ಪ್ರತಿಭಟನಾಕಾರರ ಆಕ್ರೋಶಕ್ಕೆ ಬ್ಯಾಂಕಿನ ಗಾಜು ಪುಡಿಪುಡಿ

ಪ್ರತಿಭಟನೆಯಲ್ಲಿ ಕೆಲವು ಕಿಡಿಗೇಡಿಗಳ ಆಕ್ರೋಶಕ್ಕೆ ಬ್ಯಾಂಕಿನ ಕಿಟಕಿಗಾಜುಗಳು ಪುಡಿಪುಡಿಯಾದ ಘಟನೆಯೂ ಜರುಗಿತು. ಇಷ್ಟೆಲ್ಲಾ ಘಟನೆ ಜರುಗಲು ಕಾರಣ ಡಿಸಿಸಿ ಬ್ಯಾಂಕಿನ ನಿರ್ದೇಶಕರುಗಳ ನೇಮಕಕ್ಕೆ ಚುನಾವಣೆ ನಡೆಯಲಿದ್ದು, ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಮರಿಯಪ್ಪನವರು ಸ್ಪರ್ಧಿಸಬೇಕಿತ್ತು. ಆದರೆ, ಕಾರ್ಯದರ್ಶಿಯ ಬೇಜವಾಬ್ದಾರಿತನದಿಂದ ಸಕಾಲಕ್ಕೆ ಬ್ಯಾಂಕಿನ ಕ್ಲೀಯರೆನ್ಸ್ ಸರ್ಟಿಫಿಕೇಟ್ ನೀಡದಿದ್ದ ಕಾರಣ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಜೊತೆಗೆ, ಬ್ಯಾಂಕಿನ 9000ದಷ್ಟು ಷೇರುದಾರರಿಗೆ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಈ ಕೃತ್ಯ ನಡೆಯಲು ಕಾಣದ ಕೈ, ರಾಜಕೀಯ ಹಸ್ತಕ್ಷೇಪದ ಕುತಂತ್ರ ನಡೆದಿದೆ. ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮವನ್ನು ಉಲ್ಲಂಘಿಸಿದಂತಾಗಿದೆ. ಜಿಲ್ಲಾ ಸಹಕಾರಿ ನಿಬಂಧಕರು ಚುನಾವಣಾಧಿಕಾರಿಯಾಗಿರುವವರು ಕೂಡಲೇ ಮಧ್ಯ ಪ್ರವೇಶಿಸಿ ಈ ಕೃತ್ಯಕ್ಕೆ ಕಾರಣವಾಗಿರುವ ಕಾರ್ಯದರ್ಶಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮರಿಯಪ್ಪ ಮಾತನಾಡಿ, ಈ ಎಲ್ಲಾ ಘಟನೆಗಳಿಗೆ ರಾಜಕೀಯ ದುರುದ್ದೇಶವಿದ್ದು, ಇದರಿಂದಾಗಿಯೇ ಕ್ಲೀಯರೆನ್ಸ್ ಸರ್ಟಿಫಿಕೇಟ್ ನೀಡದೆ ಅಪರಾಧವನ್ನು ಎಸಗಿದ್ದಾರೆ. ಹೀಗಾಗಿ ಷೇರುದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆಂದು ತಿಳಿಸಿದರಲ್ಲದೆ, ಬ್ಯಾಂಕಿನ ಹಿತ ಕಾಪಾಡಲು ಹಾಗೂ ಲಾಭದಿಂದ ಮುನ್ನಡೆಯುವ ದೃಷ್ಟಿಯಿಂದ ಕಾರ್ಯದರ್ಶಿಯ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಬ್ಯಾಂಕಿನ ಅಧ್ಯಕ್ಷರಾದ ಎಸ್.ವಿ.ತಿಮ್ಮಯ್ಯ ಮನವಿಯನ್ನು ಸ್ವೀಕರಿಸಿ, ಜಿಲ್ಲಾ ಸಹಕಾರಿ ನಿಬಂಧಕರಿಗೆ ಮನವಿಯನ್ನು ಕಳುಹಿಸಲಾಗುತ್ತದೆ. ತುರ್ತು ಸಭೆಯನ್ನು ಕರೆದು, ಆಗಿರುವ ಘಟನೆಯ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದೆಂದು ಆಶ್ವಾಸನೆ ನೀಡಿದರು. ಆದರೆ, ಪ್ರತಿಭಟನಾಕಾರರು ಬ್ಯಾಂಕಿನ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಕನ್ನಡ ಸೈನ್ಯ ನಗರಾಧ್ಯಕ್ಷ ಎಸ್.ಕೆ. ಮನೋಜ್ ಕುಮಾರ್, ವಜ್ರೇಶ್ವರಿ ವಿನಾಯಕ ಸಮಿತಿ ಅಧ್ಯಕ್ಷ ಕೆ. ರಂಗನಾಥ್, ಮಾಜಿ ನಗರಸಭಾ ಅಧ್ಯಕ್ಷ ಪ್ರಭಾಕರ ಗೌಡ, ಮರಿಯಪ್ಪ, ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ, ಪಿ.ಸಿ. ರವಿ, ಷೇರುದಾರರಾದ ಎ.ಹೆಚ್.ಸುನೀಲ್, ರಂಗಪ್ಪ, ಸದಾಶಿವಮೂರ್ತಿ, ಈಶ್ವರಪ್ಪ, ಜಿ.ನಾಗರಾಜ್, ಶ್ರೀನಿವಾಸ್ ಹಲವರು ಉಪಸ್ಥಿತರಿದ್ದರು.











Click it and Unblock the Notifications