233589sessionನಾಳೆಯಿಂದ ಮೂರು ದಿನ ಅಧಿವೇಶನ/news/2009/07/08/karnataka-budget-session-set-to-be-stormy.htmlಬೆಂಗಳೂರು, ಜು. 8 : ಗುರುವಾರದಿಂದ ಮೂರು ದಿನಗಳ ಕಾಲ ಉಭಯ ಸದನದಲ್ಲಿ ಅಧಿವೇಶನ ಆರಂಭವಾಗಲಿದೆ. ರಾಜ್ಯ ಸರಕಾರದ ಆಡಳಿತದ ಕಾರ್ಯವೈಖರಿ, ವಿದ್ಯುತ್ ಸಮಸ್ಯೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ರಾಜ್ಯ ಸರಕಾರದ ವಿರುದ್ಧ ಕತ್ತಿ ಝಳಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತುದಿಗಾಲ ಮೇಲೆ ನಿಂತಿವೆ. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಬಿಜೆಪಿ, ಫಲಿತಾಂಶದ 37859http://kannada.oneindia.com/img/2009/07/08-siddaramaiah2.jpg233589sessionಅಧಿವೇಶನಗುಳುಂ ಮಾಡಿದ ಕ್ಯಾತಮಾರನಹಳ್ಳಿ /news/2009/07/09/yeddyurappa-promises-grand-mysuru-dasara.htmlಬೆಂಗಳೂರು, ಜು. 9 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೋಮುಗಲಭೆಯಂತಹ ಘಟನೆಗಳು ನಡೆದಿರುವುದು ತಮಗೆ ತೀವ್ರ ನೋವು ತಂದಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಷಾಧಿಸಿದರು. (ಗುರುವಾರ ಬೆಳಗ್ಗೆ ಯಡಿಯೂರಪ್ಪ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಸಂಜೆ ವೇಳೆಗೆ ಮತ್ತೆ ಮೈಸೂರು ಬೆಂಕಿಚಂಡಾಗಿ ಹೊತ್ತಿ ಉರಿಯತೊಡಗಿದೆ). ಅಧಿವೇಶನಕ್ಕೂ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು 37894http://kannada.oneindia.com/img/2009/07/09-siddaramaiah2.jpg233589sessionಮೈಸೂರು ಗಲಭೆ ಷಡ್ಯಂತ್ರ : ಯಡಿಯೂರಪ್ಪ/news/2009/07/10/yeddyurappa-reacts-on-mysuru-incident.htmlಬೆಂಗಳೂರು, ಜು. 10 : ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಯೊಂದು ವ್ಯವಸ್ಥಿತ ಸಂಚು. ಸರಕಾರಕ್ಕೆ ಮಸಿ ಬಳಿಯಲು ಕಾಣದ ಕೈಗಳು ಈ ಘಟನೆಯಲ್ಲಿ ಭಾರಿ ಷಡ್ಯಂತ್ರ ರೂಪಿಸಿವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನ ಪರಿಷತ್ ನಲ್ಲಿ ಮಾತನಾಡಿದರು. ರಾಜ್ಯದ ಕೋಮುಸೌಹಾರ್ದತೆ ಹಾಗೂ ಶಾಂತಿ ಕದಡಲು ಕೆಲ ವ್ಯಕ್ತಿಗಳು ಸಂಘಟನೆಗಳ ಹೆಸರಿನಲ್ಲಿ ಗಲಭೆಗೆ ಪ್ರಚೋದನೆ 37911http://kannada.oneindia.com/img/2009/07/10-yeddyurappa-new2.jpg233589sessionಅಧಿವೇಶನ : ಹಾಲು ಒಕ್ಕೂಟ ಸೂಪರ್ ಸೀಡ್ ಏಕೆ?/news/2009/07/10/session-jds-walkout-from-house.htmlಬೆಂಗಳೂರು, ಜು. 10 : ಮೈಸೂರಿನ ಕೋಮುಗಲಭೆ ಮೇಲ್ಮನೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿ ಕೋಲಾಹಲ ವಾತಾವರಣ ಸೃಷ್ಟಿಸಿ ಪ್ರತಿಪಕ್ಷದ ಸದಸ್ಯರು ನಿಲುವಳಿ ಸೂಚನೆಗೆ ಪಟ್ಟುಹಿಡಿದ ಪ್ರಸಂಗ ಜರುಗಿತು. ಸದನದ ಕಲಾಪ ಆರಂಭದಲ್ಲಿ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ ನಿಲುವಳಿ ಸೂಚನೆ ಮಂಡಿಸಿ ಸಮಸ್ಯೆ ಗಂಭೀರ ಸ್ವರೂಪವಾಗಿರುವುದರಿಂದ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.ಇದಕ್ಕೆ ಧ್ವನಿಗೂಡಿಸಿದ ಸದಸ್ಯ 37915http://kannada.oneindia.com/img/2009/07/10-jagadish-shetter1.jpg233589sessionಗೃಹ ಮಂಡಳಿ ಭಾರಿ ಅವ್ಯವಹಾರ : ಜೆಡಿಎಸ್ /news/2009/07/15/land-scam-kicks-up-dust-in-house.htmlಬೆಂಗಳೂರು, ಜು. 15 : ವಸತಿ ಯೋಜನೆಗಾಗಿ ಚಿಕ್ಕಬಳ್ಳಾಪುರ ಬಳಿ ಭೂಮಿ ಖರೀದಿಸುವ ಪ್ರಕ್ರಿಯೆಯಲ್ಲಿ ಕರ್ನಾಟಕ ಗೃಹ ಮಂಡಳಿ ಭಾರಿ ಭ್ರಷ್ಟಾಚಾರ ನಡೆಸಿದೆ ಎಂದು ಪ್ರತಿಪಪಕ್ಷದ ಸದಸ್ಯರು ಆರೋಪಿಸಿ ನಿಲುವಳಿ ಸೂಚನೆಗೆ ಪಟ್ಟು ಹಿಡಿದ ಪರಿಣಾಮ ವಿಧಾನಸಭೆಯಲ್ಲಿಂದು ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಚಿಕ್ಕಬಳ್ಳಾಪುರ ಮತ್ತು ಶೀಡ್ಲಘಟ್ಟ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಗೃಹ ಮಂಡಳಿ ಖರೀದಿಸಿರುವ 958 ಎಕರೆ 37986http://kannada.oneindia.com/img/2009/07/15-hd-revanna3e.jpg36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg109348siddaramaiahನೆರೆ ತೆರಿಗೆಗೆ ಸಿದ್ಧರಾಮಯ್ಯ ತೀವ್ರ ವಿರೋಧ/news/2009/10/14/siddu-tells-bsy-to-drop-idea-of-levying-taxes.htmlಮೈಸೂರು, ಅ. 14 : ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಹೊಸದಾಗಿ ಯಾವುದೇ ತೆರಿಗೆ ಹಾಕಬಾರದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಹೊಸದಾಗಿ ಹೆಚ್ಚುವರಿ ತೆರಿಗೆ ಹಾಕಿದರೆ ಮತ್ತಷ್ಟು ಬೆಲೆ ಏರಿಕೆಯಾಗಿ ಹಣ ದುಬ್ಬರಕ್ಕೆ ಕಾರಣಲಾಗುತ್ತಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು 39676http://kannada.oneindia.com/img/2009/10/14-siddaramaiah2.jpg109348siddaramaiahಮೈಸೂರಲ್ಲಿ ಕನಕ ಜಯಂತಿ ಆಚರಣೆ ವಿವರ/news/2009/11/04/saint-kanakadasa-jayanti-in-mysore.htmlಮೈಸೂರು, ನ. 4: ಮೈಸೂರು ಜಿಲ್ಲಾಡಳಿತವು ಸಂತ ಕನಕ ಜಯಂತ್ಯೋತ್ಸವ ಸಮಿತಿಯೊಂದಿಗೆ ನವೆಂಬರ್ 5ರಂದು ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತಿಯನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಬಿ.ವಿ. ಕಾರಂತ ರಂಗಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಆಚರಿಸುತ್ತಿದೆ.ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದಶಿವಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು 40040http://kannada.oneindia.com/img/2009/11/04-kanakadasa1.jpg109348siddaramaiahರೆಡ್ಡಿಗಳ ಗೆಲುವು, ಮತದಾರರನ ಸೋಲು:ಸಿದ್ದು/news/2009/11/17/siddu-slams-voters-for-electing-reddy-brothers.htmlಮೈಸೂರು, ನ.17: ದಿನನಿತ್ಯ ಕೋಟಿಗಟ್ಟಲೆ ಹಣ ಲೂಟಿಮಾಡುವ ಗಣಿ ಧಣಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ಜನತೆ ತಪ್ಪು ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕಸಿದ್ದರಾಮಯ್ಯ ವಿಷಾದಿಸಿದರು. ತಿ.ನರಸೀಪುರ ತಾಲೂಕಿನ ಮುಸುವಿಕೊಪ್ಪಲು ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಬಾರ್ಡ್ ಯೋಜನೆಯಡಿ 15.84 ಲಕ್ಷ ರು. ವೆಚ್ಚದಲ್ಲಿ ಕೊಠಡಿಗಳ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಸ್ವಾರ್ಥಕ್ಕಾಗಿ ರೆಡ್ಡಿಗಳು ಸೃಷ್ಟಿಸಿದ ಬಿಕ್ಕಟ್ಟಿನಿಂದ 40265http://kannada.oneindia.com/img/2009/11/17-siddaramaiah3.jpg109348siddaramaiahಓಎಂಸಿ ಗಣಿಗಾರಿಕೆಯನ್ನು ಸಿಬಿಐಗೆ ವಹಿಸಿ, ಸಿದ್ದು/news/2009/11/18/siddu-urges-govt-to-handover-omc-case-to-cbi.htmlಬೆಂಗಳೂರು, ನ. 18 : ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರಕಾರ ಪ್ರಕರಣವನ್ನು ತನಿಖೆಗೆ ವಹಿಸಿದೆ ರಾಜ್ಯಕ್ಕೂ ಕೂಡಾ ಇದರಿಂದ ಭಾರಿ ಅನ್ಯಾಯವಾಗಿದೆ. ಆದ್ದರಿಂದ ಈ ಕೂಡಲೇ ಓಎಂಸಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು 40287http://kannada.oneindia.com/img/2009/11/18-siddaramaiah2.jpg109348siddaramaiahಲಂಚ ಕೇಳಿದರೆ ಕಪಾಳಕ್ಕೆ ಹೊಡೆಯಿರಿ/news/2009/11/24/yeddyurappa-must-step-down-siddaramaiah.html(ನಂಜನಗೂಡು), ಮೈಸೂರು, ನ. 24 : ಬಡಜನರಿಗಾಗಿ ಜಾರಿಗೆ ತಂದಿರುವ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ರೈತರ ಕೆಲಸ ಕಾರ್ಯಗಳಿಗೆ ಲಂಚ ಕೇಳುವ ಅಧಿಕಾರಿಗಳಿಗೆ ಕಪಾಳಮೋಕ್ಷ ಮಾಡಿ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ. ರಾಂಪುರ, ದೊಡ್ಡಹೊಮ್ಮತಗಡೂರು ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನಾನು ಮುಖ್ಯಮಂತ್ರಿಯಾಗಿದ್ದರೆ 40379http://kannada.oneindia.com/img/2009/11/24-siddaramaiah2.jpgnews"> ಕೆಎಚ್ ಬಿ ಹಗರಣ : ಮುಗಿಯದ ರಗಳೆ | Session | Yeddyurappa | Siddaramaiah | HD Revanna | KHB scam | Governer HR Bhardwaj| ಕೆಎಚ್ ಬಿ ಹಗರಣ : ಮುಗಿಯದ ರಗಳೆ - Kannada Oneindia

ಕೆಎಚ್ ಬಿ ಹಗರಣ : ಮುಗಿಯದ ರಗಳೆ

HD Revanna
ಬೆಂಗಳೂರು, ಜು. 16 : ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಲ್ಲಿ ನಡೆದ ಕೋಟ್ಯಂತರ ರುಪಾಯಿ ಅವ್ಯವಹಾರ ಕುರಿತಂತೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸಬೇಕು ಎಂಬ ಪ್ರತಿಪಕ್ಷಗಳಿಂದ ಪಟ್ಟು. ಸರಕಾರ ಇದಕ್ಕೆ ನಕಾರ ವ್ಯಕ್ತಪಡಿಸಿದ್ದರಿಂದ ವಿಧಾನಸಭೆಯ ಇಂದಿನ ಕಲಾಪ ಬಹುತೇಕ ಇದೇ ರಗಳೆಯಲ್ಲೆ ಮುಗಿದು ಹೋಯಿತು. ಇನ್ನೂ ಮೇಲ್ಮನೆಯಲ್ಲಿ ಕೂಡಾ ಬೆಂಗಳೂರಿನಲ್ಲಿ ನಡೆಯುತ್ತಿರುವ ಒಂಟಿ ಮಹಿಳೆಯರ ಕೊಲೆಗಳು ಕುರಿತು ಪ್ರತಿಧ್ವನಿಸಿತು. ಕೊಲೆ, ದರೋಡೆ ಶಬ್ದಗಳದ್ದೆ ಭರಾಟೆ ಮುಗಿಲು ಮುಟ್ಟಿತ್ತು.

ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಗೃಹ ಮಂಡಳಿಯಲ್ಲಿ ಆಗಿರುವ ಹಗರಣದ ಬಗ್ಗೆ ಚರ್ಚೆ ನಡೆಸಿದರು. ಇದರಿಂದ ಸರಕಾರ ಮತ್ತಷ್ಟು ಮುಜಗರಕ್ಕೆ ಒಳಗಾಗುವ ಸಾಧ್ಯತೆ ಇದೆ. ಆಗ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳು ದಟ್ಟವಾಗಿದ್ದವು. ಆದರೆ, ಇದಕ್ಕೂ ಮುಂಚೆ ಸದನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮುಖ್ಯಕಾರ್ಯದರ್ಶಿ ಅವರಿಂದ ತನಿಖೆ ನಡೆಸುತ್ತೇವೆ ಎಂಬ ಹೇಳಿಕೆಯನ್ನು ಪ್ರತಿಪಕ್ಷಗಳು ಸಾರಾಸಗಟಾಗಿ ತಿರಸ್ಕರಿಸಿದವು.

ಗೃಹ ಮಂಡಳಿಯ ಪ್ರಸ್ತಾಪವಾಗಿ ಮೂರನೇ ದಿನವಾದ ಇಂದು ಕೂಡಾ 4ನೇ ಬಾರಿಗೆ ಸ್ಪೀಕರ್ ಜಗದೀಶ್ ಶೆಟ್ಟರ್ ಎರಡೂ ಬಣಗಳ ನಡುವೆ ಸಂಧಾನ ನಡೆಸಿದರಾದರೂ ಎರಡೂ ಕಡೆಯಿಂದ ಬಿಗಿ ನಿಲುವು ಸಡಿಲವಾಗದ ಕಾರಣ ಸಂಧಾನ ವಿಫಲವಾಯಿತು. ಬೆಳಗ್ಗೆ 11 ಗಂಟೆಗೆ ಸೇರಬೇಕಿದ್ದ ವಿಧಾನಸಭೆ ಮಧ್ಯಾಹ್ನ 1.05ಕ್ಕೆ ಸೇರಿತಾದರೂ ಪ್ರತಿಪಕ್ಷಗಳ ಪಟ್ಟುಬಿಡದೆ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ಕೇವಲ ಎರಡೇ ನಿಮಿಷದಲ್ಲಿ ಸದನದ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು. ಭೋಜನದ ನಂತರವೂ ಗೃಹ ಮಂಡಳಿಯ ಹಗರಣದಿಂದ ಪ್ರತಿಪಕ್ಷಗಳು ಹಿಂದೆ ಸರಿದಿರುವುದರಿಂದ ಇಂದಿನ ಕಲಾಪ ಕೂಡಾ ಹಗರಣದಲ್ಲಿ ಹೋಮವಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಬಳಿ ಸುಮಾರು 959 ಎಕರೆ ಭೂವ್ಯವಹಾರದಲ್ಲಿ ಅಕ್ರಮ ನಡೆದಿದೆ. ಇದರ ತನಿಖೆಯನ್ನು ಸ್ವಾಯತ್ತ ಸಂಸ್ಥೆಗಳಾದ ಸಿಬಿಐ ಅಥವಾ ಲೋಕಾಯುಕ್ತ ಇಲಾಖೆ ವಹಿಸಬೇಕು ಎನ್ನುವುದು ಪ್ರತಿಪಕ್ಷಗಳ ಕೂಗು.

ಮೇಲ್ಮನೆಯಲ್ಲಿ ಕೊಲೆ, ದರೋಡೆಗಳು

ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ನಡೆದ ಒಂಟಿ ಮಹಿಳೆಯರ ಕೊಲೆ, ಜೋಡಿ ಕೊಲೆ, ದರೋಡೆ ಪ್ರಕರಣಗಳು ಮೇಲ್ಮನೆಯಲ್ಲಿ ಗದ್ದಲ ಉಂಟು ಮಾಡಿದ್ದಲ್ಲದೇ, ಪ್ರತಿಪಕ್ಷಗಳು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನ ಪರಿಷತ್ ನಲ್ಲಿ ಜರುಗಿತು. ಆಡಳಿತ ಪಕ್ಷದ ವಿಮಲಾಗೌಡ ಕೇಳಿದ ಪ್ರಶ್ನೆ ಪ್ರತಿಪಕ್ಷಗಳಿಗೆ ರಾಮಬಾಣವಾಗಿ ಸರಕಾರದ ಮೇಲೆ ಮುಗಿಬೀಳಲು ಕಾರಣವಾಯಿತು.

ಪ್ರತಿಪಕ್ಷದ ಸದಸ್ಯರಾದ ಮಲ್ಲಾಜಮ್ಮ, ಮೋಟಮ್ಮ ಅವರು ಒಂಟಿ ಮಹಿಳೆ ಕೊಲೆ, ಜೋಡಿ ಕೊಲೆ, ದರೋಡೆ, ಅಪಹರಣ ಮತ್ತಿತರ ಘಟನೆಗಳು ನಿತ್ಯ ನಡೆಯುತ್ತಿವೆ. ಮಹಿಳೆಯರು ಭೀತಿಗೊಳಗಾಗಿದ್ದಾರೆ. ಇಂತ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರಕಾಶ್ ರಾಥೋಡ್, ಒಂದೇ ತಿಂಗಳಲ್ಲಿ 50 ಕೊಲೆಗಳಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂದು ಪ್ರಶ್ನಿಸಿದರು. ಕೇವಲ 22 ಗಂಟೆಯೊಳಗೆ 8 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಮಹಿಳೆಯರಿಗೆ ಮಂಗಳಸೂತ್ರಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ವಿಷಾಧಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ವಿ ಎಸ್ ಆಚಾರ್ಯ, ಕಳೆದ 13 ತಿಂಗಳ ಆಡಳಿತಾವಧಿಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಚಿನ್ನ, ಬೆಳ್ಳಿ ಒಡವೆ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿ ಕೋಟ್ಯಂತರ ರುಪಾಯಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ವಾಪಸ್ಸು ಮಾಡಿದ್ದೇವೆ ಎಂದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+