj/poornachandra/2009/0729-k-raju-jds-candidate-from-ramanagara-assmbly.htmlರಾಮನಗರ, ಜು. 29 : ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತ ಕೆ ರಾಜು ಅವರನ್ನು ಅಖಾಡಕ್ಕಿಳಿಸಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತೀರ್ಮಾನಿಸಿದ್ದಾರೆ.ರಾಮನಗರ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರನ್ನು ಅಖಾಡಕ್ಕೆ ಇಳಿಸುವ ಚಿಂತನೆ ನಡೆದಿತ್ತಾದರೂ ಕುಟುಂಬದ 38287http://kannada.oneindia.com/img/2009/07/29-k-raju-family.jpg442981bypollಪ್ರಿಯಕೃಷ್ಣನ ಒಟ್ಟು ಆಸ್ತಿ 770 ಕೋ ರು!/news/2009/07/30/congress-candidate-priya-assests-worth-rs-770-cr.htmlಬೆಂಗಳೂರು, ಜು. 30 : ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರ ಮಗ ಹಾಗೂ ಪ್ರಸ್ತುತ ಉಪಚುನಾವಣೆಯ ಗೋವಿಂದರಾಜ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ 25 ರ ಹರೆಯದ ಪ್ರಿಯಾಕೃಷ್ಣ ಅವರು 770 ಕೋಟಿ ರುಪಾಯಿ ಮೊತ್ತದ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದಾರೆ. ಅಂತಿಮ ದಿನವಾದ ಬುಧವಾರ ನಾಮಪತ್ರ ಸಲ್ಲಿಸಿದ ಪ್ರಿಯಾಕೃಷ್ಣ ಅವರು, ತಮ್ಮ 38315http://kannada.oneindia.com/img/2009/07/30-congress-logo1e.jpg442981bypollತಿರುವಳ್ಳುವರ್ ಪ್ರತಿಮೆ ಅನಾವರಣ ಮುಂದೂಡಿಕೆ ?/news/2009/07/31/tiruvalluvar-statue-unveil-likely-to-postpone.htmlಬೆಂಗಳೂರು, ಜು. 31 : ತೀವ್ರ ವಿವಾದಕ್ಕೆ ಕಾರಣವಾಗಿರುವ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಮುಂದೂಡಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದ ಐದು ಕ್ಷೇತ್ರಗಳಲ್ಲಿ ಆಗಸ್ಟ್ 18 ರಂದು ಉಪಚುನಾವಣೆಗಳು ನಡೆಯುತ್ತಿದ್ದು, ಕನ್ನಡಪರ ಸಂಘಟನೆಗಳು ಪ್ರತಿಭಟನೆಯಿಂದ ಉಂಟಾಗಬಹುದಾದ ಗದ್ದಲದಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. 38330http://kannada.oneindia.com/img/2009/07/31-thiruvalluvar1.jpg442981bypollಉಪಚುನಾವಣೆ : ಅಖಾಡದಲ್ಲಿರುವ ಕೋಟ್ಯಾಧೀಶರು/news/2009/08/02/karnataka-assembly-bypoll-candidates-asset-details.htmlಬೆಂಗಳೂರು, ಜು. 2 : ಗೋವಿಂದರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಾಸಕ ಎಂ.ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣ 770 ಕೋಟಿ ರೂ.ಮೌಲ್ಯದ ಆಸ್ತಿಗೆ ಒಡೆಯ. ಆಯ್ಕೆಯಾದರೆ, ಶಾಸನಸಭೆಯ ಕೋಟ್ಯಧಿಪತಿ ಶಾಸಕರಲ್ಲಿ ಮೊದಲಿಗರಾಗಲಿದ್ದಾರೆ. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಸೋಮಣ್ಣ ಅವರಿಗಿಂತ ಅವರ ಪತ್ನಿ ಆಸ್ತಿ ಮೌಲ್ಯವೇ ಹೆಚ್ಚು. ಕೊಳ್ಳೇಗಾಲದಲ್ಲಿ ಬಿಎಸ್ಪಿ ಅಭ್ಯರ್ಥಿ ಸುಭಾಷ್ 38368http://kannada.oneindia.com/img/2009/08/02-cp-yogishwar1.jpg388467v somannaವಿ ಸೋಮಣ್ಣ ಬಿಜೆಪಿಗೆ ಅಧಿಕೃತ ಸೇರ್ಪಡೆ/news/2009/04/08/congress-mla-somanna-joins-bjp.htmlಬೆಂಗಳೂರು, ಏ. 8 : ಬೆಂಗಳೂರಿನ ಗೋವಿಂದರಾಜ ನಗರ ಶಾಸಕ ವಿ ಸೋಮಣ್ಣ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಕಳೆದ ಅನೇಕ ತಿಂಗಳಿನಿಂದ ಇದ್ದ ಉಹಾಪೋಹಗಳಿಗೆ ಸೋಮಣ್ಣ ತೆರೆ ಎಳೆದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನ್ಯ ಪಕ್ಷಗಳ ಮುಖಂಡರಿಗೆ ಗಾಳಿ ಹಾಕಿ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ 35808http://kannada.oneindia.com/img/2009/04/08-somanna-v1.jpg388467v somannaಪಕ್ಷೇತರ ಸಚಿವರ ಕೈಬಿಡಲ್ಲ : ಯಡಿಯೂರಪ್ಪ/news/2009/05/07/no-cabinet-reshuffle-after-results-yeddyurappa.htmlಬೆಂಗಳೂರು, ಮೇ. 7 : ಲೋಕಸಭೆ ಚುನಾವಣೆ ನಂತರ ಪಕ್ಷೇತರ ಸಚಿವರನ್ನು ಸಂಪುಟದಿಂದ ಕೈಬಿಡುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಫಲಿತಾಂಶದ ನಂತರ ಸಂಪುಟ ಪುನರ್ ರಚನೆ ಮಾಡುವುದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಅವರು, ಈ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸರಕಾರಕ್ಕೆ ಅಗತ್ಯ ಬೆಂಬಲ 36452http://kannada.oneindia.com/img/2009/05/07-yeddurappa12e.jpg388467v somannaವಲಸೆಹಕ್ಕಿ ವಿ. ಸೋಮಣ್ಣಗೆ ಮಂತ್ರಿಗಿರಿ ಖಚಿತ!/news/2009/06/15/rss-meet-yeddyurappa-discusses-cabinet-reshuffle.htmlಬೆಂಗಳೂರು, ಜೂ. 15 : ಜೂನ್ 17 ಅಥವಾ 18ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ವಲಸೆಹಕ್ಕಿ ಗೋವಿಂದರಾಜ ನಗರದ ಮಾಜಿ ಶಾಸಕ ವಿ ಸೋಮಣ್ಣ ಅವರು ಸಚಿವರಾಗುವುದು ಹೆಚ್ಚುಕಡಿಮೆ ಖಚಿತವಾಗಿದೆ.ರಾಜ್ಯದಲ್ಲಿ ನಡೆದಿರುವ ಇತ್ತೀಚಿನ ವಿದ್ಯಮಾನಗಳು ಸೇರಿದಂತೆ ಸಂಪುಟ ವಿಸ್ತರಣೆಯ ಬಗ್ಗೆ ಆರ್ಎಸ್ಎಸ್ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ 37358http://kannada.oneindia.com/img/2009/06/15-somanna-v2.jpg388467v somannaದೇವರ ಮಂತ್ರಿ ಕೃಷ್ಣಯ್ಯ ಶೆಟ್ಟಿ ಮುಕ್ತ/news/2009/06/17/krishnaiah-shetty-to-quit-ministry-today.htmlಬೆಂಗಳೂರು, ಜೂ. 17 : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೇವರ ಮಂತ್ರಿಯೆಂದೇ ಖ್ಯಾತಿ ಹೊಂದಿದ್ದ ಮುಜರಾಯಿ ಖಾತೆ ಸಚಿವ ಮಾಲೂರು ಶಾಸಕ ಎನ್ ಎಸ್ ಕೃಷ್ಣಯ್ಯ ಶೆಟ್ಟಿ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಶೆಟ್ಟಿ ಅವರನ್ನು ಸಂಪುಟ ಕೈಬಿಡುತ್ತಿರುವ ಹಿನ್ನೆಲೆಯಲ್ಲಿ ಮಾಲೂರಿನಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳ ಮನೆ ಮುಂದೆ 37391http://kannada.oneindia.com/img/2009/06/17-krishnaiah-shetty2e.jpg388467v somannaಕೊನೆಗೂ ಮಂತ್ರಿಯಾದ ವೀರಣ್ಣ ಸೋಮಣ್ಣ/news/2009/06/18/v-sommana-took-oath-in-rajbhavan-as-minister.htmlಬೆಂಗಳೂರು, ಜೂ. 18 : ಕೊನೆಗೂ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಮಾಜಿ ಶಾಸಕ ವೀರಣ್ಣ ಸೋಮಣ್ಣ ಅವರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ಏರ್ಪಡಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ವಿ ಸೋಮಣ್ಣ ಅವರು ನಡೆದಾಡುವ ದೇವರೆಂದು ಪೂಜಿಸಲ್ಪಡುವ ತುಮಕೂರಿನ ಸಿದ್ದಗಂಗಾ ಮಠಾಧೀಶ ಶ್ರೀ ಶಿವಕುಮಾರ 37419http://kannada.oneindia.com/img/2009/06/18-somanna-v2.jpg36612jdsಪ್ರವಾಹ ಪರಿಹಾರ:ದೇವೇಗೌಡ ಗಪ್ ಚುಪ್/news/2009/10/13/hd-devegowda-yet-to-visit-flood-hit-areas.htmlಬೆಂಗಳೂರು, ಅ. 13 : ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ರಾಷ್ಟ್ರೀಯ ದುರಂತ ಮನ ಕಲಕುವಂತಿದೆ. ಲಕ್ಷಾಂತರ ಮಂದಿ ವಸತಿ ಹೀನರಾಗಿದ್ದಾರೆ. ಕೋಟ್ಯಂತರ ರುಪಾಯಿಗಳ ಸಂಪನ್ಮೂಲ ನಾಶವಾಗಿದೆ. ರೈತ ಬದುಕು ದುಸ್ತರವಾಗಿದೆ. ಮನೆ ಮಠ ಕಳೆದುಕೊಂಡ ಜನತೆ ಸರಕಾರ ನೀಡುವ ಸವಲತ್ತಿಗಾಗಿ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಾಯುತ್ತಿದ್ದಾರೆ. ಆದರೆ, ಕರ್ನಾಟಕದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಮಾತ್ರ ಮಹಾರಾಷ್ಟ್ರ 39671http://kannada.oneindia.com/img/2009/10/13-hd-devegowda11.jpg36612jdsಗಿರಿ ಗುಹೆ ದುರಸ್ತಿ ಸ್ಥಗಿತ; ಕಾವಲು ನೇಮಕಕ್ಕೆ ಆಗ್ರಹ/news/2009/10/14/jds-demand-for-security-to-bababudangiri-cave.htmlಚಿಕ್ಕಮಗಳೂರು, ಅ.13: ಇಲ್ಲಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ದರ್ಗಾ ಗುಹೆಯ ಮೇಲ್ಛಾವಣಿ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಧಾರ್ಮಿಕ ದತ್ತ್ತಿ ಇಲಾಖೆಗೆ ವರದಿ ಸಲ್ಲಿಸಲು ಮುಂದಾಗಿದೆ. ದುರಸ್ತಿ ಕಾರ್ಯ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಗುಹೆಯ ರಕ್ಷಣೆಗಿರುವ ಕಾವಲುಗಾರರಿಗಿಂತ ಹೆಚ್ಚುವರಿ ಪಡೆ ಅವಶ್ಯ ಎಂದು ಸ್ಥಳೀಯ ಜೆಡಿಎಸ್ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.ಅಪೆಕ್ಸ್ ನ್ಯಾಯಾಲಯದ ಪಿಡಿ ದಿನಕರನ್ ನೇತೃತ್ವದ 39689http://kannada.oneindia.com/img/2009/10/14-dattapeetha.jpg36612jdsನೋಟು ಎಣಿಸಿಯೆಣಿಸಿ ಯಡ್ಡಿ ಸುಸ್ತು/news/2009/10/14/bsy-tired-after-counting-cash-hd-revanna.htmlಬೆಂಗಳೂರು ಅ 14 : ಮುಖ್ಯಮಂತ್ರಿಗಳು ಬೇಗ ಗುಣಮುಖರಾಗಿ ಜಿಂದಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದು ಹಾರೈಸುತ್ತೇನೆ. ಪಾದಯಾತ್ರೆಯಲ್ಲಿ ಸಿಎಂ 700 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ. ಇದೇನು ಸಾಮಾನ್ಯವೇ, ನೋಟುಗಳನ್ನು ಎಣಿಸಿ ಎಣಿಸಿ ಪಾಪ ಅವರಿಗೆ ಆಯಾಸವಾಗಿದೆ ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ಲೇವಡಿ ಮಾಡಿದ್ದಾರೆ.ದೇಶವೇ ತಲೆ 39694http://kannada.oneindia.com/img/2009/10/14-hd-revanna1.jpg36612jdsಕರೆದಾಗಲೆಲ್ಲ ಹಿಂಬಾಲಿಸಬೇಕೆ : ದತ್ತ ಆಕ್ರೋಶ/news/2009/10/19/jds-not-be-part-of-all-party-delegation-to-delhi.htmlಬೆಂಗಳೂರು, ಅ. 19 : ಹೆಚ್ಚಿನ ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ದೆಹಲಿಗೆ ಇಂದು ಹೋಗುತ್ತಿರುವ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸದಿರಲು ಜೆಡಿಎಸ್ ನಿರ್ಧರಿಸಿದೆ.ಈ ವಿಷಯವನ್ನು ತಿಳಿಸಿರುವ ಜೆಡಿಎಸ್ ನಾಯಕ ವೈಎಸ್ ವಿ ದತ್ತ ಅವರು, ಪ್ರತಿಪಕ್ಷಗಳನ್ನು ಈ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರಕ್ಕೆ ಸಲ್ಲಿಸುತ್ತಿರುವ 39747http://kannada.oneindia.com/img/2009/10/19-ysv-datta1.jpg36612jdsರಾಜಕೀಯವಾಗಿ ಮಾಜಿಯಾಗಲಾರೆ : ದೇವೇಗೌಡ/news/2009/10/23/i-am-still-active-politician-hd-devegowda.htmlಕಡೂರು, ಅ. 23 : ನನ್ನ ರಾಜಕೀಯ ಜೀವನದಲ್ಲಿ ಬಹಳಷ್ಟು ಏರುಪೇರುಗಳನ್ನು ಕಂಡಿದ್ದೇನೆ. ನಾನು ಪ್ರಧಾನಿಯಾಗಿ ಮಾಜಿಯಾಗಿದ್ದೇನೆ ಹೊರತು ರಾಜಕಾರಣದಿಂದಲ್ಲ. ಸಕ್ರಿಯ ರಾಜಕೀಯದಿಂದ ಮಾಜಿಯಾಗಲಾರೆ. ಪಕ್ಷದಲ್ಲಿದ್ದು ಪಕ್ಷದ ಕತ್ತು ಕುಯ್ಯೂವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಗುಡುಗಿದರು. ಕಡೂರಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ 39819http://kannada.oneindia.com/img/2009/10/23-deve-gowda4e.jpgnews"> ಗೌಡರಿಗೆ ದಕ್ಕುವುದೇ ರಾಮನಗರ ? | Bypoll | Mrutyunjaya Kalmat | Devegowda | Ramanagar | Govinda raj nagar | V Somanna MLA Krishnappa | Yeddyurappa ಗೌಡರಿಗೆ ದಕ್ಕುವುದೇ ರಾಮನಗರ ? - Kannada Oneindia

ಗೌಡರಿಗೆ ದಕ್ಕುವುದೇ ರಾಮನಗರ ?

ರಾಜ್ಯದಲ್ಲಿ ಉಪಚುನಾವಣೆಗಳ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಆಡಳಿತ ಪಕ್ಷ ಬಿಜೆಪಿಗೆ ಈ ಸಲವಾದರೂ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ ಪ್ರತಿಪಕ್ಷಗಳು ಭಾರಿ ತಂತ್ರಗಳನ್ನು ರೂಪಿಸತೊಡಗಿವೆ. ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಸಾಮರ್ಥ್ಯ ತೋರಿದ್ದು, ಕಾಂಗ್ರೆಸ್ ಮಾತ್ರ ಬರಿಗೈಯಾಗುವ ಮೂಲಕ ಭಾರಿ ಅವಮಾನಕ್ಕೆ ಈಡಾಯಿತು.

*ಮೃತ್ಯುಂಜಯ ಕಲ್ಮಠ

ಆಗಸ್ಟ್ 18 ರಂದು 5 ಕ್ಷೇತ್ರಗಳಲ್ಲಿ ಮತದಾನದಲ್ಲಿ ನಡೆಯಲಿದೆ. ಗೋವಿಂದರಾಜನಗರ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬಾರಿ ಪ್ರತಿಷ್ಠಿತ ಕಣವಾಗಿವೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಸಚಿವರಾಗಿರುವ ವಿ ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ಪಕ್ಷದ ಕುಬೇರ ಹಾಗೂ ವಿಜಯನಗರ ಕ್ಷೇತ್ರದ ಶಾಸಕ ಲೇಔಟ್ ಕೃಷ್ಣಪ್ಪ ಅವರ ಮಗ ಪ್ರಿಯಕೃಷ್ಣ ಕಾಂಗ್ರೆಸ್ ಅಭ್ಯರ್ಥಿ. ಮೇಲ್ನೋಟಕ್ಕೆ ಸೋಮಣ್ಣ ಗೆಲುವು ಸರಳ ಎಂದು ಹೇಳಲಾಗುತ್ತೆ. ಆದರೆ, ವಾಸ್ತವಾಂಶ ಅವರ ಕಡೆಗೆ ಇಲ್ಲ ಎನ್ನುವ ಸುದ್ದಿಯೂ ದಟ್ಟವಾಗಿದೆ.

ವಿಜಯನಗರ ಶಾಸಕ ಕೃಷ್ಣಪ್ಪ ಅವರು ಕಳೆದೆರಡು ಚುನಾವಣೆಯಲ್ಲಿ ಸೋಮಣ್ಣ ವಿರುದ್ಧ ಸೋತಿದ್ದಾರೆ. ತಾವು ಅನುಭವಿಸಿದ ಸೋಲನ್ನು ತಮ್ಮ ಮಗನ ಗೆಲುವಿನ ಮೂಲಕ ಕಂಡುಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದಾರೆ. ಇದಕ್ಕೆ ಸಾಕಷ್ಟು ತಂತ್ರಗಳನ್ನು ಹೆಣೆಯತೊಡಗಿದ್ದಾರೆ. ಕೃಷ್ಣಪ್ಪ ದೊಡ್ಡ ರೊಕ್ಕದ ಅಸಾಮಿ. ಎಷ್ಟು ಖರ್ಚಾದರೂ ಪರವಾಗಿಲ್ಲ. ಒಟ್ಟಿನಲ್ಲಿ ಗೆಲುವುಬೇಕು ಎನ್ನುವುದು ಅವರ ಏಕೈಕ ಮಂತ್ರ. ಆದರೆ, ಉತ್ತಮ ಕೆಲಸಗಾರ ಎಂಬ ಹಣೆಪಟ್ಟಿ ಹೊಂದಿರುವ ಸೋಮಣ್ಣ ಅವರ ಮುಂದೆ ರೊಕ್ಕ ಕೆಲಸ ಮಾಡುವ ಸಾಧ್ಯತೆ ಕಡಿಮೆ. ಮೇಲಾಗಿ ಆಡಳಿತ ಪಕ್ಷದ ಸಂಪುಟ ದರ್ಜೆ ಸಚಿವ ಬೇರೆ. ಈ ಎಲ್ಲ ಅಂಶಗಳು ಸೇರಿದರೆ ಸೋಮಣ್ಣ ಗೆಲುವು ನಿರಾಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಮನಗರ ಕುರುಕ್ಷೇತ್ರ

ಗೌಡರಿಗೆ ಪ್ರತಿಷ್ಠೆಯ ಕಣವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರವನ್ನು ಮತ್ತೆ ಜೆಡಿಎಸ್ ವಶಕ್ಕೆ ತೆಗೆದುಕೊಳ್ಳಬೇಕು ಎಂಬುದು ಆ ಪಕ್ಷದ ವರಿಷ್ಠರ ಮುಂದಿರುವ ದೊಡ್ಡ ಸವಾಲು. ಎಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಿದ್ದರೆ, ಗೌಡರ ಕನಸು ಈಡೇರುವುದರಲ್ಲ ಎರಡು ಮಾತಿರಲಿಲ್ಲ. ಕುಟುಂಬ ರಾಜಕಾರಣ ಆರೋಪ ಮತ್ತೊಮ್ಮೆ ಬರಲಿದೆ ಎಂಬ ಭಯದಿಂದ ಅವರ ಕೆ ರಾಜು ಎಂಬುವವರಿಗೆ ಪಕ್ಷದ ಟಿಕೆಟ್ ನೀಡಿದ್ದಾರೆ. ಇದರಿಂದ ಗೌಡರು ಎಡವಿದರೇನೂ ಎಂಬ ಭಾವನೆಯಂತೂ ದಟ್ಟವಾಗಿದೆ.

ರಾಜು ಅವರಿಗೆ ಟಿಕೆಟ್ ನೀಡುವ ಮೂಲಕ ಗೌಡರದು ಕುಟುಂಬ ರಾಜಕಾರಣ ಎಂಬ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ ಸಲ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸೋತಿದ್ದ ಸಿ ಎಂ ಲಿಂಗಪ್ಪ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅವರೆಡೆಗೆ ಜನರ ಅನುಕಂಪ ಕೆಲಸ ಮಾಡುವ ಸಾಧ್ಯತೆ ಇದೆ. ಉಳಿದಂತೆ ಚಿತ್ತಾಪುರ ಮೀಸಲು, ಕೊಳ್ಳೇಗಾಲದಲ್ಲಿ ಕೈ ಕಮಾಲ್ ಮಾಡಬಹುದು. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಪಿ ಯೋಗೀಶ್ವರಗೆ ಜೆಡಿಎಸ್, ಕಾಂಗ್ರೆಸ್ ಭಾರಿ ಪೈಪೋಟಿ ನೀಡಲಿವೆ. ಇಲ್ಲಿ ಮೂರು ಪಕ್ಷಗಳಿಗೂ ಗೆಲುವಿನ ಸಾಧ್ಯತೆ ಇದೆ. ಕೂದಲೆಳೆಯ ಅಂತರದಲ್ಲಿ ಕೈ ವಿಜಯಮಾಲೆ ಧರಿಸಬಹುದು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+