ಬೆಂಗಳೂರಿಗೆ ಇನ್ನಷ್ಟು ಕಾವೇರಿ ನೀರು: ಸಿಎಂ

ಜಯನಗರದಲ್ಲಿ ಜಲಮಂಡಳಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಳೆ ನೀರು ಕೊಯ್ಲು ಮಾದರಿ ಉದ್ಯಾನಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು. ಪ್ರಸ್ತುತ ಕಾವೇರಿಯಿಂದ ಪೂರೈಕೆಯಾಗುತ್ತಿರುವ ನೀರು ಸಾಕಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ನೀರಿನ ಅಗತ್ಯವಿದೆ ಎಂದರು.
ರಾಜ್ಯದ ಎಲ್ಲ ನಗರಗಳ ಅಭಿವೃದ್ಧಿಗೆ 7376 ಕೋಟಿ ರುಪಾಯಿ ನೆರವು ಒದಗಿಸಲಾಗಿದೆ. ಬೆಂಗಳೂರು ಮಗಾನಗರ ಪಾಲಿಕೆಗೆ 500 ಕೋಟಿ ರುಪಾಯಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 800 ಕೋಟಿ ರುಪಾಯಿ, ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 104 ಕೋಟಿ ರುಪಾಯಿ, ಕೊಳತೆ ನೀರು ಶುದ್ಧೀಕರಣಕ್ಕೆ 100 ಕೋಟಿ ರುಪಾಯಿ, ಕೊಳಗೇರಿಗಳಲ್ಲಿ 50 ಮನೆಗೆ ಉಚಿತವಾಗಿ ನೀರು ಪೂರೈಸಲು 350 ಕೋಟಿ ರುಪಾಯಿ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications