123434ನವದೆಹಲಿಹುಬ್ಬಳಿ -ಧಾರವಾಡ ಮಂದಿ ದೆಹಲಿಗೆ/news/2009/01/15/hubli-dharwad-city-corporation-committee-new-delhi.htmlಹುಬ್ಬಳ್ಳಿ, ಜ. 15 : ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಚೇರಮನ್ ರಾಮಣ್ಣ ಬಡಿಗೇರ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಇತ್ತೀಚೆಗೆ ನವದೆಹಲಿ ಭೇಟಿ ನೀಡಿ ದೆಹಲಿ ಮಹಾನಗರ ಪಾಲಿಕೆ ಮುಖ್ಯ ಇಂಜಿನಿಯರ್ ಪ್ರದೀಪ ಖಂಡೇಲ್ ವಾಲ್ ಅವರೊಂದಿಗೆ ನಗರಾಭಿವೃದ್ಧಿಗೆ ಕುರಿತಂತೆ ಚರ್ಚೆ ನಡೆಸಿದರು. (ದಟ್ಸ್ ಕನ್ನಡ ಸುದ್ದಿ ಚಿತ್ರ)34082http://kannada.oneindia.com/img/2009/01/15-hubli-dharwad-councillors.jpg123434ನವದೆಹಲಿಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ /news/2009/01/27/former-president-venkataraman-passes-away.htmlನವದೆಹಲಿ, ಜ. 27 : ಕಳೆದ ಅನೇಕ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಇಂದು ನಗರದ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. 34312http://kannada.oneindia.com/img/2009/01/27-r-venkataraman1e.jpg123434ನವದೆಹಲಿಚಂದ್ರಯಾನ ಪುಸ್ತಕ ಬಿಡುಗಡೆ ಮಾಡಿದ ಕಲಾಂ/literature/book/2009/0128-kalam-chandraayan-book-tr-shivaprasad.htmlನವದೆಹಲಿ, ಜ. 28 : ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಹೇಳಿದರು. ಟಿವಿ9ನ ನವದೆಹಲಿ ಪ್ರತಿನಿಧಿ ಶಿವಪ್ರಸಾದ್ ಬರೆದಿರುವ 'ಚಂದ್ರಯಾನ' ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.ಕಾನ್ಸಾಂಟಿನ್ ಕಿವುಡನಾಗಿದ್ದ. ಆದರೆ 34327http://kannada.oneindia.com/img/2009/01/28-chandrayaan-book1.jpg123434ನವದೆಹಲಿಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg123434ನವದೆಹಲಿಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpgnews"> ದಿಲ್ಲಿಯಲ್ಲಿ ಮತ್ತೊಂದು ಅವಘಡ : 6 ಸಾವು | Metro Bridge Collapse | New Delhi | Lady Shri ram College | Sreedharan | Shiela Dixit | ದಿಲ್ಲಿಯಲ್ಲಿ ಮತ್ತೊಂದು ಅವಘಡ : 6 ಸಾವು - Kannada Oneindia

ದಿಲ್ಲಿಯಲ್ಲಿ ಮತ್ತೊಂದು ಅವಘಡ : 6 ಸಾವು

DMRC accident
ನವದೆಹಲಿ, ಜು. 13 : ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಸೇತುವೆ ಕುಸಿದು ಭಾರಿ ಅವಘಡ ಸಂಭವಿಸಿದ ಬೆನ್ನಲ್ಲೇ ಇಂದು ದುರ್ಘಟನೆ ನಡೆದ ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಸುತ್ತಿದ್ದ ಸಮಯದಲ್ಲಿ ಕ್ರೇನ್ ಕುಸಿದು ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ನಿರ್ಮಾಣ ಹಂತದಲ್ಲಿ ನಡೆದ ದುರ್ಘಟನೆಯಲ್ಲಿ ಸಿಕ್ಕಿಕೊಂಡಿರುವ ವಾಹನ ಮತ್ತು ವಸ್ತುಗಳ ಹೊರತೆಗೆಯುವ ಕಾರ್ಯದಲ್ಲಿ ನಿರತವಾಗಿದ್ದ ಸಮಯದಲ್ಲಿ ಮೂರು ಕ್ರೇನ್ ಗಳು ಕುಸಿದು ಬಿದ್ದಿವೆ. ಈ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಆರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಐದು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ನಡೆದ ಘಟನೆಗೆ ಹೊಣೆ ಹೊತ್ತು ದೆಹಲಿ ಮೆಟ್ರೋ ಮುಖ್ಯಸ್ಥ ಶ್ರೀಧರನ್ ತಮ್ಮ ಹುದ್ದೆ ರಾಜೀರಾಮೆ ನೀಡುವುದಾಗಿ ಹೇಳಿದ್ದರು. ಆದರೆ, ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ರಾಜೀನಾಮೆಯನ್ನು ನಿರಾಕರಿಸಿದ್ದಾರೆ.

ಭಾನುವಾರ ನಡೆದ ದುರ್ಘಟನೆ

ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ರೈಲು ಸೇತುವೆ ಕುಸಿದ ಪರಿಣಾಮ, ಐದಕ್ಕೂ ಹೆಚ್ಚು ಜನರು ಸತ್ತಿದ್ದರು. ಸುಮಾರು 15 ಜನರಿಗೆ ತೀವ್ರ ಗಾಯಗೊಂಡಿದ್ದರು. ಭಾನುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಲಜ್ ಪತ್ ಪುರ ಬಳಿಯ ಲೇಡಿ ಶ್ರೀರಾಮ್ ಕಾಲೇಜಿನ ಬಳಿ ಇರುವ ನಿರ್ಮಾಣ ಹಂತದಮೆಟ್ರೋ ರೈಲು ಸೇತುವೆಯ ಒಂದು ಕಂಬ ಕುಸಿದು ಬಿತ್ತು. ಕಾಂಕ್ರೀಟ್ ಸ್ಲ್ಯಾಬ್ ಗಳು ನೆಲಕ್ಕಪ್ಪಳಿಸಿದವು. ಕಂಬ ನೆಲಕ್ಕುರಳಿದ ಪರಿಣಾಮದಿಂದ ನೀರು ಸರಬರಾಜಿನ ಪೈಪು ಒಡೆದು, ಸುತ್ತಮುತ್ತಲಿನ ಪ್ರದೇಶವೆಲ್ಲಾ ಜಲಾವೃತಗೊಂಡಿವೆ.

ಘಟನೆ ನಡೆದ ಸಂದರ್ಭದಲ್ಲಿ ಸುಮಾರು 25 ಜನ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಅವಶೇಷಗಳ ಅಡಿಯಲ್ಲಿ ಅಳಿದುಳಿದಿರುವ ವ್ಯಕ್ತಿಗಳನ್ನು ಬದುಕಿಸುವ ಕಾರ್ಯ ಸಾಗಿದೆ. ಗಾಯಾಳುಗಳನ್ನು ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+