ಏ. 20ರಿಂದ ವರುಣ್ ಪ್ರಚಾರ ಆರಂಭ

ಗುರುವಾರ ಸಂಜೆ ಸುಮಾರು 6.30ಕ್ಕೆ ಇಟಾ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾದ ವರುಣ್ ಗಾಂಧಿ ಅವರನ್ನು ಸ್ವಾಗತಿಸಲು ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ವರುಣ್ ಗಾಂಧಿ ಪರ ಜೈಕಾರ ಮುಗಿಲು ಮುಟ್ಟಿತ್ತು. ಸಾವಿರಾರು ಸಂಖ್ಯೆಯ ಯುವಕರ ಗುಂಪು ತಮ್ಮ ನೆಚ್ಚಿನ ನಾಯಕನ ಬಿಡುಗಡೆಯ ಮಹತ್ವದ ಗಳಿಗೆಗೆ ಕಾದು ಕುಳಿತಿದ್ದರು. ವರುಣ್ ಗಾಂಧಿ ಜಿಂದಾಬಾದ್, ಮನೇಕಾ ಗಾಂಧಿ ಜಿಂದಾಬಾದ್ ಎಂಬ ಕಾರ್ಯಕರ್ತರ ಘೋಷಣೆಗಳು ರಾತ್ರಿವರೆಗೂ ಮುಂದುವರೆದಿತ್ತು. ಬಿಡುಗಡೆ ನಂತರ ವರುಣ್ ಗಾಂಧಿ ಮತ್ತು ಮನೇಕಾ ಗಾಂಧಿ ನವದೆಹಲಿಯತ್ತ ಪ್ರಯಾಣ ಬೆಳಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications