99736karnatakaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg99736karnatakaಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ/recipe/shelf/2006/311006chilli_powder.htmlಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆ ವಿಧಾನ ಇಲ್ಲಿದೆ.ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ 6224http://kannada.oneindia.com/img/2009/07/14-redchillies1.jpg99736karnatakaಗೋಕಾಕ್‌ ಕನ್ನಡದ ಪೀಕಾಕ್‌/literature/jnanapeetha/2001/gokak.htmlಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂದವರು ಎಲ್ಲವೂ ಆಗಿದ್ದು ಎಲ್ಲಿಯೂ ನಿಲ್ಲದಂತಿದ್ದರು. *ಸತ್ಯವ್ರತ ಹೊಸಬೆಟ್ಟುವಿನಾಯಕ ಕೃಷ್ಣ ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕರು ಹುಬ್ಬೇರಿಸಿದ್ದುಂಟು. ವೈಎನ್ಕೆಯವರಂತೂ ಜ್ಞಾನವಿರುವುದು ಪೀಠದಲ್ಲಲ್ಲ , but at the other end ಎಂದು ಗೇಲಿ ಮಾಡಿದ್ದೂ ಉಂಟು. ಇದು ತನ್ನನ್ನು ಕುರಿತಾದ ತಮಾಷೆ 7766http://kannada.oneindia.com/img/2009/08/03-vk-gokak4.jpg99736karnatakaಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg99736karnatakaಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg37312ಮೈಸೂರುಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg37312ಮೈಸೂರುಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ/news/2009/01/04/yeddyurappa-helpline-crisis-management-mysore.htmlಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. 33868http://kannada.oneindia.com/img/2009/01/04-helpline-mysore.jpg37312ಮೈಸೂರುರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ/movies/music/2009/01/06-manomurthy-launches-swarathma-band-debut-album.htmlಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.ಸ್ವರಾತ್ಮ 33919http://kannada.oneindia.com/img/2009/01/06-swarathma-mano-murthy1.jpg37312ಮೈಸೂರುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg37312ಮೈಸೂರುಕಾಪನಹಳ್ಳಿ ಗವಿಮಠ ಸಂಭ್ರಮದ ಜಾತ್ರೆ/news/2009/02/11/gavimath-communal-harmony-kodihallli-pontiff.htmlಕೆ.ಆರ್.ಪೇಟೆ, ಫೆ. 11 : ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವವು ಸಡಗರ-ಸಂಭ್ರಮಗಳಿಂದ ನಡೆಯಿತು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧಘಟ್ಟ ಅರವಿಂದ್ ಸಿದ್ದಲಿಂಗೇಶ್ವರರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ರಥೋತ್ಸವ ನಂತರ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು ನಾಡಿನಲ್ಲಿ ನಡೆಯುತ್ತಿರುವ ರಥೋತ್ಸವಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 34586http://kannada.oneindia.com/img/2009/02/11-kapanahalli-gavimata.jpgnews"> ಪರ್ಯಾಯ ಶಕ್ತಿಯಾಗಿ ಜೈವಿಕ ಇಂಧನದ ಬಳಕೆ | Bio-diesel | Bio Fuel Task force | YB Ramakrishna | Bio seeds | Interview - ಪರ್ಯಾಯ ಶಕ್ತಿಯಾಗಿ ಜೈವಿಕ ಇಂಧನದ ಬಳಕೆ - Kannada Oneindia

ಪರ್ಯಾಯ ಶಕ್ತಿಯಾಗಿ ಜೈವಿಕ ಇಂಧನದ ಬಳಕೆ

YB Ramakrishna
ಆಧುನಿಕತೆಯೇ ಜೀವನ ಶೈಲಿಯಾಗುತ್ತಿರುವಾಗ ಪೆಟ್ರೋಲು ಡೀಸೆಲ್ಲು ಬಳಕೆ ದುಪ್ಪಟ್ಟು, ಮೂರ್ಪಟ್ಟಾಗುವುದು ಸ್ವಾಭಾವಿಕ. ದಿನೇದಿನೇ ಇಂಧನಕ್ಕೆ ಬೇಡಿಕೆ ಉಲ್ಬಣಿಸುತ್ತಿರುವಾಗ ನಾವು ಪರ್ಯಾಯಶಕ್ತಿ ಮೂಲಗಳನ್ನು ಸಮರ್ಥವಾಗಿ ದುಡಿಸಿಕೊಳ್ಳದೆ ವಿಧಿಯಿಲ್ಲ. ಜೈವಿಕ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಎಷ್ಟು ಪ್ರಗತಿ ಸಾಧಿಸಿದೆ? ಇನ್ನೆಷ್ಟು ಸಾಧಿಸಬೇಕು? ಬನ್ನಿ, ಜೈವಿಕ ಇಂಧನ ಮಂಡಳಿ ಅಧ್ಯಕ್ಷರೊಂದಿಗೆ ಮಾತಿಗಿಳಿಯೋಣ.

*ಎಂ ಬಾಬು, ಮೈಸೂರು

ಮೈಸೂರು, ಜು.10 : ವಿಶ್ವದೆಲ್ಲೆಡೆ ಪೆಟ್ರೋಲ್ ಡೀಸಲ್‌ಗಳಿಗೆ ಪರ್ಯಾಯ ಶಕ್ತಿಮೂಲಗಳ ಹುಡುಕುವಿಕೆ ಅವಿರತವಾಗಿ ನಡೆದಿದೆ. ಆದರೆ ಭಾರತದ ಬಹಳಷ್ಟು ಆದಾಯ ಆಮದು ಮಾಡಿಕೊಳ್ಳುತ್ತಿರುವ ಶಕ್ತಿಮೂಲಗಳಿಗೇ ವ್ಯಯವಾಗುತ್ತಿದೆ. ಇದನ್ನು ಕಡಿಮೆ ಮಾಡಲು ದೇಶದಲ್ಲಿ ಅವಿತರ ಪ್ರಯತ್ನಗಳು ನಡೆದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೂಡ ಪರ್ಯಾಯ ಶಕ್ತಿಗಮೂಲಗಳಿಗಾಗಿ ನಿರಂತರ ಹುಡುಕಾಟ ನಡೆಸಿವೆ.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 2008ರ ಸೆಪ್ಟೆಂಬರ್ ತಿಂಗಳಿನಲ್ಲಿ ಅಗತ್ಯ ಕಾರ್ಯಕ್ರಮ ಕೈಗೊಳ್ಳಲು ಹಾಗೂ ಅದರ ಅನುಷ್ಠಾನಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ಒಳಗು ಮಾಡಲು ಜೈವಿಕ ಕಾರ್ಯಪಡೆ ರಚಿಸಿತು. ಈ ಕಾರ್ಯಪಡೆಯ ಅಧ್ಯಕ್ಷರಾಗಿ ವೈ.ಬಿ. ರಾಮಕೃಷ್ಣ ಅವರನ್ನು ನೇಮಿಸಿತು. ಜುಲೈ 9ರಂದು ಮೈಸೂರು ವಾರ್ತಾ ಕಚೇರಿಗೆ ಭೇಟಿ ನೀಡಿದ್ದ ಜೈವಿಕ ಕಾರ್ಯಪಡೆ ಅಧ್ಯಕ್ಷರನ್ನು ಮಾತನಾಡಿಸಿದಾಗ ಕಾರ್ಯಪಡೆಯ ವಿವರಗಳು ಲಭ್ಯವಾದವು.

ರಾಜ್ಯ ಸರ್ಕಾರ ರಚಿಸಿರುವ ಜೈವಿಕ ಕಾರ್ಯಪಡೆಯ ಮೂಲ ಉದ್ದೇಶ ಜೈವಿಕ ಇಂಧನ ಕಾರ್ಯಕ್ರಮ ಅನುಷ್ಠಾನಗೊಳಿಸುವುದು. ಈ ಪೂರಕ ಶಕ್ತಿಮೂಲ ಉತ್ಪಾದನೆಗೆ ಜನರ ಸಹಭಾಗಿತ್ವ, ಜೈವಿಕ ಇಂಧನ ಮೌಲ್ಯವರ್ಧನೆ, ಜೈವಿಕ ಬೀಜ ಉತ್ಪಾದನೆ ಮುಂತಾದವುಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದೇ ಆಗಿದೆ.

ಜೈವಿಕ ಇಂಧನಗಳಾದ ಎಥೆನಾಲ್ ಹಾಗೂ ಬಯೋ ಡೀಸೆಲ್‌ಗಳು ಈಗಾಗಲೇ ದೇಶದಲ್ಲೇ ಪ್ರಥಮಬಾರಿಗೆ ರಾಜ್ಯದಲ್ಲಿ ಶೇ.5ರಷ್ಟು ಬಳಕೆಯಲ್ಲಿದೆ. ರಾಜ್ಯದಲ್ಲಿ ಬಳಸುತ್ತಿರುವ ಪೆಟ್ರೋಲ್ ನಲ್ಲಿ ಇದನ್ನು ಬಳಕೆ ಮಾಡುತ್ತಿದ್ದು ಕಾರ್ಯಪಡೆ ಈ ವರ್ಷಾಂತ್ಯಕ್ಕೆ ಇದನ್ನು ಶೇ.10ಕ್ಕೇರಿಸುವ ಗುರಿ ಹೊಂದಿದೆ. ಬರುವ ದಿನಗಳಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಈಗಿರುವ ಸಸ್ಯ ಮೂಲಗಳ ಜೊತೆಗೆ ಕೃಷಿ ತ್ಯಾಜ್ಯ ಹಾಗೂ ನಗರ ತ್ಯಾಜ್ಯಗಳೆರಡನ್ನು ಜೈವಿಕ ಇಂಧನ ಉತ್ಪಾದಿಸುವ ಅಗತ್ಯ ತಂತ್ರಜ್ಞಾನದ ಬಗ್ಗೆ ಕಾರ್ಯ ರೂಪಿಸಲಾಗುತ್ತಿದೆ ಎನ್ನುತ್ತಾರೆ ರಾಮಕೃಷ್ಣ.

ಕಾರ್ಯಪಡೆ ರಚಿತವಾದ 1 ವರ್ಷದಿಂದೀಚೆಗೆ ರಾಜ್ಯದ 6000 ಹೆಕ್ಟೇರ್‌ನಷ್ಟು ಸರ್ಕಾರದ ಪಾಳುಬಿದ್ದ ಜಮೀನಿನಲ್ಲಿ ಜೈವಿಕ ಇಂಧನ ಉತ್ಪಾದನೆ ಅಗತ್ಯವಾದ ಬೀಜೋತ್ಪಾದನೆಗೆ ಗಿಡ ನೆಡುವ ಕಾರ್ಯ ಯಶಸ್ವಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯವನ್ನು ಸರ್ಕಾರಿ ಹಾಗೂ ಕೃಷಿಯೇತರ ಖಾಸಗಿ ಭೂಮಿ ಸೇರಿ ಒಂದು ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಬೇಕೆಂಬುದು ಕಾರ್ಯಪಡೆಯ ಗುರಿಯಾಗಿದೆ. ಅಲ್ಲಿ ಸುಮಾರು 30 ಲಕ್ಷ ಸಸಿಗಳನ್ನು ನೆಡುವ ಗುರಿ ಇದೆ. ಈಗಾಗಲೇ ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಎನ್ಆರ್ಈಜಿ ಕಾರ್ಯಕ್ರಮದಡಿ ಈ ಕಾರ್ಯ ಕೈಗೊಳ್ಳಲಾಗಿದೆ.

ಪ್ರತಿ ಸಸಿ ಬೆಳೆಯಲು 22 ರೂಪಾಯಿ ಹಾಗೂ ಸಸಿಯನ್ನು ಉತ್ತಮವಾಗಿ ಬೆಳೆಸಿ ಒಂದು ವರ್ಷ ಪಾಲನೆ ಮಾಡಿದರೆ ಆರು ರೂಪಾಯಿಗಳ ನೆರವು ನೀಡಲಾಗುತ್ತದೆ.ಈಗ ರಾಜ್ಯದಲ್ಲಿ ಬಯೋಡೀಸೆಲ್ ಬಳಕೆ ನಡೆದಿದೆ. ರಸ್ತೆ ಸಾರಿಗೆ ಸಂಸ್ಥೆಯ 2000 ವಾಹನಗಳಲ್ಲಿ ಇದನ್ನು ಇಂಧನ ಮೂಲವಾಗಿ (ಶೇ7.7 ನಷ್ಟನ್ನು ಡೀಸಲ್ ಜೊತೆ) ಬಳಕೆ ಮಾಡುತ್ತಿದ್ದು ಸಾರಿಗೆ ಸಂಸ್ಥೆಯ ಎಲ್ಲ ವಾಹನಗಳಲ್ಲೂ ಬಳಕೆ ಮಾಡುವ ಉದ್ದೇಶವಿದೆ. ಜೈವಿಕ ಇಂಧನ ಬಳಕೆ ಯಶಸ್ವಿಗೊಳಿಸಲು ಹಾಸನ ಜಿಲ್ಲೆ ಮಡೆನೂರು ಬಳಿ ಜೈವಿಕ ಇಂಧನ ಉದ್ಯಾನ ರೂಪಿಸಲಾಗಿದೆ.

ಜೈವಿಕ ಬೀಜ ಉತ್ಪಾದನೆ, ಇಂಧನ ಉತ್ಪಾದನೆ, ಬಳಕೆ, ಮಾರುಕಟ್ಟೆ, ತಾಂತ್ರಿಕತೆ ಮುಂತಾದವುಗಳಿಗಾಗಿ ಕೆ ಎಂ ಎಫ್ ಮಾದರಿಯಲ್ಲಿ ಸಂಘಟನೆ ರೂಪಿಸುವ ಯತ್ನ ನಡೆದಿದೆ. ಹಾಸನ ಜಿಲ್ಲೆ 23 ಗ್ರಾಮಗಳಲ್ಲಿ ಸುಮಾರು 350 ಸಹಕಾರ ಸಂಘಗಳು ರಚನೆಗೊಂಡಿವೆ. ಅವುಗಳ ಅಧಿಕೃತ ನೋಂದಣಿ ಇನ್ನೂ ಆಗಬೇಕಿದೆ. ಕಾಲಕ್ಕೆ ತಕ್ಕಂತೆ ಪರ್ಯಾಯ ಇಂಧನ ಉತ್ಪಾದನೆಗೆ ಹೊಂಗೆ, ಬೇವು, ಹಿಪ್ಪೆ, ಜತ್ರೋಪ ಇತ್ಯಾದಿಗಳನ್ನು ಬೆಳೆಯಬಹುದಾಗಿದೆ ಎಂದು ರಾಮಕೃಷ್ಣ ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ 5.75 ಲಕ್ಷ ಟನ್ ಹೊಂಗೆ ಬೀಜ ಉತ್ಪಾದನೆ ಆಗುತ್ತಿದೆ. ಕಾರ್ಯಪಡೆ ಜೈವಿಕ ಶಕ್ತಿ ಉತ್ಪಾದನೆ ಹಾಗೂ ಬಳಕೆಯ ಯಶಸ್ವಿ ಅನುಷ್ಠಾನಕ್ಕೆ ಜೈವಿಕ ಇಂಧನ ಮಂಡಳಿ ರಚನೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಜೈವಿಕ ಕಾರ್ಯಪಡೆ ಅಧ್ಯಕ್ಷ ವೈ ಬಿ ರಾಮಕೃಷ್ಣ ತಿಳಿಸಿದರು.ಜೈವಿಕ ಕಾರ್ಯಪಡೆ ಕಚೇರಿಯು ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ವೀದಿಯ ಬಹುಮಹಡಿ ಕಟ್ಟಡದ 5ನೇ ಹಂತದಲ್ಲಿರುವ 6ನೇ ಕೊಠಡಿಯಲ್ಲಿದೆ.

(ಮೂಲ : ಕರ್ನಾಟಕ ವಾರ್ತಾ ಇಲಾಖೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+