ಜೈಲಿಗೆ ಹೋಗಲು ಸಿದ್ಧ : ವರುಣ್ ಗಾಂಧಿ

ರೈತರು ಮತ್ತು ಬಡವರ ಪರ ನಾನು ನಿರಂತರವಾಗಿ ಹೋರಾಟ ನಡೆಸುವೆ. ಜೊತೆಗೆ ದೇಶದೊಳಗೆ ಇದ್ದು ದೇಶದ್ರೋಹಿ ಕೃತ್ಯ ಎಸಗುತ್ತಿರುವವರ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುತ್ತಿದೆ. ದೇಶದ ಸಮಗ್ರತೆ, ಏಕತೆಗೆ ಹಗಳಿರುಳು ಶ್ರಮಿಸುವುದಾಗಿ ವರುಣ್ ಭರವಸೆ ನೀಡಿದರು. ವರುಣ್ ಗಾಂಧಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ತಾಯಿ ಮನೇಕಾ ಗಾಂಧಿ ಜೊತೆಯಲ್ಲಿದ್ದರು. ನಾಮಪತ್ರಕ್ಕೂ ಮುನ್ನ ಬಹಿರಂಗ ಮೆರವಣಿಗೆ ನಡೆಸಲು ಪಿಲಿಭಿತ್ ಜಿಲ್ಲಾಧಿಕಾರಿಗಳು ಅವಕಾಶ ನಿರಾಕರಿಸಿದರು.
ಕಳೆದ ತಿಂಗಳು ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. ವರುಣ್ ಗಾಂಧಿ ಸುಮಾರು 20 ದಿನಗಳ ಕಾಲ ಜೈಲು ಅನುಭವಿಸಿದ್ದು, ಪೆರೋಲ್ ಮೂಲಕ ಬಿಡುಗಡೆಯಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಏಪ್ರಿಲ್ 21 ರಂದು ನಾಮಪತ್ರ












Click it and Unblock the Notifications