ಹಳೆಯ ರಾಗ ಹಾಡಿದ ಕಾಂಗ್ರೆಸ್ ಪ್ರಣಾಳಿಕೆ

ನವದೆಹಲಿ. ಮಾ. 24 : 2009 ರ ದೇಶದಲ್ಲಿ ನಡೆಯುತ್ತಿರುವ ಲೋಕಸಭೆಯ ಮಹಾಸಮರಕ್ಕೆ ಕಾಂಗ್ರೆಸ್ ಪಕ್ಷ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಉಂಟು ಮಾಡಿರುವ ಆರ್ಥಿಕ ಬಿಕ್ಕಟ್ಟಿಗೆ ಸೂಕ್ತ ಮಾರ್ಗೋಪಾಯಗಳನ್ನು ಕಂಡು ಹಿಡಿಯುವ ಕಡೆಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆ ಮುಖ್ಯಾಂಶಗಳು

* ಭಯೋತ್ಪಾದನೆ ನಿಗ್ರಹಕ್ಕೆ ಆದ್ಯತೆ.
* ಆರ್ಥಿಕ ಹಿಂಜರಿತ ತಡೆಯುವತ್ತ ಗಮನ.
* 2004ರಲ್ಲಿ ನೀಡಿದ್ದ ಅಷ್ಟೂ ಭರವಸೆಗಳು ಈಡೇರಿಕೆ.
* ಪೊಲೀಸ್ ಬಲವರ್ಧನೆಗೆ ವಿಶೇಷ ಕ್ರಮ.
* ರಾಷ್ಟ್ರೀಯ ಆಹಾರ ಭದ್ರತೆಗೆ ಕಾಯ್ದೆ ಜಾರಿ.
* ರೈತ ಕುಟುಂಬಗಳಿಗೆ ವಿಶೇಷ ಯೋಜನೆ.
* ಗ್ರಾಮ ಪಂಚಾಯಿತಿಗಳ ಬಲವರ್ಧನಗೆ ಕ್ರಮ.
* ಭಾರತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ.
* ಸಾಮಾನ್ಯ ನಾಗರಿಕ ಕಾರ್ಯಕ್ರಮಗಳ ಮುಂದುವರಿಕೆ.
* ಉದ್ಯೋಗ ಖಾತ್ರಿ ಯೋಜನೆ ಮುಂದುವರಿಕೆ.
* ರಕ್ಷಣಾ ಪಡೆಯ ಕುಟುಂಬಕ್ಕೆ ವಿಶೇಷ ಯೋಜನೆ.
* ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ.
* ನಗರಾಡಳಿತಗಳಿಗೆ ವಿಶೇಷ ರೂಪ.
* ನಿರುದ್ಯೋಗ, ಮಹಿಳಾ ಮೀಸಲಿಗೆ ಹೆಚ್ಚಿನ ಆದ್ಯತೆ.
* ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು.
* ಎಲ್ಲರಿಗೂ ಆರೋಗ್ಯ ಭದ್ರತೆ.
* ದೇಶದ ಎಲ್ಲಾ ಗ್ರಾಮಗಳಿಗೂ ಬ್ರಾಡ್ ಬ್ಯಾಂಡ್.
* ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+