193079ramanagarಮತ್ತೆ ಹಳೆ ಪಕ್ಷದ ವಾಸನೆ ಹಿಡಿದು ಬಂದ ಸಿಂಧ್ಯಾ?/news/2009/05/25/i-am-yet-to-decide-on-joining-jds-pgr-sindhia.htmlಬೆಂಗಳೂರು, ಮೇ. 25: ಸುಮಾರು ಒಂದೂವರೆ ವರ್ಷದ ಕೆಳಗೆ ಗೌಡ್ರ ಪಕ್ಷದ ಸಹವಾಸ ಸಾಕು ಎಂದು ಆನೆ ಹೆಗಲೇರಿ ಸವಾರಿ ಹೊರಟಿದ್ದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಈಗ ಮತ್ತೆ ಜೆಡಿಎಸ್ ಕಡೆ ವಾಲುತ್ತಿದ್ದಾರೆಯೇ? ಹೌದು ಎನ್ನುತ್ತದೆ ಅವರ ಆಪ್ತವಲಯ. ಆದರೆ ಜೆಡಿಎಸ್ ಗೆ ಮರಳುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಖುದ್ಧು ಸಿಂಧ್ಯಾ ಸಾಹೇಬ್ರು ಹೇಳಿಕೆ 36873http://kannada.oneindia.com/img/2009/05/25-sindhya1e.jpg193079ramanagarಗೌಡರ ಕುಟುಂಬವಿರುದ್ಧ ಸ್ಪರ್ಧೆಗೆ ರೆಡಿ; ಚೆನ್ನಿಗಪ್ಪ/news/2009/05/30/chennigappa-ready-to-contest-from-ramanagar.htmlಬೆಂಗಳೂರು,ಮೇ.30 : ಸಂಸತ್ತಿಗೆ ಆಯ್ಕೆಯಾದ ನಂತರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ರಾಮನಗರದ ವಿಧಾನಸಭೆ ಕ್ಷೇತ್ರದಿಂದ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎಂಬ ಅಂತೆ ಕಂತೆಗಳು ರಾಜ್ಯದ ತುಂಬಾ ದಟ್ಟವಾಗಿವೆ. ಇದರ ಬೆನ್ನಲ್ಲೇ ಹೈಕಮಾಂಡ್ ಅನುಮತಿ ನೀಡಿದರೆ ರಾಮನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ 36996http://kannada.oneindia.com/img/2009/05/30-c-chennigappa2.jpg193079ramanagarಆದಿಚುಂಚನಗಿರಿ ಶ್ರೀಗಳಿಗೆ ರಜತ ತುಲಾಭಾರ/news/2009/07/24/balagangadharanath-swamiji-tulabhara-ramnagar.htmlರಾಮನಗರ, ಜು. 24 : ರಾಮನಗರ ಜಿಲ್ಲೆಯ ಬಿಡದಿ ಮಂಜುನಾಥ ಕನ್ವೆನ್ಷನ್‌ಹಾಲ್‌ನಲ್ಲಿ ಆದಿಚುಂಚನಗಿರಿ ಸಂಸ್ಥಾನಮಠದ ಬಾಲಗಂಗಾಧರನಾಥ ಶ್ರೀಗಳಿಗೆ ಡಾಕ್ಟರೇಟ್ ಪದವಿ ಸಂದಿರುವ ಸಂದರ್ಭದಲ್ಲಿ ರಜತ ತುಲಾಭಾರ ನಡೆಸಿ ಅಭಿನಂದನೆ ಸಲ್ಲಿಸಲಾಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಎಲ್ಲಾ ವರ್ಗದ ಭಕ್ತಸಮೂಹ ಇಟ್ಟಿರುವ ವಿಶ್ವಾಸ ಪ್ರೀತಿಯಿಂದ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ. ಡಾಕ್ಟರೇಟ್ ನಮ್ಮ ಸೇವೆಗೆ ನೆಪ ಮಾತ್ರ. ಆದಿಚುಂಚನಗಿರಿ 38188http://kannada.oneindia.com/img/2009/07/24-balagangadhara3.jpg193079ramanagarಉಪಚುನಾವಣೆ : ಮೂರರಲ್ಲಿ ಜೆಡಿಎಸ್ ಸ್ಪರ್ಧೆ/news/2009/07/26/jds-to-contest-in-three-constituency-by-election.htmlಬೆಂಗಳೂರು, ಜು. 26 : ಮುಂದಿನ ತಿಂಗಳು ಉಪಚುನಾವಣೆ ನಡೆಯಲಿರುವ ರಾಜ್ಯದ ಐದು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರರಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ. ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಿವಾಸದಲ್ಲಿ ಇಂದು ನಡೆದ ಮುಖಂಡರ ಸಭೆಯಲ್ಲಿ ಚಿತ್ತಾಪುರ ಮತ್ತು ಗೋವಿಂದರಾಜನಗರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಪಕ್ಷದ 38215http://kannada.oneindia.com/img/2009/07/26-hd-kumaraswamy2e.jpg193079ramanagarಉಪಚುನಾವಣೆ : ಅಖಾಡದಲ್ಲಿರುವ ಕೋಟ್ಯಾಧೀಶರು/news/2009/08/02/karnataka-assembly-bypoll-candidates-asset-details.htmlಬೆಂಗಳೂರು, ಜು. 2 : ಗೋವಿಂದರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಾಸಕ ಎಂ.ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣ 770 ಕೋಟಿ ರೂ.ಮೌಲ್ಯದ ಆಸ್ತಿಗೆ ಒಡೆಯ. ಆಯ್ಕೆಯಾದರೆ, ಶಾಸನಸಭೆಯ ಕೋಟ್ಯಧಿಪತಿ ಶಾಸಕರಲ್ಲಿ ಮೊದಲಿಗರಾಗಲಿದ್ದಾರೆ. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಸೋಮಣ್ಣ ಅವರಿಗಿಂತ ಅವರ ಪತ್ನಿ ಆಸ್ತಿ ಮೌಲ್ಯವೇ ಹೆಚ್ಚು. ಕೊಳ್ಳೇಗಾಲದಲ್ಲಿ ಬಿಎಸ್ಪಿ ಅಭ್ಯರ್ಥಿ ಸುಭಾಷ್ 38368http://kannada.oneindia.com/img/2009/08/02-cp-yogishwar1.jpg542069poornachandraಆದಿಚುಂಚನಗಿರಿ ಶ್ರೀಗಳಿಗೆ ರಜತ ತುಲಾಭಾರ/news/2009/07/24/balagangadharanath-swamiji-tulabhara-ramnagar.htmlರಾಮನಗರ, ಜು. 24 : ರಾಮನಗರ ಜಿಲ್ಲೆಯ ಬಿಡದಿ ಮಂಜುನಾಥ ಕನ್ವೆನ್ಷನ್‌ಹಾಲ್‌ನಲ್ಲಿ ಆದಿಚುಂಚನಗಿರಿ ಸಂಸ್ಥಾನಮಠದ ಬಾಲಗಂಗಾಧರನಾಥ ಶ್ರೀಗಳಿಗೆ ಡಾಕ್ಟರೇಟ್ ಪದವಿ ಸಂದಿರುವ ಸಂದರ್ಭದಲ್ಲಿ ರಜತ ತುಲಾಭಾರ ನಡೆಸಿ ಅಭಿನಂದನೆ ಸಲ್ಲಿಸಲಾಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಎಲ್ಲಾ ವರ್ಗದ ಭಕ್ತಸಮೂಹ ಇಟ್ಟಿರುವ ವಿಶ್ವಾಸ ಪ್ರೀತಿಯಿಂದ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ. ಡಾಕ್ಟರೇಟ್ ನಮ್ಮ ಸೇವೆಗೆ ನೆಪ ಮಾತ್ರ. ಆದಿಚುಂಚನಗಿರಿ 38188http://kannada.oneindia.com/img/2009/07/24-balagangadhara3.jpg542069poornachandraರಾಮನಗರ : ಬಿ ಫಾರಂ ಇಲ್ಲದೆ ಲಿಂಗಪ್ಪ ನಾಮಪತ್ರ/cj/poornachandra/2009/0725-ramnagar-bypoll-lingappa-files-nomination.htmlರಾಮನಗರ, ಜು. 25 : ಆಗಸ್ಟ್ 18ರಂದು ನಡೆಯುವ ರಾಮನಗರ ಉಪಚುನಾವಣೆ ಕಣ ರಂಗೇರಿದ್ದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪ ಕಾಂಗ್ರೆಸ್ ಪಕ್ಷದ "ಬಿ" ಫಾರಂ ಇಲ್ಲದೇ ಶುಕ್ರವಾರ ನಾಮಪತ್ರ ಸಲ್ಲಿಸಿದರು.ಉಪಚುನಾವಣೆಗೆ ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ತನ್ನ ಹುರಿಯಾಳು ಯಾರೆಂದು ಅಂತಿಮಗೊಳಿಸಿಲ್ಲ. ಈ ನಡುವೆ ಸಿ.ಎಂ.ಲಿಂಗಪ್ಪ ಕಾಂಗ್ರೆಸ್ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ 38205http://kannada.oneindia.com/img/2009/07/25-lingappa-cm1.jpg542069poornachandraಇಡೀ ಗ್ರಾಮ ಒಗ್ಗೂಡಿಸಿದ್ದ ಗೋವಿಗೆ ಅಂತಿಮ ನಮನ/cj/poornachandra/2009/0728-a-funeral-of-temple-bullock-channapattana.htmlಚನ್ನಪಟ್ಟಣ, ಜು. 28 : ಪೂರ್ವಿಕರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನಂಬಿಕೆ, ಸಂಪ್ರದಾಯ, ಆಚರಣೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಗೋವುಗಳನ್ನ ಹಳ್ಳಿಗಳಲ್ಲಿ ದೇವಾಲಯಗಳಿಗೆ ಬಸವ ಬಿಡುವ ವಾಡಿಕೆ ಇಂದಿಗೂ ಮುಂದುವರೆದುಕೊಂಡು ಬಂದಿವೆ.ಹಳ್ಳಿಗಳಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳಿಗಿಂತ ಮುಂಚೆ ಗೋವಿ(ಬಸವ)ಗೆ ಪೂಜೆ ಸಲ್ಲಿಸಿದ ನಂತರವಷ್ಟೆ ಶುಭಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಇಷ್ಟೆಲ್ಲಾ ದೈವಿಕ 38261http://kannada.oneindia.com/img/2009/07/28-bullock-funeral1.jpg542069poornachandraಕೊಳವೆ ಬಾವಿಯಿಂದ ಬಿಸಿನೀರು : ಏನಿದರ ರಹಸ್ಯ?/cj/poornachandra/2009/0730-hot-water-oozes-out-of-borewell-magadi.htmlರಾಮನಗರ, ಜು. 30 : ಪ್ರಕೃತಿಯಲ್ಲಿ ಹಲವು ವಿಸ್ಮಯಕಾರಿ ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಗಣೇಶ ಹಾಲು ಕುಡಿಯುವುದು, ಕಲ್ಕಿ ಫೋಟೋದಿಂದ ಜೇನುತುಪ್ಪ ಸುರಿದಿದ್ದು, ಸಾಯಿಬಾಬಾರ ವಿಗ್ರಹ ಕಣ್ಣು ಬಿಟ್ಟಿದ್ದನ್ನ ಕಂಡು ಜನ ಮರುಳೋ ಜಾತ್ರೆ ಮರಳು ಎಂಬಂತೆ ಜನಜಾತ್ರೆ ಸೇರಿ ದೈವೀ ಕಲ್ಪನೆ ಮೂಡಿಸಿದ್ದನ್ನ ನಾವು ಕಂಡಿದ್ದೇವೆ, ಇನ್ನೂ ಮರೆತಿಲ್ಲ. ಇವೆಲ್ಲ ಘಟನೆಗಳಿಗೆ ವೈಜ್ಞಾನಿಕ ಕಾರಣಗಳಿವೆ 38320http://kannada.oneindia.com/img/2009/07/30-borewell-hot-water1.jpg542069poornachandraರಾಮನಗರ : ಎಚ್ಐವಿ ಪೀಡಿತರ ಸಹಾಯಕ್ಕೆ 'ಸುರಕ್ಷಾ'/cj/poornachandra/2009/0801-ramnagar-suraksha-for-aid-of-sexual-minoritie.htmlರಾಮನಗರ, ಆ. 1 : ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರು ಮತ್ತು ಎಚ್.ಐ.ವಿ. ಸೋಂಕಿತರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಮತ್ತು ಸಾಮಾಜಿಕವಾಗಿ ಸಬಲರಾಗಲು ತಮ್ಮದೇ ಆದ "ಸಾಧನೆ" ಮತ್ತು "ಸುರಕ್ಷಾ" ಎಂಬ ಸಂಘಟನೆ ರೂಪಿಸಿಕೊಂಡಿದ್ದಾರೆ. ಎಚ್.ಐ.ವಿ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಈ ಸಂಘಟನೆಗಳ ಮೂಲ ಉದ್ದೇಶವಾಗಿದೆ.ಪದವೀಧರರಾಗಿರುವ ಹವಾರು ಮಂದಿ ಹಿಜಡಾ(ಲೈಂಗಿಕ ಅಲ್ಪಸಂಖ್ಯಾತ)ಗಳು ಲೈಂಗಿಕ ಸುರಕ್ಷತೆ ಮತ್ತು 38358http://kannada.oneindia.com/img/2009/08/01-hijada-heena1.jpg525648district newsಜನಮತ ಪಡೆಯುವಲ್ಲಿ ಕಾಂಗ್ರೆಸ್ ವಿಫಲ : ಡಿಕೆಶಿ/cj/pasha/2009/0624-dk-shivakumar-accepts-congress-defeat.htmlಶಿವಮೊಗ್ಗ, ಜೂ. 24 : ಉಪಚುನಾವಣೆ ಹಾಗೂ ಸಂಸತ್ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಸಿದ್ಧರಿದ್ದರೂ ಸಹ ಕಾಂಗ್ರೆಸ್ ಪಕ್ಷ ಜನರ ಮತ ಹಾಕಿಸಿಕೊಳ್ಳುವಲ್ಲಿ ವಿಫಲಗೊಂಡಿರುವುದು ಸತ್ಯ. ಇದನ್ನು ನಾನು ಒಪ್ಪಿಕೊಳ್ಳಲು ಸಿದ್ಧ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಬುಧವಾರ ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 37559http://kannada.oneindia.com/img/2009/06/24-dkshi1.jpg525648district newsಸರಕಾರಿ ವಾಹನ ನಾಮಫಲಕ ಕನ್ನಡದಲ್ಲಿರಲಿ : ಚಂದ್ರು/cj/pasha/2009/0625-govt-vehicle-name-boards-must-in-kannada.htmlಶಿವಮೊಗ್ಗ, ಜೂ. 25 : ರಾಜ್ಯದಲ್ಲಿ ಸರ್ಕಾರಿ ಇಲಾಖೆಗಳಲ್ಲಿರುವ ಯಾವುದೇ ವಾಹನಗಳ ನಾಮಫಲಕ ಕನ್ನಡದಲ್ಲಿ ಕಡ್ಡಾಯವಾಗಿರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.ಗುರುವಾರ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆಗಳೇ ಆಗಿವೆ. ಕರ್ನಾಟಕ ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಆದರೆ, ನಮ್ಮ ಸಂಸ್ಕೃತಿ 37573http://kannada.oneindia.com/img/2009/06/25-chandru1.jpg525648district newsಭರವಸೆ ನೀಡಿದಂತೆ ಕೆಲಸ ಮಾಡಿದ್ದೇನೆ; ಬಿ.ವೈ.ರಾಘವೇಂದ್ರ/cj/pasha/2009/shimoga-not-too-happy-with-allocation.htmlಶಿವಮೊಗ್ಗ,ಜು.5: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಅಭಿವೃದ್ಧಿ ಯೋಜನೆಗಳಲ್ಲಿ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲು, ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ಈ ಬಜೆಟ್‌ನಲ್ಲಿ ಘೋಷಣೆಗೊಂಡಿದ್ದು, ಈ ಬಜೆಟ್ ಸಂಸದನಾದ ನನ್ನ ಮಟ್ಟಿಗೆ ಸಂತೋಷದಾಯಕವಾಗಿದೆ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಇಂದು ಬೆಳಿಗ್ಗೆ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 37789http://kannada.oneindia.com/img/2009/07/05-by-raghavendra1.jpg525648district newsಕನ್ನಡ ಗಂಗಾ ಯೋಜನೆಗೆ ಕರವೇ ವಿರೋಧ/news/2009/07/08/shivamogga-krv-protest-against-kannada-ganga.htmlಶಿವಮೊಗ್ಗ,ಜು.8: ಕನ್ನಡ ಗಂಗಾ ಯೋಜನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಇಂದು ನಗರಸಭೆ ಸದಸ್ಯರ ಸಭೆಗೆ ನುಗ್ಗಿ ಪ್ರತಿಭಟಿಸಿದ ಘಟನೆ ನಡೆಯಿತು. ಕನ್ನಡ ಗಂಗಾ ಯೋಜನೆಯಡಿ ವಾರದ 24 ಗಂಟೆಗಳು ನೀರು ಸರಬರಾಜು ಮಾಡುವ ನೆಪದಲ್ಲಿ ನಗರಸಭೆ ನಲ್ಲಿಗಳಿಗೆ ಮೀಟರ್ ಅಳವಡಿಸಿ, ಅವೈಜ್ಞಾನಿಕವಾಗಿ ಶುಲ್ಕಗಳನ್ನು ನಿಗಧಿಪಡಿಸಲು ಹೊರಟಿದೆ. ಈಗಾಗಲೇ ಮಾಸಿಕ ೬೦ರೂ.ಗಳನ್ನು 37853http://kannada.oneindia.com/img/2009/07/08-shivamogga-karave1.jpg525648district newsಭಾರೀ ಮಳೆಗೆ ತುಂಬಿ ಹರಿಯುತ್ತಿರುವ ತುಂಗಾ/cj/somanath/2009/0715-shivamogga-heavy-rain-tunga-overflowing.htmlಶಿವಮೊಗ್ಗ, ಜು. 15 : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ನಿನ್ನೆ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಎಲ್ಲಾ ಪ್ರಮುಖ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.ನಗರದಲ್ಲಿ ಹರಿಯುವ ತುಂಗಾ ನದಿಯು ತುಂಬಿ ಹರಿಯುತ್ತಿದ್ದು, ಅಪಾಯ ಮಟ್ಟ ತಲುಪಿದೆ. ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ತುಂಗಾ 37999http://kannada.oneindia.com/img/2009/07/15-shivamogga-tunga1.jpgnews"> ಆದಿಚುಂಚನಗಿರಿ ಶ್ರೀಗಳಿಗೆ ರಜತ ತುಲಾಭಾರ | Balagangadharanath Swamiji | Adichunchanagiri | Doctorate | Ramanagar - ಆದಿಚುಂಚನಗಿರಿ ಶ್ರೀಗಳಿಗೆ ರಜತ ತುಲಾಭಾರ - Kannada Oneindia

ಆದಿಚುಂಚನಗಿರಿ ಶ್ರೀಗಳಿಗೆ ರಜತ ತುಲಾಭಾರ

Sri Balagangadharanath swamiji felicitated
ರಾಮನಗರ, ಜು. 24 : ರಾಮನಗರ ಜಿಲ್ಲೆಯ ಬಿಡದಿ ಮಂಜುನಾಥ ಕನ್ವೆನ್ಷನ್‌ಹಾಲ್‌ನಲ್ಲಿ ಆದಿಚುಂಚನಗಿರಿ ಸಂಸ್ಥಾನಮಠದ ಬಾಲಗಂಗಾಧರನಾಥ ಶ್ರೀಗಳಿಗೆ ಡಾಕ್ಟರೇಟ್ ಪದವಿ ಸಂದಿರುವ ಸಂದರ್ಭದಲ್ಲಿ ರಜತ ತುಲಾಭಾರ ನಡೆಸಿ ಅಭಿನಂದನೆ ಸಲ್ಲಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಎಲ್ಲಾ ವರ್ಗದ ಭಕ್ತಸಮೂಹ ಇಟ್ಟಿರುವ ವಿಶ್ವಾಸ ಪ್ರೀತಿಯಿಂದ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ. ಡಾಕ್ಟರೇಟ್ ನಮ್ಮ ಸೇವೆಗೆ ನೆಪ ಮಾತ್ರ. ಆದಿಚುಂಚನಗಿರಿ ಮೊದಲಿನಿಂದ ಸಮರ್ಪಣಾಮನೋಭಾವದೊಂದಿಗೆ ಸೇವೆ ನಡೆಸುತ್ತಿದೆಯೋ ಅದೇ ರೀತಿ ಸೇವೆಯನ್ನ ಮುಂದುವರೆಸುತ್ತದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠ ಬಡವರ ಮಕ್ಕಳ ಬದುಕಿಗೆ ದಾರಿದೀಪವಾಗಿ, ಎಲ್ಲಾ ವರ್ಗದ ಜನತೆಯ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಮತ್ತು ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಜಾಗೃತಿಯನ್ನ ಗ್ರಾಮೀಣ ಪ್ರದೇಶದಲ್ಲಿ ನಡೆಸುತ್ತಿದೆ, ಹಾಗೂ ಹಿಂದೂ ಸಂಸ್ಕೃತಿಯ ಪೂಜ್ಯನೀಯ ಗೋವುಗಳ ರಕ್ಷಣೆಗೆ ಆದಿಚುಂಚನಗಿರಿ ಹೆಚ್ಚಿನ ಒತ್ತು ನೀಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಗ್ರಾಮೀಣ ಪ್ರತಿಭೆಗಳು ಬೆಳವಣಿಗೆ ಹೊಂದಲು ಆದಿಚುಂಚನಗಿರಿ ಸಂಸ್ಥಾನ ಪೂರಕವಾದ ಯೋಜನೆಗಳನ್ನ ರೂಪಿಸುತ್ತಿದೆ ಎಂದು ಬಾಲಗಂಗಾಧರನಾಥಶ್ರೀಗಳು ತಿಳಿಸಿದರು.

ಅಭಿನಂದನಾಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಚೇತನ ಪಾಟೀಲ್ ಪುಟ್ಟಪ್ಪನವರು ಬಾಲಗಂಗಾಧರನಾಥಶ್ರೀಗಳ ಸಾಧನೆಯನ್ನ ಪ್ರಶಂಸಿಸಿದರು. ಬಾರತದಲ್ಲಾಗಲಿ ವಿದೇಶಗಳಲ್ಲಾಗಲೀ ಬಾಲಗಂಗಾಧರನಾಥ ಶ್ರೀಗಳಂತಹ ಪವಾಡ ಪುರುಷರನ್ನ ನೋಡಿಯೇ ಇಲ್ಲ. ಸಾಮಾನ್ಯವಾಗಿ ನಾನು ಬಹುತೇಕ ಸ್ವಾಮೀಜಿಗಳಿಗೆ ನಮಸ್ಕರಿಸುವುದಿಲ್ಲ. ನಾನು ನಮಸ್ಕರಿಸುವ ಸ್ವಾಮೀಜಿಗಳಲ್ಲಿ ಬಾಲಗಂಗಾಧರನಾಥ ಶ್ರೀಗಳು ಅಗ್ರಗಣ್ಯರು. ಪರಮಪೂಜ್ಯರು ನ್ಯಾಯಾಂಗ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಗ್ರಗಣ್ಯರಾಗಿ ಸಮರ್ಪಣಾಮನೋಭಾವದೊಂದಿಗೆ ಸೇವೆ ನೀಡುತ್ತಿದ್ದಾರೆ. ಬಾಲಗಂಗಾಧರ ಶ್ರೀಗಳಂತೆ ಎಲ್ಲಾ ಮಠಾಧೀಶರುಗಳು ಜಾತ್ಯಾತೀತ ಮನೋಭಾವವನ್ನ ಬೆಳೆಸಿಕೊಳ್ಳಬೇಕು ಎಂದು ಪುಟ್ಟಪ್ಪನವರು ಅಭಿಪ್ರಾಯಪಟ್ಟರು.

ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಬಾಲಗಂಗಾಧರನಾಥಶ್ರೀಗಳ ಖ್ಯಾತಿ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಆಡುಮುಟ್ಟದ ಸೊಪ್ಪಿಲ್ಲವೆಂಬಂತೆ ಸ್ವಾಮೀಜಿಗಳು ಎಲ್ಲಾ ಕ್ಷೇತ್ರಗಳ ಪ್ರಗತಿಗಾಗಿ ಹಲವಾರು ವರ್ಷಗಳಿಂದ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಸಮಾಜದಲ್ಲಿ ಸಮಾನತೆ ಮತ್ತು ಸ್ವಾಸ್ಥ್ಯ ಮೂಡಿಸಲು ಬಾಲಗಂಗಾಧರನಾಥ ಶ್ರೀಗಳು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ಶ್ರೀಗಳ ಸೇವೆಯನ್ನ ಗುರುತಿಸಿ ಡಾಕ್ಟರೇಟ್ ಪದವಿ ನೀಡಿರುವುದು ಶ್ಲಾಘನೀಯವೆಂದರು.

ಶ್ರೀಗಳ ಸೇವಾಮನೋಭಾವವನ್ನು ಕೊಂಡಾಡಿದ ಮಾಜಿ ಶಾಸಕ ಯೋಗೀಶ್ವರ್, ಬಾಲಗಂಗಾಧರನಾಥಶ್ರೀಗಳಿಗೆ ತಮ್ಮ ಹುಟ್ಟೂರಿನಲ್ಲಿ ಅಭಿನಂದನೆ ಸಲ್ಲಿಸುತ್ತಿರುವುದು ಸ್ವಾಗತಾರ್ಹವಾದ ವಿಚಾರವಾಗಿದೆ. ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಸರ್ವಧರ್ಮಗಳ ಸಮನ್ವಯತೆ ಮೂಡಿಸುವ ಪ್ರಯತ್ನ ಮಾಡುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯವಾದುದು. ಬಾಲಗಂಗಾಧರಶ್ರೀಗಳಿಗೆ ಹೆಚ್ಚಿನ ಆರೋಗ್ಯ ಆಯುಷ್ಯ ದೊರಕಿ ಸಮಾದ ಸೇವೆ ಮುಂದುವರೆಸಲಿ ಎಂದು ಅಭಿನಂದಿಸಿದರು.

ಬಾಲಗಂಗಾಧರನಾಥ ಶ್ರೀಗಳನ್ನ ಅಶ್ವರಥದ ಮೇಲೆ ಬಿಡದಿಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳ ಕಲಾವೈಭವ ಆಕರ್ಷಣೀಯವಾಗಿತ್ತು. ಬಾಲಗಂಗಾಧರನಾಥ ಶ್ರೀಗಳಿಗೆ ಭಕ್ತಸಮೂಹ 80 ಕೆಜಿ ಬೆಳ್ಳಿಯ ತುಲಾಭಾರ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಡದಿಯ ನಿತ್ಯಾನಂದಸ್ವಾಮಿ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಗಣ್ಯರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಚಿಕ್ಕಣ್ಣ, ಮಂಜುನಾಥ್, ಶ್ರೀನಿವಾಸ್, ಸಿ.ಪಿ.ರಾಜೇಶ್, ತಾ.ಪಂ.ಅಧ್ಯಕ್ಷ ಬ್ಯಾಮಪ್ಪ, ಶೇಖರ್‌ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಮತ್ತಿತರು ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+