ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಪಟ್ಟಕ್ಕೆ ಸಿಂಗ್ ಸೂಕ್ತ ವ್ಯಕ್ತಿ : ರಾಹುಲ್

By Staff
|
Google Oneindia Kannada News

Singh is the best candidate for PM : Rahul
ನವದೆಹಲಿ, ಮೇ 3 : ಪ್ರಧಾನಿ ಪಟ್ಟವನ್ನು ಕಾಂಗ್ರೆಸ್ ನ ಯುವನಾಯಕರಿಗೆ ಬಿಟ್ಟುಕೊಡಲು ಸಿದ್ಧರಿರುವುದಾಗಿ ಹೇಳಿದ ಬೆನ್ನ ಹಿಂದೆಯೇ ಪ್ರಧಾನಿ ಪಟ್ಟಕ್ಕೆ ಡಾ. ಮನಮೋಹನ ಸಿಂಗ್ ಅವರೇ ಸೂಕ್ತ ಮತ್ತು ಅತ್ಯುತ್ತಮ ಅಭ್ಯರ್ಥಿ ಎಂದು ಹೇಳಿರುವ ರಾಹುಲ್ ಗಾಂಧಿ ಗೊಂದಲ ಶಮನಕ್ಕೆ ಮುಂದಾಗಿದ್ದಾರೆ.

ಡಾ. ಮನಮೋಹನ ಸಿಂಗ್ ಅವರು ಪ್ರಧಾನಿ ಗದ್ದುಗೆಗೆ ಕಾಂಗ್ರೆಸ್ ಪಕ್ಷದ ಸರ್ವಾನುಮತದ ಅಭ್ಯರ್ಥಿಯಾಗಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಒಮ್ಮತದಿಂದಿದೆ ಎಂದು ರಾಹುಲ್ ಹೇಳಿದ್ದಾರೆ.

ಟಿವಿ ಚಾನಲ್ ಒಂದಕ್ಕೆ ಶನಿವಾರ ನೀಡಿದ ಸಂದರ್ಶನದಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರಲ್ಲಿ ಪ್ರಧಾನಿಯಾಗುವ ಎಲ್ಲ ಅರ್ಹತೆಯಿದೆ. ಮುಂದೆ ಯುವನೇತಾರರಿಗೆ ಪ್ರಧಾನಿ ಪಟ್ಟ ಬಿಟ್ಟುಕೊಡಲೇಬೇಕಾಗುತ್ತದೆ ಎಂದು ಮನಮೋಹನ ಸಿಂಗ್ ಅವರು ಹೇಳಿ ಕಾಂಗ್ರೆಸ್ ಪಾಳಯದಲ್ಲಿಯೇ ಗೊಂದಲವೇಳುವಂತೆ ಮಾಡಿದ್ದರು.

ಪ್ರಧಾನಿ ಪಟ್ಟಕ್ಕೆ ಯಾರು ಮುಂದಿನ ಉತ್ತರಾಧಿಕಾರಿ ಎಂಬ ಪ್ರಶ್ನೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಅಡ್ವಾಣಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದರೆ, ತೃತೀಯ ರಂಗದ ಮಾಯಾವತಿ ತೃತೀಯ ರಂಗದ ಪರ ತಾವೇ ಅಭ್ಯರ್ಥಿಯೆಂದು ಸ್ವಯಂಸಾರಿಕೊಂಡಿದ್ದಾರೆ. ನೀತಿಶ್ ಕುಮಾರ್ ತಾವೂ ಕಣದಲ್ಲಿರುವುದಾಗಿ ಘೋಷಿಸಿಕೊಂಡಿದ್ದಾರೆ. ನಾಲ್ಕನೇ ರಂಗದ ಮುಲಾಯಂ ಸಿಂಗ್ ತಮ್ಮ ಇರುವನ್ನು ಸ್ಪಷ್ಟಪಡಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X