522864cauveryನರನಾರಿ ನೀರುಪುಢಾರಿ/literature/short-story/2009/0711-cauvery-dispute-and-politics-premashekhara.html* ಪ್ರೇಮಶೇಖರ, ನವದೆಹಲಿ ಬೆಟ್ಟದ ಹಾದಿಯಲ್ಲಿ ವಾರಗಟ್ಟಲೆ ನಡೆದು ಅವನು ಬಸವಳಿದಿದ್ದ. ಅಮ್ಮ ಕಟ್ಟಿಕೊಟ್ಟಿದ್ದ ಬುತ್ತಿ ಮುಗಿಯುತ್ತಾ ಬಂದಿತ್ತು. ನೀರು ಮುಗಿದು ಅದೆಷ್ಟೋ ಕಾಲವಾಗಿತ್ತು. ಕೆರೆಕುಂಟೆಗಳಿದ್ದೆಡೆ ನಿಂತು ಒಣರೊಟ್ಟಿ ತಿಂದು ನೀರು ಕುಡಿಯುತ್ತಿದ್ದ. ಬೆಟ್ಟವೇರತೊಡಗಿದಂತೆ ಕೆರೆಕುಂಟೆಗಳು ಕಾಣದಾದವು. ಅಲ್ಲಲ್ಲಿ ಒರತೆಗಳು ಕಂಡರೂ ದಾರಿ ಸಾಗಿದಂತೆ ಒಂದೊಂದಾಗಿ ಅವೂ ಮರೆಯಾಗಿಹೋದವು. ಸಿಕ್ಕಿದ ಗುಡಿಸಲುಗಳಲ್ಲಿ ನೀರು ಕೇಳಿದ. ಒಂದಿಬ್ಬರು ಕೊಟ್ಟರು. 37927http://kannada.oneindia.com/img/2009/07/11-premashekhara1.jpg522864cauveryಕೆಆರ್ಎಸ್ ಗೆ ಶೋಭಾ, ಸಿಎಂ ಬಾಗಿನ ಅರ್ಪಣೆ/news/2009/07/24/bsy-shobha-offer-bagina-to-krs-kabini-reservoirs.htmlಮೈಸೂರು, ಜು. 24 : ಕೃಷ್ಣರಾಜಸಾಗರ ಸಂಪೂರ್ಣ ಭರ್ತಿಯಾಗಿದ್ದು, ನಾಡಿನ ಜೀವನಾಡಿ ಕಾವೇರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ರಾಮಚಂದ್ರೇಗೌಡ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ ವೈ ರಾಘವೇಂದ್ರ ಉಪಸ್ಥಿತರಿದ್ದರು. ಗುರುವಾರ ರಾತ್ರಿ ವೇಳೆಗೆ ಜಲಾಶಯದ ನೀರಿನ ಮಟ್ಟ 38183http://kannada.oneindia.com/img/2009/07/24-bsy-kaveri-puje1.jpg522864cauveryತಮಿಳುನಾಡಿಗೆ ಕಾವೇರಿ ನೀರು : ಓಕೆ ಅಂದ ಸಿಎಂ/news/2009/07/24/no-problem-in-releasing-water-to-tamilnadu-bsy.htmlಮೈಸೂರು, ಜು. 24 : ರಾಜ್ಯದಲ್ಲಿ ಸಾಕಷ್ಟು ಮಳೆ ಆಗಿರುವುದರಿಂದ ಜೀವನಾಡಿ ಕಾವೇರಿ ನದಿ ತುಂಬಿ ಹರಿಯತೊಡಗಿದೆ. ಇದರಿಂದ ಹೆಚ್ಚಿನ ನೀರನ್ನು ತಮಿಳುನಾಡಿಗೆ ಬಿಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.ಕೆಆರ್ಎಸ್ ಗೆ ಬಾಗಿನ ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಮುಂಗಾರುಮಳೆ ಸ್ವಲ್ಪ ಕೋಪಿಸಿಕೊಂಡಂತೆ ಕಂಡರೂ ನಂತರದ ದಿನಗಳಲ್ಲಿ ಉತ್ತಮ 38195http://kannada.oneindia.com/img/2009/07/24-yediyurappa2.jpg522864cauveryತಿರುವಳ್ಳುವರ್ : ಎಲ್ಲಾ ಬಿಟ್ಟು ಭಂಗಿ ನೆಟ್ಟ ಯಡಿಯೂರಪ್ಪ!/literature/my-karnataka/2009/0805-thiruvalluvar-yeddyurappa-karunanidhi.htmlಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ರಾಶಿರಾಶಿ ಸಮಸ್ಯೆಗಳಿರುವಾಗ ನಮ್ಮ ಯಡಿಯೂರಪ್ಪ ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡುತ್ತಿದ್ದಾರೆ? ವಿಶ್ರಾಂತಿಗಾಗಿ ಬೆಂಗಳೂರಿಗೆ ಬಂದಿರುವ ಕರುಣಾನಿಧಿಯೊಂದಿಗೆ ಪ್ರತಿಮೆ ಸ್ಥಾಪನೆ ಕುರಿತ ಚರ್ಚೆಯ ಅಗತ್ಯವೇನಿತ್ತು? ಅಪ್ಪಟ ಕನ್ನಡಿಗರ ಮೂಗಿಗೆ ಕೆಟ್ಟ ವಾಸನೆ ಬಡಿಯುತ್ತಿದೆ.* ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರುನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ 38437http://kannada.oneindia.com/img/2009/08/05-bsy-invites-karuna1.jpg522864cauveryಕನ್ನಡಿಗರಾದ ನಾವು ಈ ಪಾಟಿ ಹೇಡಿಗಳೇ?/literature/my-karnataka/2009/0806-around-thiruvalluvar-statue-installation.html* ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆಗಳ ಸ್ಥಾಪನೆಯ ಉದ್ದೇಶ ಆ ಕವಿಗಳಮೇಲಿನ ಅಭಿಮಾನವಲ್ಲ. ಬೆಂಗಳೂರಿನಲ್ಲಿ ತಮಿಳರು ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಕರ್ನಾಟಕದ ರಾಜಧಾನಿಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ಉದ್ದೇಶದಿಂದ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ತಮಿಳುನಾಡಿನ ರಾಜಧಾನಿಯಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರ ತಳೆಯುವುದು ಅನಿವಾರ್ಯವಾಯಿತು.* ಇದೀಗ ಎಲ್ಲ ರಾಜಕೀಯ ಪಕ್ಷಗಳೂ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಬೆಂಬಲಿಸುತ್ತಿರುವುದು ಬಿಬಿಎಂಪಿ 38468http://kannada.oneindia.com/img/2009/08/06-thiruvalluvar1.jpg208259shobha karandlajeಗಣಿಗಾರಿಕೆಗೆ ಪರವಾನಗಿ ನೀಡಿದ್ದೇ ಕಾಂಗ್ರೆಸ್: ಬಿಎಸ್ ವೈ/news/2009/04/26/yeddyurappa-taunts-against-congress-in-mysuru.htmlಮೈಸೂರು, ಏ.26: ಲೋಕಸಭೆ ಚುನಾವಣೆಗಳು ಮುಗಿದ ಬಳಿಕ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನಿರ್ನಾಮವಾಗಲಿದೆ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮಾಗಾಂಧಿ ಅವರ ಕನಸು ಈ ಚುನಾವಣೆಗಳ ನಂತರ ನನಸಾಗಲಿದೆ ಎಂದು ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರ ಚುನಾವಣಾ ಪ್ರಚಾರ ನಡೆಸಲು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಇಲ್ಲಿನ 36222http://kannada.oneindia.com/img/2009/04/26-yediyurappa2.jpg208259shobha karandlajeಕೋಕಾ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ /news/2009/05/08/karnataka-cabinet-approves-amendments-to-kcoca-act.htmlಬೆಂಗಳೂರು, ಮೇ. 8 : ಇತ್ತೀಚೆಗೆ ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಜಾರಿಗೆ ತರಲು ನಿರ್ಧರಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸರ್ವಾನುಮತದ ಒಪ್ಪಿಗೆ ದೊರೆತಿದ್ದು, ಕೋಕಾ ಕಾಯ್ದೆಯನ್ನು ಜಾರಿಗೆ ತರಲು ಶೀಘ್ರದಲ್ಲಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 36495http://kannada.oneindia.com/img/2009/05/08-shobha-karandlaje1e.jpg208259shobha karandlajeರಾಜ್ಯದ ಮೆಗಾ ರಸ್ತೆಗಳಿಗೆ ಟೋಲ್ ಶುಲ್ಕ ನಿಗದಿ/news/2009/05/23/karnataka-plans-to-develop-200-toll-roads.htmlಬೆಂಗಳೂರು, ಮೇ.23: ರಾಜ್ಯದಲ್ಲಿನ ಸುಮಾರು 200 ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳನ್ನು (ನಾಲ್ಕು ಹಾಗೂ ಎರಡು ಪಥದ ರಸ್ತೆ) ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ರಸ್ತೆಗಳನ್ನು ಬಳಸುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸಲು ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಇದರಂತೆ ನಾಲ್ಕು ಪಥದ ರಸ್ತೆಗಳಲ್ಲಿ ಸಂಚರಿಸುವ ಕಾರು, ಜೀಪು, ವ್ಯಾನ್ 36840http://kannada.oneindia.com/img/2009/05/23-karnatka-road2.jpg208259shobha karandlajeಕನ್ನಡ ಚಲನಚಿತ್ರ ಅಕಾಡೆಮಿ ಜೂನ್ 5ಕ್ಕೆ ಆರಂಭ/movies/headlines/2009/06/02-kannada-film-academy-to-start-function-june5.htmlಬೆಂಗಳೂರು, ಜೂ.2:ಕನ್ನಡ ಚಲನಚಿತ್ರರಂಗ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಅಕಾಡೆಮಿ 2009 ರ ಜೂನ್ 5 ರಿಂದ ಕಾರ್ಯಾರಂಭಗೊಳ್ಳಲಿದೆ. ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಅವರು ಅಕಾಡೆಮಿಗೆ ಚಾಲನೆ ನೀಡಲಿದ್ದಾರೆ. ಸಚಿವರುಗಳಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್. ಅಶೋಕ್, ಶೋಭಾ ಕರಂದ್ಲಾಜೆ ಹಾಗೂ ಚಿತ್ರರಂಗದ ಗಣ್ಯರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಚಲನಚಿತ್ರ ಅಕಾಡೆಮಿಯು ಸರ್ಕಾರ ಹಾಗೂ ಚಲನಚಿತ್ರ ಮಾಧ್ಯಮಗಳ 37048http://kannada.oneindia.com/img/2009/06/02-amrutha-mahotsava1e.jpg208259shobha karandlajeಮೈಸೂರು ಉಸ್ತುವಾರಿ ಒಲ್ಲೆ ಎಂದ ಶೋಭಾ /news/2009/06/07/minister-shobha-offers-to-step-down-mysore.htmlಬೆಂಗಳೂರು, ಜೂ. 7 : ಸರಕಾರದೊಳಗೆ ಎದ್ದಿರುವ ಆಂತರಿಕ ಭಿನ್ನಮತಕ್ಕೆ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಶೋಭಾ ಅವರ ಮಾತನ್ನು ನಿರಾಕರಿಸಿದ್ದು, ಶೋಭಾ ಅವರನ್ನೇ ಮುಂದುವರೆಸಿ ಶಾಸಕ ಎಸ್ ರಾಮದಾಸ್ ಸಿಎಂ 37176http://kannada.oneindia.com/img/2009/06/07-shobha-karandlaje3e.jpg525648district newsಜನಮತ ಪಡೆಯುವಲ್ಲಿ ಕಾಂಗ್ರೆಸ್ ವಿಫಲ : ಡಿಕೆಶಿ/cj/pasha/2009/0624-dk-shivakumar-accepts-congress-defeat.htmlಶಿವಮೊಗ್ಗ, ಜೂ. 24 : ಉಪಚುನಾವಣೆ ಹಾಗೂ ಸಂಸತ್ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಸಿದ್ಧರಿದ್ದರೂ ಸಹ ಕಾಂಗ್ರೆಸ್ ಪಕ್ಷ ಜನರ ಮತ ಹಾಕಿಸಿಕೊಳ್ಳುವಲ್ಲಿ ವಿಫಲಗೊಂಡಿರುವುದು ಸತ್ಯ. ಇದನ್ನು ನಾನು ಒಪ್ಪಿಕೊಳ್ಳಲು ಸಿದ್ಧ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಬುಧವಾರ ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 37559http://kannada.oneindia.com/img/2009/06/24-dkshi1.jpg525648district newsಸರಕಾರಿ ವಾಹನ ನಾಮಫಲಕ ಕನ್ನಡದಲ್ಲಿರಲಿ : ಚಂದ್ರು/cj/pasha/2009/0625-govt-vehicle-name-boards-must-in-kannada.htmlಶಿವಮೊಗ್ಗ, ಜೂ. 25 : ರಾಜ್ಯದಲ್ಲಿ ಸರ್ಕಾರಿ ಇಲಾಖೆಗಳಲ್ಲಿರುವ ಯಾವುದೇ ವಾಹನಗಳ ನಾಮಫಲಕ ಕನ್ನಡದಲ್ಲಿ ಕಡ್ಡಾಯವಾಗಿರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.ಗುರುವಾರ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆಗಳೇ ಆಗಿವೆ. ಕರ್ನಾಟಕ ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಆದರೆ, ನಮ್ಮ ಸಂಸ್ಕೃತಿ 37573http://kannada.oneindia.com/img/2009/06/25-chandru1.jpg525648district newsಭರವಸೆ ನೀಡಿದಂತೆ ಕೆಲಸ ಮಾಡಿದ್ದೇನೆ; ಬಿ.ವೈ.ರಾಘವೇಂದ್ರ/cj/pasha/2009/shimoga-not-too-happy-with-allocation.htmlಶಿವಮೊಗ್ಗ,ಜು.5: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಅಭಿವೃದ್ಧಿ ಯೋಜನೆಗಳಲ್ಲಿ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲು, ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ಈ ಬಜೆಟ್‌ನಲ್ಲಿ ಘೋಷಣೆಗೊಂಡಿದ್ದು, ಈ ಬಜೆಟ್ ಸಂಸದನಾದ ನನ್ನ ಮಟ್ಟಿಗೆ ಸಂತೋಷದಾಯಕವಾಗಿದೆ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಇಂದು ಬೆಳಿಗ್ಗೆ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 37789http://kannada.oneindia.com/img/2009/07/05-by-raghavendra1.jpg525648district newsಕನ್ನಡ ಗಂಗಾ ಯೋಜನೆಗೆ ಕರವೇ ವಿರೋಧ/news/2009/07/08/shivamogga-krv-protest-against-kannada-ganga.htmlಶಿವಮೊಗ್ಗ,ಜು.8: ಕನ್ನಡ ಗಂಗಾ ಯೋಜನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಇಂದು ನಗರಸಭೆ ಸದಸ್ಯರ ಸಭೆಗೆ ನುಗ್ಗಿ ಪ್ರತಿಭಟಿಸಿದ ಘಟನೆ ನಡೆಯಿತು. ಕನ್ನಡ ಗಂಗಾ ಯೋಜನೆಯಡಿ ವಾರದ 24 ಗಂಟೆಗಳು ನೀರು ಸರಬರಾಜು ಮಾಡುವ ನೆಪದಲ್ಲಿ ನಗರಸಭೆ ನಲ್ಲಿಗಳಿಗೆ ಮೀಟರ್ ಅಳವಡಿಸಿ, ಅವೈಜ್ಞಾನಿಕವಾಗಿ ಶುಲ್ಕಗಳನ್ನು ನಿಗಧಿಪಡಿಸಲು ಹೊರಟಿದೆ. ಈಗಾಗಲೇ ಮಾಸಿಕ ೬೦ರೂ.ಗಳನ್ನು 37853http://kannada.oneindia.com/img/2009/07/08-shivamogga-karave1.jpg525648district newsಭಾರೀ ಮಳೆಗೆ ತುಂಬಿ ಹರಿಯುತ್ತಿರುವ ತುಂಗಾ/cj/somanath/2009/0715-shivamogga-heavy-rain-tunga-overflowing.htmlಶಿವಮೊಗ್ಗ, ಜು. 15 : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ನಿನ್ನೆ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಎಲ್ಲಾ ಪ್ರಮುಖ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.ನಗರದಲ್ಲಿ ಹರಿಯುವ ತುಂಗಾ ನದಿಯು ತುಂಬಿ ಹರಿಯುತ್ತಿದ್ದು, ಅಪಾಯ ಮಟ್ಟ ತಲುಪಿದೆ. ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ತುಂಗಾ 37999http://kannada.oneindia.com/img/2009/07/15-shivamogga-tunga1.jpgnews"> ತಲಕಾಡು ಪಂಚಲಿಂಗ ದರ್ಶನಕ್ಕೆ ವ್ಯಾಪಕ ಸಿದ್ದತೆ | Talakadu | Panchalingadarshana | Religious tourism | Shobha Karandlaje | Mysore news - ತಲಕಾಡು ಪಂಚಲಿಂಗ ದರ್ಶನಕ್ಕೆ ವ್ಯಾಪಕ ಸಿದ್ದತೆ - Kannada Oneindia

ತಲಕಾಡು ಪಂಚಲಿಂಗ ದರ್ಶನಕ್ಕೆ ವ್ಯಾಪಕ ಸಿದ್ದತೆ

ಬೆಂಗಳೂರು, ಜುಲೈ 16 : ತಲಕಾಡು ಕ್ಷೇತ್ರದಲ್ಲಿ ನಡೆಯುವ ಪಂಚಲಿಂಗ ದರ್ಶನ ಮಹೋತ್ಸವು ಈ ಸಾರಿ ಮೂರು ವರ್ಷಗಳ ನಂತರ ಆಚರಿಸುವ ಸಂದರ್ಭ ಒದಗಿ ಬಂದಿದ್ದು, ಅದಕ್ಕೆ ವಿಶೇಷ ಮಹತ್ವವಿದೆ. ಈ ಬಾರಿಯ ಪಂಚಲಿಂಗ ದರ್ಶನವನ್ನು 2009ರ ನವೆಂಬರ್ 16ರಂದು ಹೆಚ್ಚು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕು.ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು ದೇವಸ್ಥಾನಗಳ ದುರಸ್ಥಿ ಕಾರ್ಯ, ಮೂಲಭೂತ ಸೌಲಭ್ಯ ಕಲ್ಪಿಸುವುದು ಹಾಗೂ ದೇವಸ್ಥಾನಗಳನ್ನು ಅಲಂಕರಿಸುವ ಕಡೆ ಹೆಚ್ಚಿನ ಗಮನಹರಿಸುವುದರ ಜೊತೆಗೆ ದರ್ಶನಕ್ಕಾಗಿ ಆಗಮಿಸುವ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದರು.

ದೇವಸ್ಥಾನಕ್ಕೆ ಹೋಗುವ ರಸ್ತೆಗಳ ಅಭಿವೃದ್ಧಿ, ಸ್ನಾನ ಮಾಡುವ ಸ್ಥಳಗಳಲ್ಲಿ ಬ್ಯಾರಿಕೇಡ್ ಅಥವಾ ಸರಪಳಿ ಅಳವಡಿಸುವುದು. ತಾತ್ಕಾಲಿಕ ಹಾಗೂ ಖಾಯಂ ಶೌಚಾಲಯಗಳನ್ನು ನಿರ್ಮಿಸುವುದು ಯಾತ್ರಾರ್ಥಿಗಳು ಉಳಿದುಕೊಳ್ಳಲು ಅನುಕೂಲವಾಗುವಂತೆ ವಸತಿ ಗೃಹ ನಿರ್ಮಾಣ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಔಟ್‌ಪೋಸ್ಟ್ ತೆರೆಯುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆ, ಪಂಚಲಿಂಗ ದರ್ಶನ ಕುರಿತು ಮಾಹಿತಿ ನೀಡಲು ಮೈಸೂರಿನಲ್ಲಿ 4 ಮಾಹಿತಿ ಕೇಂದ್ರಗಳನ್ನು ಹಾಗೂ ಬೆಂಗಳೂರಿನಲ್ಲಿ ಒಂದು ಮಾಹಿತಿ ಕೇಂದ್ರ ಪ್ರಾರಂಭಿಸುವಂತೆ ಸೂಚನೆ ನೀಡಿದ್ದಾರೆ.

ತಲಕಾಡಿನಲ್ಲಿ ಕಳೆದ ಸಾರಿ ನಡೆದ ಪಂಚಲಿಂಗ ದರ್ಶನಕ್ಕೆ ಸರ್ಕಾರ 21 ಕೋಟಿ ರೂ ಹಣ ಒದಗಿಸಿತ್ತು ಎಂದ ಸಚಿವರು ಈ ಸಾರಿ ಹಲವು ಇಲಾಖೆಗಳು ತಮಗೆ ಸಂಬಂಧಿಸಿದ ಕಾಮಗಾರಿಗಳನ್ನು ಮಾಡಲು ಮುಂದೆ ಬರಬೇಕು ಎಂದರು. ಇದೇ ಸಂದರ್ಭದಲ್ಲಿ ನಮ್ಮ ಮೂಲ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ 5 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಹಾಗೂ ಪಂಚಲಿಂಗ ದರ್ಶನದ ಬಗ್ಗೆ ರಾಜ್ಯಾದ್ಯಂತ ಹೆಚ್ಚು ಪ್ರಚಾರ ಮಾಡಲಾಗುವುದು ಎಂದು ಹೇಳಿದ ಸಚಿವರು ದರ್ಶನ ಸಂದರ್ಭದಲ್ಲಿ ನಡೆಯುವ ನೂಕುನುಗ್ಗಲು ಹಾಗೂ ಅನವಶ್ಯಕ ಗೊಂದಲಗಳಿಗೆ ಎಡೆಮಾಡಿಕೊಡದಂತೆ ಪೊಲೀಸ್ ಇಲಾಖಾ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.

ಟಿ. ನರಸೀಪುರದಲ್ಲಿ ಕಪಿಲಾ ನದಿಗೆ ಹೊಂದಿಕೊಂಡಿರುವ ಸೇತುವೆಯು ಶಿಥಿಲಗೊಂಡಿದ್ದು, ದುರಸ್ಥಿ ಕಾರ್ಯ ಪೂರ್ಣಗೊಳ್ಳುವವರೆಗೆ ಭಾರಿ ವಾಹನಗಳು ಹೆಚ್ಚಿನ ಸರಕು ಸಾಗಣೆ ಮಾಡದಂತೆ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಜಂಟಿಯಾಗಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು ಲೋಕೋಪಯೋಗಿ ಇಲಾಖೆಯು ಆ ಸ್ಥಳದಲ್ಲಿ ತೂಕ ಅಳತೆ ಮಾಡುವ ಯಂತ್ರ ಅಳವಡಿಸಬೇಕು ಎಂದು ಸೂಚಿಸಿದರು.

ಪಂಚಲಿಂಗ ದರ್ಶನ ನಡೆಯುವ ದೇವಸ್ಥಾನಗಳ ನಡುವೆ ಬರುವ ರಸ್ತೆಗಳನ್ನು ಶುದ್ಧಿಗೊಳಿಸಬೇಕು ಎಂದ ಸಚಿವರು ಒಟ್ಟಾರೆ ಈ ಬಾರಿಯ ಪಂಚಲಿಂಗ ದರ್ಶನ ಮಹೋತ್ಸವವು ಯಶಸ್ವಿಯಾಗುವಂತೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ವಿಶೇಷ ಕಾಳಜಿವಹಿಸಿ ಕೆಲಸಮಾಡಬೇಕು ಎಂದರು.

ಮೈಸೂರಿನ ಪ್ರಾದೇಶಿಕ ಆಯುಕ್ತರಾದ ಜಯಂತಿ, ಜಿಲ್ಲಾಧಿಕಾರಿಗಳಾದ ಮಣಿವಣ್ಣನ್, ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾಯಾದರ್ಶಿಗಳಾದ ಅಗವಾನೆ ಅವರು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಜ್ಯೋತಿರಾಮಲಿಂಗಂ ಅವರು ಮಂಡ್ಯ ಹಾಗೂ ಚಾಮರಾಜ ನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಜರಾಯಿ ಇಲಾಖಾ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇತರೆ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+