ಮನಮೋಹನ್ ಸಿಂಗ್ ಇಂದು ರಾಷ್ಟ್ರಪತಿ ಭೇಟಿ

ಯುಪಿಎ ಅಂಗಪಕ್ಷಗಳಲ್ಲಿ 262 ಸ್ಥಾನಗಳಿವೆ. ಸರಕಾರ ರಚಿಸಲು ಬೇಕಿರುವುದು ಕೇವಲ 10 ಸ್ಥಾನಗಳು ಮಾತ್ರ. ಜೆಡಿಎಸ್ ನ ಮೂರು, ಅಸ್ಸಾಂ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್, ಬೋಡೋಲ್ಯಾಂಡ್ ಡೆಮಾಕ್ರಟಿಕ್ ಫ್ರಂಟ್ ನ ತಲಾ ಒಂದೊಂದು ಸಂಸದರು ಯುಪಿಎ ಬೆಂಬಲ ನೀಡಿದ್ದಾರೆ. ಅಲ್ಲದೇ 6 ಮಂದಿ ಪಕ್ಷೇತರ ಸಂಸದರು ಯುಪಿಎ ಸರಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲಿಗೆ ಸರಕಾರ ರಚಿಸಲು ಬೇಕಿರುವ ಅಗತ್ಯ ಮ್ಯಾಜಿಕ್ ಸಂಖ್ಯೆ 272 ದಾಟಿದಂತಾಯಿತು.
ಇದಲ್ಲದೇ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಲಾಲು ನೇತೃತ್ವದ ಆರ್ ಜೆಡಿ ಪಕ್ಷಗಳು ಸರಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ರಾಷ್ಟ್ರಪತಿಗಳಿಗೆ ಪತ್ರವನ್ನು ಸಲ್ಲಿಸಿವೆ. ಯುಪಿಎ ಸರಕಾರಕ್ಕೆ ಒಟ್ಟು 318 ಸಂಸದರ ಸಿಕ್ಕಂತಾಗಿದೆ. ಶುಕ್ರವಾರ ಮನಮೋಹನ್ ಸಿಂಗ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 2 ಕ್ಕೆ ಹೊಸ ಸರಕಾರದ ಮೊದಲ ಅಧಿವೇಶನ ನಡೆಯುವ ಸಾಧ್ಯತೆಯಿದೆ.
(ಏಜನ್ಸೀಸ್)












Click it and Unblock the Notifications