ಚುನಾವಣೆಯಲ್ಲಿ ಸ್ಪರ್ಧಿಸಲು ಕೃಷ್ಣ ನಿರಾಸಕ್ತಿ

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಅವರೇ ಎಂದೇ ಹೇಳಲಾಗುತ್ತಿದ್ದರೂ ಅವರಿನ್ನೂ ಗೊಂದಲವನ್ನೇ ಉಳಿದಿದ್ದು, ನಿರ್ಧಾರವನ್ನು ಹೈಕಮಾಂಡ್ ಗೆ ಬಿಟ್ಟಿದ್ದಾರೆ. ಆದರೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಅಂತರಾತ್ಮ ಹೇಳುತ್ತಿದೆ, ಸ್ಪರ್ಧಿಸುವುದು ಬೇಡ ಎಂದು. ಆದರೆ, ಕಾರ್ಯಕರ್ತರು, ಮುಖಂಡರು ನಿಲ್ಲುವಂತೆ ಒತ್ತಾಯಿಸಿದ್ದಾರೆ. ಹೈಕಮಾಂಡ್ ಸೂಚಿಸಿದರೆ ಮಾತ್ರ ಸ್ಪರ್ಧಿಸುವೆ ಎಂದರು.
ಬೆಂಗಳೂರು ದಕ್ಷಿಣದಲ್ಲಿ ನಿಲ್ಲಬೇಕು ಎಂದಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕಾಂಗ್ರೆಸ್ ನಿಂದ ಯಾರೇ ನಿಂತರೂ ಗೆಲ್ಲಬಹುದು. ನಾನೀಗಾಗಲೇ ರಾಜ್ಯಸಭೆ ಸದಸ್ಯ, ವೈಯಕ್ತಿಕವಾಗಿ ನನಗೆ ಸ್ಪರ್ಧಿಸಲು ಇಷ್ಟವಿಲ್ಲ. ನನ್ನ ಸ್ಪರ್ಧೆ ಬಗ್ಗೆ ಚರ್ಚೆಯಾಗಿದ್ದರೂ ಅಂತಿಮವಾಗಿಲ್ಲ ಎಂದು ಕೃಷ್ಣ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications