ಕ್ಷಮೆ ಕೇಳಲು ಸಾಧ್ಯವಿಲ್ಲ, ವರುಣ್ ಗಾಂಧಿ

Varun Gandhi
ನವದೆಹಲಿ, ಮಾ. 18 : ಅಲ್ಪಸಂಖ್ಯಾತರ ಮೇಲೆ ಅವಹೇಳನಕಾರಿ ಮಾತುಗಳನ್ನಾಡಿರುವ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ತಮ್ಮ ಮೇಲಿರುವ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಗಾಂಧಿ ಮನೆತನದವನು, ನಾನೊಬ್ಬ ಅಪ್ಪಟ ಹಿಂದೂ, ನಿಷ್ಠಾವಂತ ಭಾರತೀಯ, ತಪ್ಪು ಮಾಡದ ನಾನು ಯಾವ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನಾನು, ಪ್ರಚಾರಕ ಕಾರ್ಯದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿರುವೆ. ಅದರಲ್ಲಿ ಅಲ್ಪಸಂಖ್ಯಾತರಿಗೆ ಅವಹೇಳನಕಾರಿ ಇಲ್ಲವೇ ಪ್ರಚೋದನಕಾರಿಯಾದ ಹೇಳಿಕೆ ನೀಡಿಲ್ಲ. ಆದರೆ, ನನ್ನ ಭಾಷಣದ ಸಿಡಿಯನ್ನು ತಿರುಚಲಾಗಿದೆ. ಸಿಡಿಯಲ್ಲಿರುವ ಧ್ವನಿ ನನ್ನದಲ್ಲ. ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ರಾಜಕೀಯ ದಾಳಕ್ಕೆ ಬಲಿಯಾಗಿದ್ದು, ನನ್ನನ್ನು ಮೂಲೆಗುಂಪು ಮಾಡಲು ಕೆಲ ನಾಯಕರು ತೆರೆಮರೆಯಲ್ಲಿ ಭಾರಿ ಪಿತೂರಿ ನಡೆಸಿದ್ದಾರೆ ವರುಣ್ ಗಾಂಧಿ ಆರೋಪಿಸಿದರು.

ವರುಣ್ ಗಾಂಧಿ ಪಿಲಿಭಿತ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಮೇಲೆ ಕೇಂದ್ರ ಚುನಾವಣೆ ಅವರು ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಕ್ಷಮೆ ಕೇಳುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಕೂಡಾ ವರುಣ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಕ್ಷಮೆ ಕೋರಲು ಒತ್ತಾಯಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+