ಜಕಾರ್ತದಲ್ಲಿ ತ್ರಿವಳಿ ಬಾಂಬ್ ಸ್ಪೋಟ : 8 ಸಾವು

ಅವಳಿ ಸ್ಫೋಟಗಳು ನಗರದ ಐಷಾರಾಮಿ ಹೋಟೇಲುಗಳಾದ ರಿಟ್ಜ್ ಕಾರ್ಲ್ಟನ್ ಹಾಗೂ ಮಾರಿಯೆಟ್‌ನಲ್ಲಿ ನಡೆದಿದೆ. ಸ್ಥಳೀಯ ಕಾಲಮಾನ 8.30 ರ ಸುಮಾರಿಗೆ ನಡೆದ ಅವಳಿ ಬಾಂಬ್ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಅವಳಿ ಸ್ಪೋಟ ನಡೆದ ಎರಡು ತಾಸಿನ ಮೇಲೆ ಮತ್ತೊಂದು ಸ್ಪೋಟ ಉತ್ತರ ಜಕಾರ್ತಾದಿಂದ ವರದಿಯಾಗಿದ್ದು, ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಸತ್ತವರಲ್ಲಿ ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಗಾಯಗೊಂಡ ಹೆಚ್ಚಿನವರು ವಿದೇಶಿ ಪ್ರಜೆಗಳಾಗಿದ್ದು, ಸ್ಪೋಟದ ಅಬ್ಬರಕ್ಕೆ ಹೋಟೆಲ್ ಗಳ ಗಾಜಿನ ಕಿಟಿಕಿಗಳು ಪುಡಿಪುಡಿಯಾಗಿದೆ. ದಾಳಿಯ ಜವಾಬ್ದಾರಿಯನ್ನು ಈ ವರೆಗೂ ಯಾವ ಉಗ್ರ ಸಂಘಟನೆಗಳು ವಹಿಸಿಕೊಂಡಿಲ್ಲ. ಪೊಲೀಸ್ ತನಿಖೆ ಆರಂಭಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications